ETV Bharat / international

ಕೋವಿಡ್ ಲಾಕ್‌ಡೌನ್​ನಿಂದ ವಾಯು ಗುಣಮಟ್ಟದಲ್ಲಿ ಸುಧಾರಣೆ: ವಿಶ್ವಸಂಸ್ಥೆ

author img

By

Published : Sep 3, 2021, 8:49 PM IST

ವಾಯು ಮಾಲಿನ್ಯ, ವಿಶೇಷವಾಗಿ ಸಣ್ಣ ಕಣಗಳನ್ನು ಒಳಗೊಂಡಿದ್ದು, ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ಪ್ರತಿ ವರ್ಷ ಲಕ್ಷಾಂತರ ಸಾವುಗಳಿಗೆ ಕಾರಣವಾಗಿದೆ. ಕೊರೊನಾ ಸಾಂಕ್ರಾಮಿಕ ಲಾಕ್‌ಡೌನ್‌ ಮತ್ತು ಪ್ರಯಾಣದ ನಿರ್ಬಂಧಗಳಿಂದ ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದು, ಮಾಲಿನ್ಯದ ಕುಸಿತಗೊಂಡಿದೆ ಎಂದು ವಿಶ್ವಸಂಸ್ಥೆ ಶುಕ್ರವಾರ ಹೇಳಿದೆ.

ಕೋವಿಡ್ ಲಾಕ್‌ಡೌನ್​ನಿಂದ ವಾಯು ಗುಣಮಟ್ಟದಲ್ಲಿ ಸುಧಾರಣೆ

ಜಿನೀವಾ: ಕೊರೊನಾ ಸಾಂಕ್ರಾಮಿಕ ಲಾಕ್‌ಡೌನ್‌ ಮತ್ತು ಪ್ರಯಾಣದ ನಿರ್ಬಂಧಗಳಿಂದ ವಾಯು ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದ್ದು, ಮಾಲಿನ್ಯದ ಕುಸಿತಗೊಂಡಿದೆ ಎಂದು ವಿಶ್ವಸಂಸ್ಥೆ ಶುಕ್ರವಾರ ಹೇಳಿದೆ.

ವಿಶ್ವಸಂಸ್ಥೆಯ ವಿಶ್ವ ಹವಾಮಾನ ವಿಭಾಗದ (ಡಬ್ಲ್ಯುಎಂಒ) ಹೊಸ ವರದಿಯ ಪ್ರಕಾರ, ಕಳೆದ ವರ್ಷ ಕೋವಿಡ್-19 ನಿರ್ಬಂಧಗಳು ಹಲವಾರು ಸ್ಥಳಗಳಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಗಾಳಿಯ ಗುಣಮಟ್ಟವನ್ನು ಸುಧಾರಿಸಿವೆ.

ಆದರೆ, ಕೋವಿಡ್ ಲಾಕ್​ಡೌನ್​ ಮತ್ತು ವಿಮಾನಯಾನ ನಿರ್ಬಂಧ ಮಾಲಿನ್ಯ ತಡೆಯ ದೀರ್ಘಾವಧಿಯ ಉಪಾಯವಲ್ಲ. ಇದು ತಾತ್ಕಾಲಿಕ ಸ್ಥಳೀಯ ಸುಧಾರಣೆಗೆ ಕಾರಣವಾಯಿತು ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.

ವಾಯು ಮಾಲಿನ್ಯ, ವಿಶೇಷವಾಗಿ ಸಣ್ಣ ಕಣಗಳನ್ನು ಒಳಗೊಂಡಿದ್ದು, ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ಪ್ರತಿ ವರ್ಷ ಲಕ್ಷಾಂತರ ಸಾವುಗಳಿಗೆ ಕಾರಣವಾಗಿದೆ. ಡಬ್ಲ್ಯೂಎಂಒ ವರದಿಯು ಪ್ರಪಂಚದಾದ್ಯಂತದ ಹತ್ತಾರು ನಗರಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರಮುಖ ವಾಯು ಮಾಲಿನ್ಯಕಾರಕಗಳು ಹೇಗೆ ವರ್ತಿಸುತ್ತವೆ ಎಂಬುದರ ಅಧ್ಯಯನವನ್ನು ಆಧರಿಸಿದೆ.

ವಿಶ್ಲೇಷಣೆಯು, 2015-2019ರ ಅದೇ ಅವಧಿಗಳಿಗೆ ಹೋಲಿಸಿದರೆ ಪೂರ್ಣ ಲಾಕ್‌ಡೌನ್ ಸಮಯದಲ್ಲಿ ಸಣ್ಣ ಕಣಗಳ ಸಾಂದ್ರತೆಯಲ್ಲಿ 40 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ತೋರಿಸಿದೆ. ಲಾಕ್‌ಡೌನ್‌ ನಂತರ ಹೊರಸೂಸುವಿಕೆಯು ಮತ್ತೆ ಹೆಚ್ಚಾದಾಗ ಗುಣಮಟ್ಟವು ಮತ್ತೊಮ್ಮೆ ಹದಗೆಟ್ಟಿದ್ದರೂ, ಇದು ಸಾಮಾನ್ಯವಾಗಿ ಗಾಳಿಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದರ್ಥ.

ಇದನ್ನೂ ಓದಿ: ಇಡಾ ಚಂಡಮಾರುತದ ಆರ್ಭಟಕ್ಕೆ ನಲುಗಿದ ಅಮೆರಿಕ.. ಕನಿಷ್ಠ 45 ಮಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.