ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಮುಖ್ಯಭೂಮಿಕೆಯ ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಜೋಡಿಯ ಆನ್ ಸ್ಕ್ರೀನ್ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. 6ನೇ ದಿನದ ಕಲೆಕ್ಷನ್ ಸಂಖ್ಯೆ ಕೊಂಡ ಕಡಿಮೆ ಇದ್ದರೂ, ಈವರೆಗಿನ ಒಟ್ಟು ಕಲೆಕ್ಷನ್ ಉತ್ತಮವಾಗಿದೆ. ಸಿನಿಮಾ ತೆರೆಕಂಡು 5 ದಿನಗಳಲ್ಲಿ 30 ಕೋಟಿ ಗಡಿ ದಾಟಿದೆ. 6 ದಿನಗಳ ಒಟ್ಟು ಕಲೆಕ್ಷನ್ 34.11 ಕೋಟಿ ರೂಪಾಯಿ.
-
#ZaraHatkeZaraBachke is trending very well on weekdays… Absence of major film/s till #Adipurush should help #ZHZB score yet again in Weekend 2… Fri 5.49 cr, Sat 7.20 cr, Sun 9.90 cr, Mon 4.14 cr, Tue 3.87 cr, Wed 3.51 cr. Total: ₹ 34.11 cr. #India biz.
— taran adarsh (@taran_adarsh) June 8, 2023 " class="align-text-top noRightClick twitterSection" data="
*National chains* /… pic.twitter.com/nJGLBg61nm
">#ZaraHatkeZaraBachke is trending very well on weekdays… Absence of major film/s till #Adipurush should help #ZHZB score yet again in Weekend 2… Fri 5.49 cr, Sat 7.20 cr, Sun 9.90 cr, Mon 4.14 cr, Tue 3.87 cr, Wed 3.51 cr. Total: ₹ 34.11 cr. #India biz.
— taran adarsh (@taran_adarsh) June 8, 2023
*National chains* /… pic.twitter.com/nJGLBg61nm#ZaraHatkeZaraBachke is trending very well on weekdays… Absence of major film/s till #Adipurush should help #ZHZB score yet again in Weekend 2… Fri 5.49 cr, Sat 7.20 cr, Sun 9.90 cr, Mon 4.14 cr, Tue 3.87 cr, Wed 3.51 cr. Total: ₹ 34.11 cr. #India biz.
— taran adarsh (@taran_adarsh) June 8, 2023
*National chains* /… pic.twitter.com/nJGLBg61nm
'ದಿ ಕೇರಳ ಸ್ಟೋರಿ' ಮತ್ತು 'ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್' ಸಿನಿಮಾದ ಉತ್ತಮ ಪ್ರದರ್ಶನಗಳ ನಡುವೆಯೂ, ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರವು ಚಿತ್ರಮಂದಿರಗಳಲ್ಲಿ ದೃಢವಾಗಿ ನಿಂತಿದೆ. ಸಿನಿಮಾ ತೆರೆಕಂಡ ಮೊದಲನೇ ದಿನದಂದು ಸರಿಸುಮಾರು 5.25 ಕೋಟಿ ರೂ. ಗಳಿಸುವಲ್ಲಿ ಯಶಸ್ವಿ ಆಯಿತು ಮತ್ತು ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಮೂಲಗಳ ಪ್ರಕಾರ, ಚಿತ್ರವು 6ನೇ ದಿನದಂದು ಸುಮಾರು 3.60 ಕೋಟಿ ರೂಪಾಯಿಗಳನ್ನು ಗಳಿಸಿತು, ಒಟ್ಟು ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ 34.11 ಕೋಟಿ ರೂಪಾಯಿಗಳಿಗೆ ತಲುಪಿದೆ.
