ETV Bharat / entertainment

ಲೈಗರ್ ಚಿತ್ರದಿಂದ ಮತ್ತೊಂದು ಹಾಡು ಬಿಡುಗಡೆ; ಮತ್ತಷ್ಟು ಕ್ರೇಜ್​ ಹುಟ್ಟುಹಾಕಿದ ರೊಮ್ಯಾಂಟಿಕ್ ಸೀನ್ಸ್​

author img

By

Published : Aug 6, 2022, 5:41 PM IST

Updated : Aug 6, 2022, 5:51 PM IST

ರಶ್ಮಿ ವಿರಾಗ್ ಬರೆದಿರುವ ತನಿಷ್ಕ್ ಬಾಗ್ಚಿ ಮತ್ತು ಜಹ್ರಾ ಖಾನ್ ಹಾಡಿರುವ ರೊಮ್ಯಾಂಟಿಕ್ ಟ್ರ್ಯಾಕ್ ಇದಾಗಿದೆ. ಸೆನ್ಸಾರ್​​ನಿಂದ ಪಾಸ್​ ಆಗಿರುವ ಲೈಗರ್ ಚಿತ್ರಕ್ಕೆ ಯುಎ ಪ್ರಮಾಣಪತ್ರವನ್ನು ನೀಡಲಾಗಿದೆ.

Watch Vijay Deverakonda-Ananya Panday's sizzling chemistry in new love track Aafat
ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ

ಮುಂಬೈ (ಮಹಾರಾಷ್ಟ್ರ): ಟಾಲಿವುಡ್ ಚಿತ್ರರಂಗದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ತಾರೆ ಅನನ್ಯಾ ಪಾಂಡೆ ನಟನೆಯ 'ಲೈಗರ್' ಚಿತ್ರ ಬಿಡುಗಡೆಗೂ ಮುನ್ನ ಸಖತ್​ ಸದ್ದು ಮಾಡುತ್ತಿದೆ. ಬ್ಯಾಕ್​ ಟು ಬ್ಯಾಕ್​ ಹಾಡು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುವ ಲೈಗರ್​ ಚಿತ್ರ ತಂಡ ಇಂದು ಮಗದೊಂದು ಹಾಡನ್ನು ಹಂಚಿಕೊಂಡಿದೆ. ಅಕ್ಡಿ-ಪಕ್ಡಿ ಮತ್ತು ವಾಟ್​ ಲಗಾ ದೇಂಗೆ ಸೇರಿದಂತೆ ಈವರೆಗೆ ಎರಡು ಹಾಡುಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಆಫತ್​ ಎಂಬ ರೊಮ್ಯಾಂಟಿಕ್​ ಮೂರನೇ ಹಾಡನ್ನು ಹಂಚಿಕೊಂಡಿದೆ.

ಈ ಹಾಡಿನಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ನೆಟಿಜನ್​ಗಳ ಗಮನ ಸೆಳೆದಿದೆ. ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಜೋಡಿಯನ್ನು ಹಾಡಿನ ತುಂಬಾ ಅತ್ಯದ್ಭುತವಾಗಿ ಸೆರೆ ಹಿಡಿಯಲಾಗಿದೆ. ಇಬ್ಬರ ನಡುವಿನ ರೊಮ್ಯಾಂಟಿಕ್​ ಸೀನ್​ ಅಭಿಮಾನಿಗಳಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಸದ್ಯ ಯೂಟ್ಯೂಬ್​ನಲ್ಲಿ ಈ ಹಾಡಿಗೆ ಸಖತ್​ ರೆಸ್ಪಾನ್ಸ್​ ಸಿಕ್ಕಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

  • " class="align-text-top noRightClick twitterSection" data="">

ರಶ್ಮಿ ವಿರಾಗ್ ಬರೆದಿರುವ ತನಿಷ್ಕ್ ಬಾಗ್ಚಿ ಮತ್ತು ಜಹ್ರಾ ಖಾನ್ ಹಾಡಿರುವ ರೊಮ್ಯಾಂಟಿಕ್ ಟ್ರ್ಯಾಕ್ ಇದಾಗಿದೆ. ಸೆನ್ಸಾರ್​​ನಿಂದ ಪಾಸ್​ ಆಗಿರುವ ಲೈಗರ್ ಚಿತ್ರಕ್ಕೆ ಯುಎ ಪ್ರಮಾಣಪತ್ರವನ್ನು ನೀಡಲಾಗಿದೆ. ಇದರೊಂದಿಗೆ ಸಿನಿಮಾ ಬಿಡುಗಡೆಗೆ ಕಟ್ಟೆಚ್ಚರ ವಹಿಸಲಾಗಿದೆ. 2 ಗಂಟೆ 20 ನಿಮಿಷಗಳ ಕಾಲ ಸಿನಿಮಾ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿರುವ ಲೈಗರ್​ ಚಿತ್ರದಲ್ಲಿ 7 ಫೈಟ್‌ಗಳು ಮತ್ತು 6 ಹಾಡುಗಳಿವೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಹಜವಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿದೆ.

ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರವು ಸ್ಪೋರ್ಟ್ಸ್ ಆ್ಯಕ್ಷನ್ ಚಿತ್ರವಾಗಿದ್ದು, ಆಗಸ್ಟ್ 25 ರಂದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಧರ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ತೆರೆ ಕಾಣಲಿರುವ ಲೈಗರ್​ ಚಿತ್ರದ ಟ್ರೈಲರ್ ಮತ್ತು ಎರಡು ಹಾಡುಗಳನ್ನು ಇತ್ತೀಚೆಗೆ ಅನಾವರಣಗೊಳಲಾಗಿತ್ತು. ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಮತ್ತು ಗೌರವ್ ಆದರ್ಶ್ ಕಾಣಿಸಿಕೊಳ್ಳಲಿದ್ದಾರೆ. ಟ್ರೈಲರ್​ನಿಂದಲೇ​ ಕೋಟ್ಯಂತರ ಭಾರಿ ವೀಕ್ಷಣೆ ಕಂಡಿದ್ದ ಚಿತ್ರ ಇದೀಗ ಹಾಡಿನ ಮೂಲಕ ಮತ್ತಷ್ಟು ಮೈಲೇಜ್ ಪಡೆದುಕೊಳ್ಳುತ್ತಿದೆ.

Last Updated : Aug 6, 2022, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.