ETV Bharat / entertainment

ಬಿಗ್‌ ಬಾಸ್​ ಮನೆಯಿಂದ ಇಶಾನಿ ಔಟ್; ಇಂದು ಮತ್ತೊಬ್ಬರಿಗೆ ಕಾದಿದೆ ಶಾಕ್​!​ - ಈಟಿವಿ ಭಾರತ ಕನ್ನಡ

Kannada Bigg Boss season-10: ಈ ವಾರ ಬಿಗ್​ ಬಾಸ್​ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರ ಹೋಗಲಿದ್ದಾರೆ. ಶನಿವಾರ ಇಶಾನಿ ಔಟಾಗಿದ್ದು, ಇಂದು ಮತ್ತೊಬ್ಬರು ಸ್ಪರ್ಧಿ ಎಲಿಮಿನೇಟ್ ಆಗುವರು.

Bigg boss
ಬಿಗ್​ ಬಾಸ್​ ಮನೆಯಿಂದ ಇಶಾನಿ ಔಟ್; ಇಂದು ಮತ್ತೊಬ್ಬರಿಗೆ ಕಾದಿದೆ ಶಾಕ್​!​
author img

By ETV Bharat Karnataka Team

Published : Nov 19, 2023, 9:56 AM IST

ಕನ್ನಡದ 'ಬಿಗ್​ ಬಾಸ್​' ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ಶೋ ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿವಿಧ ಸನ್ನಿವೇಶಗಳಲ್ಲಿ ಸ್ಪರ್ಧಿಗಳ ನಾನಾ ಭಾವನೆಗಳು ವ್ಯಕ್ತವಾಗುತ್ತಿವೆ. ಅಚ್ಚುಕಟ್ಟಾಗಿ ಆಟ ಆಡುವವರು, ಪ್ರೇಕ್ಷಕರ ಗಮನ ಸೆಳೆಯುವವರು ಕೊನೆ ಹಂತದವರೆಗೂ ತಲುಪುತ್ತಾರೆ. ಬಿಗ್​ ಬಾಸ್​ ಕೊಡುವ ಟಾಸ್ಕ್ ಸಹ ಸವಾಲಿನದ್ದೇ ಆಗಿರುತ್ತದೆ. ಈ ಸವಾಲುಗಳನ್ನು ಸ್ಪರ್ಧಿಗಳು ಹೇಗೆ ಸ್ವಿಕರಿಸುತ್ತಾರೆಂಬುದೇ ಅವರಿಗೆ 'ಪರೀಕ್ಷೆ'. ಇದನ್ನು ಗೆದ್ದು, ನಾಮಿನೇಟ್​ ಆಗುವುದರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಾರೆ.

ಸೋತವರನ್ನು, ಕಳಪೆ ಪ್ರದರ್ಶನ ನೀಡಿದವರನ್ನು ಮನೆಯ ಸ್ಪರ್ಧಿಗಳೇ ನಾಮಿನೇಟ್​ ಮಾಡುತ್ತಾರೆ. ಕೊನೆಗೆ 'ವಾರದ ಕತೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಮನೆಯಿಂದ ಹೊರಹೋಗುವ ಸ್ಫರ್ಧಿ ಯಾರೆಂದು ಸುದೀಪ್​ ಘೋಷಿಸುತ್ತಾರೆ. ಅದನ್ನು ತಿಳಿದುಕೊಳ್ಳಲು ಮನೆಯ ಸ್ಪರ್ಧಿಗಳ ಜೊತೆ ಪ್ರೇಕ್ಷಕರು ಕೂಡ ಕಾತರರಾಗಿರುತ್ತಾರೆ. ಎಲಿಮಿನೇಷನ್​ಗೂ ಮುನ್ನ ಸೇಫ್​​ ಆದ ಸ್ಪರ್ಧಿಗಳ ಹೆಸರು ಬರುತ್ತದೆ. ಒಂದೆರಡು ಸ್ಪರ್ಧಿಗಳನ್ನು ಶನಿವಾರವೇ ಸೇಫ್​ ಮಾಡಿ, ಮನೆಯಿಂದ ಹೊರ ಹೋಗುವ ಸ್ಪರ್ಧಿಯ ಹೆಸರನ್ನು ಕಿಚ್ಚ ಸುದೀಪ್​ ಆದಿತ್ಯವಾರ ತಿಳಿಸುತ್ತಾರೆ.