'ಉರಿ : ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ನಂತರ 'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರ ನಾಯಕ ನಟ ವಿಕ್ಕಿ ಕೌಶಲ್ ಅವರ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿದೆ. ಭಾರತದಾದ್ಯಂತ ಪ್ರೇಕ್ಷಕರು ವಿಕ್ಕಿ ಮತ್ತು ಸಾರಾ ಅವರ ಕಿಮಿಸ್ಟ್ರಿ, ನಟನೆ ಬಗ್ಗೆ ಶ್ಲಾಘಿಸಿದ್ದಾರೆ. ಚಿತ್ರದ ಸಂಗೀತಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾ ಕಥೆಯು ಇಂದೋರ್‌ನಲ್ಲಿ ನಡೆಯುತ್ತದೆ. ಇದರಲ್ಲಿ ಇಬ್ಬರು ಕಾಲೇಜು ಪ್ರೇಮಿಗಳ ಕಪಿಲ್ (ವಿಕ್ಕಿ ಕೌಶಲ್) ಮತ್ತು ಸೌಮ್ಯ (ಸಾರಾ ಅಲಿ ಖಾನ್) ಅವರ ಕಥೆಯನ್ನು ಹೇಳಲಾಗಿದೆ. ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುತ್ತಾರೆ. ಆದರೆ ಖಾಸಗಿ ಸಮಯ ಹೊಂದಲು ವಿಚ್ಛೇದನದ ನಾಟಕ ಆಡುತ್ತಾರೆ.
ಇದನ್ನೂ ಓದಿ: ರಾಮ - ಸೀತೆಯಾಗಿ ರಾಲಿಯಾ, ರಾವಣನ ಪಾತ್ರಕ್ಕೆ ಯಶ್: ರಾಮಾಯಣ ಆಧಾರಿತ ಮತ್ತೊಂದು ಚಿತ್ರಕ್ಕೆ ತಯಾರಿ?!
ಮದುವೆಯ ನಂತರ ಕಪಿಲ್ ಕುಟುಂಬದೊಂದಿಗೆ ಸಾರಾ ವಾಸಿಸುತ್ತಾರೆ. ನವದಂಪತಿಗಳ ಪ್ರೇಮ ಪ್ರಣಯಕ್ಕೆ ಕುಟುಂಬದಿಂದ ಖಾಸಗಿ ಸಮಯ ಲಭ್ಯವಾಗುವುದಿಲ್ಲ. ಇದೊಂದು ಮಧ್ಯಮ ವರ್ಗದ ಕೂಡು ಕುಟುಂಬವಾಗಿರುತ್ತದೆ. ಕಪಿಲ್ ಮತ್ತು ಸೌಮ್ಯ ಅವರು ತಮ್ಮ ಕುಟುಂಬದಿಂದ ದೂರವಿರಲು ಭಾರತ ಸರ್ಕಾರದ ಯೋಜನೆಯೊಂದರ ಮೂಲಕ ಸಿಗುವ ಮನೆ ಹೊಂದಲು ಪ್ರಯತ್ನಿಸುತ್ತಾರೆ. ವಿಚ್ಛೇದಿತ ಮಹಿಳೆಯರಿಗೆ ಈ ಮನೆ ಲಭ್ಯ ಆಗುವ ಬಗ್ಗೆ ತಿಳಿದುಕೊಳ್ಳುತ್ತಾರೆ. ಹಾಗಾಗಿ ಕಪಿಲ್ ಮತ್ತು ಸೌಮ್ಯ ವಿಚ್ಛೇದನದ ನಾಟಕ ಆಡುತ್ತಾರೆ. ತಮ್ಮ ನಡುವೆ ಏನೂ ಸರಿಯಿಲ್ಲ ಎಂಬುದನ್ನು ಕುಟುಂಬಕ್ಕೆ, ಸಮಾಜಕ್ಕೆ ತೋರಿಸಲು ಯತ್ನಿಸುತ್ತಾರೆ. ಆದರೆ ಅದ್ಯಾವುದೂ ವರ್ಕ್ ಔಟ್ ಆಗುವುದಿಲ್ಲ. ಈ ನಾಟಕದ ನಡುವೆ ಜೋಡಿಯ ಪ್ರೇಮ ವೀಕ್ಷಕರ ಗಮನ ಸೆಳೆಯುತ್ತದೆ.
ಇದನ್ನೂ ಓದಿ: 'ಕಾಂತಾರ' ಕಾಡುಬೆಟ್ಟು ಶಿವನ ಚೆಲುವೆ ಲೀಲಾಗೆ ಹುಟ್ಟುಹಬ್ಬದ ಸಂಭ್ರಮ..ಯುವ 'ಸಿರಿ' ಪೋಸ್ಟರ್ ರಿಲೀಸ್