ರಾಜ್ಯ ರಾಜಕಾರಣದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ನಡುವಿನ, ಮನಸ್ತಾಪಗಳು ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ.
ಈ ಹಿನ್ನೆಲೆ ಸುಮಲತಾ ಸುಪುತ್ರ ಅಭಿಷೇಕ್ ಅಂಬರೀಶ್ ಖಡಕ್ ಆಗಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯಗೆ ಸರಿಯಾಗಿ ಟಾಂಗ್ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರೋ ಅಭಿಷೇಕ್, ಸುಮಲತಾ ಅಂಬರೀಶ್ ಏಕಾಂಗಿ ಅಲ್ಲಾ, ಅವ್ರ ಜೊತೆ ನಾವಿದ್ದೀವಿ. ಜೊತೆಗೆ ಮಂಡ್ಯದ ಲಕ್ಷಾಂತರ ಜನರು ಇದ್ದಾರೆ ಅಂತಾ ಅಭಿಷೇಕ್ ಹೇಳಿದ್ದಾರೆ.
ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ ತೆಗೆದುಕೊಂಡ ಹೋದ ವಿಚಾರಕ್ಕೆ ಖಡಕ್ ಆಗಿ, ಮಾತನಾಡಿರೋ ಅಭಿಷೇಕ್, 2018 ನವೆಂಬರ್ 24 ರಂದು ಅಂಬರೀಶ್ ನಿಧನರಾದಾಗ ಯಾರು ಮಾಧ್ಯಮದ ಮುಂದೆ ಏನು ಮಾತನಾಡಿದರು ಎಂಬುದನ್ನ ಜನರು ಹೇಳ್ತಾರೆ. ಆ ವಿಷ್ಯದ ಬಗ್ಗೆ ನಾವು ಮಾತನಾಡೋದು ಸರಿಯಲ್ಲ ಅಂತಾ ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.
ಸುಮಲತಾ ಅವರನ್ನು ನಟೋರಿಯಸ್ ಎಂದಿರುವ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರ್ರಿ ಅವರು? ನಮ್ಮ ಅಮ್ಮನಿಗೆ ನಟೋರಿಯಸ್ ಅಂತಾ ಹೇಳಲು ಯಾರವನು ? ಒಂದು ವೇಳೆ ಅವನಲ್ಲಿ ಸಮಸ್ಯೆ ಇದ್ರೆ ಅಸೆಂಬ್ಲಿಗೆ ಹೋಗಿ ಮಾತಾಡಲಿ. ಅಕ್ರಮ ಗಣಿಗಾರಿಕೆ ತಪ್ಪು ಎಂದು ಹೇಳಲಿ, ಅದನ್ನ ಬಿಟ್ಟು ನಟೋರಿಯಸ್ ಅಂತಾ ಕರೆಯೋದಿಕ್ಕೆ ಅವನು ಯಾರು ಎಂದು ಕಿಡಿಕಾರಿದರು.