ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಹಾಗೂ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಜನವರಿ 20ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಸಮಾರಂಭದ ಅಂಗವಾಗಿ ಅನಿವಾಸಿ ಭಾರತೀಯರು ಸಾವಿರಾರು ಕೋಲಂ ಟೈಲ್ಗಳನ್ನು ಕ್ಯಾಪಿಟಲ್ ಮುಂದೆ ಜೋಡಿಸುವ ಮುಖಾಂತರ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಇಂಡಿಯಾಸ್ಪೋರಾ ಪೋರಂ ಕೋಲಂ ಟೈಲ್ಸ್ಗಳನ್ನು ಜೋಡಿಸಿರುವ ಫೋಟೋಗಳನ್ನು ಟ್ವೀಟ್ ಮೂಲಕ ಹಂಚಿಕೊಂಡಿದೆ. ಕೋಲಂ ಮುಂದಿನ ದಿನಗಳು ಸಂಭ್ರಮದಿಂದ ಕೂಡಿರಲು, ಕಷ್ಟಗಳನ್ನು ನಿವಾರಿಸಲು ಕೋಲಂ ರಚಿಸುತ್ತಾರೆ ಎಂದು ಉಲ್ಲೇಖಿಸಿದೆ.
-
Some beauty after the chaos: in front of the U.S. Capitol Thursday, thousands of kolam tiles are being made to welcome @JoeBiden @KamalaHarris later this month.
— Indiaspora (@IndiasporaForum) January 8, 2021 " class="align-text-top noRightClick twitterSection" data="
Many believe kolams can help heal divides and welcome what’s next. #2021kolam @2021Kolam pic.twitter.com/ec17xADRKy
">Some beauty after the chaos: in front of the U.S. Capitol Thursday, thousands of kolam tiles are being made to welcome @JoeBiden @KamalaHarris later this month.
— Indiaspora (@IndiasporaForum) January 8, 2021
Many believe kolams can help heal divides and welcome what’s next. #2021kolam @2021Kolam pic.twitter.com/ec17xADRKySome beauty after the chaos: in front of the U.S. Capitol Thursday, thousands of kolam tiles are being made to welcome @JoeBiden @KamalaHarris later this month.
— Indiaspora (@IndiasporaForum) January 8, 2021
Many believe kolams can help heal divides and welcome what’s next. #2021kolam @2021Kolam pic.twitter.com/ec17xADRKy
ಏನಿದು ಕೋಲಂ? : ಕೋಲಂ, ಭಾರತೀಯ ರಂಗೋಲಿಯ ವಿಭಿನ್ನ ಪ್ರಕಾರ. ಅದರಲ್ಲೂ ಹೆಚ್ಚಾಗಿ ತಮಿಳುನಾಡಿನಲ್ಲಿ ಕಂಡು ಬರುತ್ತದೆ. ಚುಕ್ಕೆಗಳನ್ನು ಸೇರಿಸುವ ಮುಖಾಂತರ ಸುಂದರ ರಚನೆಗಳನ್ನು ರಚಿಸಲಾಗುತ್ತದೆ. ಇದನ್ನು ಮನೆಯ ಮುಂದೆ ರಚಿಸುವುದರಿಂದ ಸಂತೋಷ ಹೆಚ್ಚಾಗಿ, ನೆಮ್ಮದಿ ಆವರಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಇದನ್ನೂ ಓದಿ: ಒಂದು ಕೋಟಿ ರೂಪಾಯಿ ಲಂಚ ಪಡೆದ ಆರೋಪ: ರೈಲ್ವೆ ಅಧಿಕಾರಿ ಸೆರೆ
ಸಾಂಪ್ರದಾಯಿಕವಾಗಿ ಅಕ್ಕಿಯ ಪುಡಿಯಿಂದ ಕೋಲಂಗಳನ್ನು ರಚಿಸಲಾಗುತ್ತದೆ. ಆದರೆ, ಇತ್ತೀಚೆಗೆ ಸ್ವಲ್ಪ ಮಾರ್ಪಾಡಿನೊಂದಿಗೆ ಪರಿಸರ ಸ್ನೇಹಿ ಸಾಮಗ್ರಿಗಳನ್ನು ಬಳಸಿ ಕೋಲಂಗಳನ್ನು ರಚಿಸಲಾಗುತ್ತದೆ.
ಕೋಲಂನ ಚುಕ್ಕೆಗಳನ್ನು ಕಷ್ಟಗಳೆಂದೂ, ಅವುಗಳನ್ನು ಒಂದಕ್ಕೊಂದು ಸೇರಿಸಿ ಸುಂದರ ರಂಗೋಲಿ ರಚಿಸುವುದನ್ನು ಕಷ್ಟಗಳನ್ನು ದಾಟಿ ಸುಖದತ್ತ ಹೆಜ್ಜೆ ಇಡುವುದನ್ನು ಸೂಚಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ.