ಸಾವೊ ಪಾಲೊ: ಬ್ರೆಜಿಲ್ನಲ್ಲಿ ಕೊರೊನಾ ಮಹಾಮಾರಿ ಮರಣಮೃದಂಗ ಬಾರಿಸುತ್ತಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಈ ದೇಶದ ಜನರು ಕೊರೊನಾ ಅಟ್ಟಹಾಸಕ್ಕೆ ನಲುಗಿದ್ದಾರೆ.
ಮಂಗಳವಾರ 3,251 ಜನ ಕೊರೊನಾದಿಂದ ಮೃತಪಟ್ಟಿದ್ದರು. ಆದ್ರೆ ಬುಧವಾರವೂ ಸಹ 2,009 ಜನ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಬ್ರೆಜಿಲ್ನ ಆರೋಗ್ಯ ಇಲಾಖೆ ತಿಳಿಸಿದೆ.
ಈಗಾಗಲೇ ಬ್ರೆಜಿಲ್ನಲ್ಲಿ ಕೊರೊನಾ ಸಾವಿನ ಪ್ರಕರಣಗಳು 3,00,000ಕ್ಕೆ ತಲುಪಿದೆ. ಈ ಮೂಲಕ ವಿಶ್ವದಲ್ಲಿ ಕೊರೊನಾದಿಂದ ಸಾವನ್ನಪ್ಪಿದ ಪಟ್ಟಿಯಲ್ಲಿ ಈ ದೇಶ ಎರಡನೇ ಸ್ಥಾನಕ್ಕೇರಿದೆ. ಡಿಸೆಂಬರ್ 14, 2020ರಲ್ಲಿ ಈ ರೀತಿಯ ಸಾವಿನ ಸಂಖ್ಯೆ ಅಮೆರಿಕದಲ್ಲಿತ್ತು.
ಕೇವಲ 75 ದಿನಗಳಲ್ಲಿ ಬ್ರೆಜಿಲ್ 1,00,000 ಸಾವುಗಳನ್ನು ಕಂಡಿದೆ. ರಾಜಕೀಯ ಸಮನ್ವಯದ ಕೊರತೆ, ಹೊಸ ರೂಪಾಂತರಗಳು ಹೆಚ್ಚು ಸುಲಭವಾಗಿ ಹರಡುತ್ತಿರುವುದು ಮತ್ತು ದೇಶದ ಅನೇಕ ಭಾಗಗಳಲ್ಲಿ ಆರೋಗ್ಯ ಪ್ರೋಟೋಕಾಲ್‌ಗಳನ್ನು ಕಡೆಗಣಿಸುತ್ತಿರುವುದಕ್ಕೆ ಈ ರೀತಿ ಕೊರೊನಾ ಉಲ್ಬಣಗೊಳ್ಳುತ್ತಿದೆ ಎಂದು ಸ್ಪೈಕ್ ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.