ETV Bharat / international

ಕಿಲ್ಲರ್​ ಕೊರೊನಾ: ನಾಲ್ಕೇ ತಿಂಗಳಲ್ಲಿ ಅಮೆರಿಕಾದ ಲಕ್ಷಕ್ಕೂ ಅಧಿಕ ಮಂದಿ ಬಲಿ! - covid 19

ನಾಲ್ಕು ತಿಂಗಳ ಹಿಂದೆ ಮೊದಲ ಕೊರೊನಾ ಕೇಸ್​ ಪತ್ತೆಯಾಗಿದ್ದ ಅಮೆರಿಕಾದಲ್ಲಿ ಇದೀಗ ಈ ಮಹಾಮಾರಿ ಸೋಂಕಿಗೆ ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.17 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.

covid 19
ಅಮೆರಿಕಾದಲ್ಲಿ ಲಕ್ಷಕ್ಕೂ ಅಧಿಕ ಬಲಿ ಪಡೆದ ಕಿಲ್ಲರ್​ ಕೊರೊನಾ
author img

By

Published : May 28, 2020, 12:54 PM IST

Updated : May 28, 2020, 1:03 PM IST

ವಾಷಿಂಗ್ಟನ್​: ಪ್ರಪಂಚದಲ್ಲೇ ಕೋವಿಡ್​-19 ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕಾದಲ್ಲಿ ಸೋಂಕಿಗೆ ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.

ನಾಲ್ಕು ತಿಂಗಳ ಹಿಂದೆ ಮೊದಲ ಕೇಸ್​ ಪತ್ತೆಯಾಗಿದ್ದ ಅಮೆರಿಕಾದಲ್ಲಿ ಇದೀಗ ಸೋಂಕಿತರ ಸಂಖ್ಯೆ ಬರೋಬ್ಬರಿ 17,45,803ಕ್ಕೆ ಏರಿಕೆಯಾಗಿದೆ. 1,02,107 ಸೋಂಕಿತರು ಸಾವನ್ನಪ್ಪಿದ್ದಾರೆ. ಕೊರೊನಾಗೆ ಲಸಿಕೆ ಕಂಡುಹಿಡಿದ ಮೇಲೂ ಸಂಪೂರ್ಣವಾಗಿ ವೈರಸ್​ ನಾಶವಾಗುವುದಿಲ್ಲ ಎಂದು ತಜ್ಞರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಮುಂದೊಂದು ದಿನ, ಈ ವೈರಸ್ ಸೋಂಕಿಗೊಳಗಾದವರು ಅಥವಾ ಸಾವನ್ನಪ್ಪಿದವರ ಬಗ್ಗೆ ಎಲ್ಲರಿಗೂ ತಿಳಿದು ಬರುತ್ತದೆ ಎಂದು ಮಿನೆಸೋಟ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗ ಸಂಶೋಧನಾ ಹಾಗೂ ನೀತಿ ನಿರೂಪಣಾ ಕೇಂದ್ರದ ನಿರ್ದೇಶಕ ಮೈಕೆಲ್ ಟಿ ಓಸ್ಟೆರ್‍ಹೋಂ ವಾಷಿಂಗ್ಟನ್ ಪೋಸ್ಟ್​​ಗೆ ತಿಳಿಸಿದ್ದಾರೆ.

Last Updated : May 28, 2020, 1:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.