ವಾಷಿಂಗ್ಟನ್: ಸೆಪ್ಟೆಂಬರ್ನಲ್ಲಿ ಆರಂಭವಾಗಬೇಕಿದ್ದ ಜಾಗತಿಕ ಹಿಂದೂ ವಿಸರ್ಜನಾ ಸಮ್ಮೇಳನದ ಆರಂಭಕ್ಕೂ ಮೊದಲೇ ವಿವಾದದಿಂದ ಸುದ್ದಿಯಾಗುತ್ತಿದೆ. ಇದೊಂದು ಹಿಂದೂ ವಿರೋಧಿ ಸಮ್ಮೇಳನವಾಗಿದೆ ಎಂದು ಅಮೆರಿಕ ರಾಜ್ಯ ಸೆನೆಟರ್ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಈ ಸಮ್ಮೇಳನ ಆಯೋಜನೆಗೆ ಅವಕಾಶ ನೀಡಬಾರದು ಎಂದಿದ್ದು, ಅಮೆರಿಕ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ ಅಂತಾನೂ ಹೇಳಿದ್ದಾರೆ.
ಈ ಸಮ್ಮೇಳನವು ಅಮೆರಿಕದಲ್ಲಿರುವ ಹಿಂದೂಗಳ ಮೇಲಿನ ದಾಳಿಯನ್ನ ಪ್ರತಿನಿಧಿಸುತ್ತದೆ. ನಾವು ಯಾವಾಗಲೂ ಈ ಹಿಂದೂ ಫೋಬಿಯಾದ ವಿರುದ್ಧ ಬಲವಾಗಿ ನಿಲ್ಲುತ್ತೇವೆ ಎಂದು ರಾಜ್ಯ ಸೆನೆಟರ್ ನೀರಜ್ ಆ್ಯಂಟನಿ ಹೇಳಿದ್ದಾರೆ. ಹೀಗಾಗಿ ನಾನು ಈ ಜಾಗತಿಕ ಹಿಂದೂ ವಿಸರ್ಜನಾ ಸಮ್ಮೇಳನವನ್ನು ವಿರೋಧಿಸುತ್ತಿದ್ದೇನೆ ಎಂದಿದ್ದಾರೆ. ಆ್ಯಂಟನಿಯೂ ಓಡಿಯೋ ರಾಜ್ಯದ ಮೊದಲ ಹಿಂದೂ ಸೆನೆಟರ್ ಹಾಗೂ ಅತೀ ಕಿರಿಯ ಸೆನೆಟರ್ ಆಗಿದ್ದಾರೆ.
ಇದೇ ಸೆಪ್ಟೆಂಬರ್ 10ರಿಂದ 12ರಿಂದ ಜಾಗತಿಕ ಹಿಂದೂ ವಿಸರ್ಜನಾ ಸಮ್ಮೇಳನ ನಡೆಸಲು ನಿರ್ಧರಿಸಲಾಗಿತ್ತು. ವರ್ಚುಯಲ್ ಮೂಲಕ ಸಮ್ಮೇಳನ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಮ್ಮೇಳನ ಬೆಂಬಲಕ್ಕಾಗಿ ಹಲವು ವಿಶ್ವವಿದ್ಯಾಲಯಗಳು ಮುಂದೆ ಬಂದಿದ್ದರೆ ಇನ್ನೂ ಕೆಲ ವಿವಿಗಳು ವಿರೋಧಿಸಿವೆ.
ಅಲ್ಲದೇ ಈ ಸಮ್ಮೇಳನದಲ್ಲಿ ಹಲವು ಪ್ರತಿಷ್ಠಿತ ವಿವಿಗಳ ಲೋಗೊ ಬಳಸಿದ್ದಕ್ಕೂ ವಿವಾದ ಹುಟ್ಟಿಕೊಂಡಿದೆ. ಇದರಲ್ಲಿ ಮುಖ್ಯವಾಗಿ ರಟ್ಜರ್ಸ್ ವಿಶ್ವವಿದ್ಯಾಲಯದ ಲೋಗೊವನ್ನು ನಮ್ ಗಮನಕ್ಕೆ ತರದೆ ಬಳಸಲಾಗಿದೆ ಎಂದು ವಿವಿಯ ಅಧ್ಯಕ್ಷ ಜೊನಾಥನ್ ಹೊಲ್ಲೊವೇ ಹೇಳಿದ್ದಾರೆ. ಈ ಕುರಿತಂತೆ ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ(CoHNA) 3,50,000ಕ್ಕೂ ಹೆಚ್ಚು ಇಮೇಲ್‌ಗಳ ಕಳುಹಿಸಿದ್ದು, ಸಮ್ಮೇಳನ ಬೆಂಬಲಿಸದಂತೆ ಆಗ್ರಹಿಸಿದೆ.
ಸೆಪ್ಟೆಂಬರ್ 10ರಿಂದ ಆರಂಭವಾಗುತ್ತಿರುವ ಸಮ್ಮೇಳನದಲ್ಲಿ ಭಾರತದ ಖ್ಯಾತನಾಮರು ಭಾಗಿಯಾಗಲಿದ್ದಾರೆ.
ಓದಿ: ಆಫ್ಘನ್ ನೆಲದಲ್ಲಿ ನಾವು ಜಯ ದಾಖಲಿಸಿದ್ದೇವೆ.. ರಾಷ್ಟ್ರವನ್ನುದ್ದೇಶಿಸಿ ಭಾಷಣದ ವೇಳೆ ಬೈಡನ್ ಘೋಷಣೆ