ಆದರೆ, ಈ ಬಾರಿ ಎಲಿಮಿನೇಷನ್​ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರವೇ ಮನೆಯಿಂದ ಹೊರ ಹೋಗುವ ಸ್ಪರ್ಧಿಯ ಹೆಸರನ್ನು ಸುದೀಪ್ ಹೇಳಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಇಶಾನಿ ಪ್ರಯಾಣ ಕೊನೆಗೊಂಡಿದೆ. ಕಳೆದ ವಾರ ವರ್ತೂರು ಸಂತೋಷ್​ ಅವರ ಕಾರಣಕ್ಕಾಗಿ ಎಲಿಮಿನೇಷನ್​ ನಡೆದಿರಲಿಲ್ಲ. ಹೀಗಾಗಿ ಈ ವಾರ ಡಬಲ್​ ಎಲಿಮಿನೇಷನ್​ ಇರಲಿದೆ. ಇಬ್ಬರು ಈ ಬಾರಿ ಮನೆಯಿಂದ ಹೊರ ಹೋಗುತ್ತಾರೆ. ಶನಿವಾರ ಇಶಾನಿ ಔಟ್​ ಆಗಿದ್ದು, ಇಂದು ಮತ್ತೊಬ್ಬರು ಸ್ಪರ್ಧಿ ತಮ್ಮ ಮನೆಗೆ ಹೋಗಲಿದ್ದಾರೆ. ​

ಶನಿವಾರದ ಎಪಿಸೋಡ್ ಕೊನೆಯಲ್ಲಿ ಕಿಚ್ಚ ಸುದೀಪ್​, "ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ" ಎಂದು ಕೇಳಿದರು. ಇಶಾನಿ ಎದ್ದು ನಿಂತುಕೊಂಡರು. ಆಗ ಕಿಚ್ಚ, "ನಿಜ. ನಿಮ್ಮ ಪಯಣ ಬಿಗ್‌ ಬಾಸ್‌ ಮನೆಯಲ್ಲಿ ಮುಗಿಯುತ್ತಿದೆ. ಆಲ್‌ದಿ ಬೆಸ್ಟ್" ಎಂದು ಹೇಳಿದರು.

ಇಂದಿನ ಎಪಿಸೋಡ್‌ನಲ್ಲಿ ಇನ್ನೊಬ್ಬರು ಬಿಗ್‌ ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಹೊರಬಿದ್ದ ಇಬ್ಬರೂ ಸ್ಪರ್ಧಿಗಳ ಜೊತೆ ಭಾನುವಾರ ಎಪಿಸೋಡ್‌ನಲ್ಲಿ ಕಿಚ್ಚ ಸಂವಾದ ನಡೆಸಲಿದ್ದಾರೆ. ಮನೆಯಿಂದ ಔಟ್​ ಆದ ಇಶಾನಿ, "ನಾನು ಇನ್ನಷ್ಟು ಎಫರ್ಟ್‌ ಹಾಕಬೇಕಾಗಿತ್ತು. ಆದರೆ ನನ್ನಿಂದ ಆಗಲಿಲ್ಲ. ಮನೆಯಿಂದ ಸಾಕಷ್ಟು ಕಲಿತುಕೊಂಡಿದ್ದೇನೆ. ಉಳಿದ ಎಲ್ಲಾ ಸ್ಪರ್ಧೆಗಳಿಗೆ ಆಲ್‌ ದಿ ಬೆಸ್ಟ್" ಎಂದು ಹೇಳಿದರು.

ಅಲ್ಲಿಗೆ ಶನಿವಾರದ 'ಕಿಚ್ಚನ ಪಂಚಾಯಿತಿ' ಮುಗಿದಿದೆ. ನಾಳೆ ಮತ್ಯಾವ ಸ್ಪರ್ಧಿ ಮನೆಯಿಂದ ಹೊರಬೀಳಲಿದ್ದಾರೆ ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ. ಇದನ್ನು ತಿಳಿದುಕೊಳ್ಳಲು ಜಿಯೋ ಸಿನಿಮಾದಲ್ಲಿ ನೇರ ಪ್ರಸಾರವಾಗುತ್ತಿರುವ ಬಿಗ್‌ ಬಾಸ್ ಕನ್ನಡ ವೀಕ್ಷಿಸಬಹುದು. ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರ ಜಿಯೋಸಿನಿಮಾದಲ್ಲಿ ಲಭ್ಯವಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು.

ಇದನ್ನೂ ಓದಿ: ವಾರದ ಕತೆ ಕಿಚ್ಚನ ಜೊತೆ: ಪಂಚಾಯಿತಿಯ ಮೊದಲ ದಿನವೇ ಎಲಿಮಿನೇಶನ್ ಹೊಗೆ​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.