ETV Bharat / entertainment

ತಂದೆ ಅಗಲಿಕೆ ಬಳಿಕ ತಾಯಿಯೊಂದಿಗೆ ಮುಂಬೈಗೆ ಮರಳಿದ ನಟ ಆಯುಷ್ಮಾನ್​ ಖುರಾನಾ ಸಹೋದರರು - ಬಾಲಿವುಡ್​ ನಟ ಆಯುಷ್ಮಾನ್​ ಖುರಾನಾ

ತಂದೆ ಪಿ ಖುರಾನಾ ನಿಧನದ ನಂತರ ನಟ ಆಯುಷ್ಮಾನ್​ ಖುರಾನಾ ತಮ್ಮ ತಾಯಿ ಮತ್ತು ಸಹೋದರನೊಂದಿಗೆ ಚಂಡೀಗಢದಿಂದ ಮುಂಬೈಗೆ ಆಗಮಿಸಿದ್ದಾರೆ.

Ayushmann Khurrana
ತಾಯಿಯೊಂದಿಗೆ ಮುಂಬೈಗೆ ಮರಳಿದ ಸಹೋದರ ನಟರು
author img

By

Published : Jun 6, 2023, 1:50 PM IST

ತಂದೆ ಮತ್ತು ಖ್ಯಾತ ಜ್ಯೋತಿಷಿ ಪಿ ಖುರಾನಾ ನಿಧನದ ನಂತರ ಬಾಲಿವುಡ್​ ನಟ ಆಯುಷ್ಮಾನ್​ ಖುರಾನಾ ಮತ್ತು ಅವರ ಸಹೋದರ, ನಟ ಅಪರಶಕ್ತಿ ಖುರಾನಾ ತಮ್ಮ ತಾಯಿ ಪೂನಂ ಖುರಾನಾ ಜೊತೆ ಚಂಡೀಗಢದಿಂದ ಮುಂಬೈಗೆ ಆಗಮಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಪಾಪರಾಜಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ಸಹೋದರರು ತಮ್ಮ ತಾಯಿಯ ಕೈಯನ್ನು ಹಿಡಿದುಕೊಂಡು ಮುಂಬೈ ವಿಮಾನ ನಿಲ್ದಾಣದಿಂದ ಕಾರಿನತ್ತ ಸಾಗುತ್ತಿರುವುದನ್ನು ಕಾಣಬಹುದು. ಸಹೋದರರಿಬ್ಬರು ತಾಯಿ ಜೊತೆ ಮಾತನಾಡುತ್ತ ಹೋಗುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.

ಪ್ರವಾಸಕ್ಕಾಗಿ, ಪೂನಂ ಬಿಳಿ ಬಣ್ಣದ ಲೆಗ್ಗಿಂಗ್ ಮತ್ತು ಬಿಳಿ ಸ್ನೀಕರ್‌ಗಳೊಂದಿಗೆ ಕಡು ನೀಲಿ ಬಣ್ಣದ ಕುರ್ತಾವನ್ನು ಧರಿಸಿದ್ದರು. ಆಯುಷ್ಮಾನ್ ಅವರು ಹಸಿರು ಟಿ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಸ್ನೀಕರ್ಸ್ ಅನ್ನು ಆಯ್ಕೆ ಮಾಡಿದ್ದರು. ಜೊತೆಗೆ ಕೂಲಿಂಗ್​ ಗ್ಲಾಸ್​ ಹಾಕಿಕೊಂಡಿದ್ದರು. ಮತ್ತೊಂದೆಡೆ, ಅಪರಶಕ್ತಿ ನೀಲಿ ಬಣ್ಣದ ಟಿ-ಶರ್ಟ್‌ನ ಮೇಲೆ ಪೀಚ್ ಶರ್ಟ್ ಧರಿಸಿದ್ದರು ಮತ್ತು ಮ್ಯಾಚಿಂಗ್ ಟ್ರೌಸರ್ ಮತ್ತು ಬಿಳಿ ಸ್ನೀಕರ್‌ಗಳನ್ನು ಹಾಕಿದ್ದರು. ಸಹೋದರರಿಬ್ಬರೂ ಬ್ಯಾಗ್​ಗಳನ್ನು ಹಾಕಿಕೊಂಡಿದ್ದರು.

ವಿಡಿಯೋವನ್ನು ಪಾಪರಾಜಿಗಳು ಕೈ ಬಿಟ್ಟ ತಕ್ಷಣ ಸಹೋದರ ನಟರ ಅಭಿಮಾನಿಗಳು ಕಮೆಂಟ್​ ವಿಭಾಗವನ್ನು ತುಂಬಿದರು. ಸೋಷಿಯಲ್​ ಮೀಡಿಯಾ ಬಳಕೆದಾರರೊಬ್ಬರು, "ಆಯುಷ್ಮಾನ್​ ಮತ್ತು ನಿಮ್ಮ ಕುಟುಂಬಕ್ಕೆ ಪ್ರೀತಿಯನ್ನು ಕಳುಹಿಸುತ್ತಿದ್ದೇನೆ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಎಲ್ಲಾ ಮಕ್ಕಳು ಹೀಗೆಯೇ, ಮುದ್ದಾದ ವಿಡಿಯೋ" ಎಂದು ಹೇಳಿದ್ದಾರೆ. ಇನ್ನೊಬ್ಬರು, "ಎಲ್ಲಾ ತಾಯಂದಿರಿಗೂ ಇಂತಹ ಮಕ್ಕಳಿರುತ್ತಾರೆ" ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಅನೇಕರು ಈ ವಿಡಿಯೋ ಲೈಕ್​ ಮಾಡಿದ್ದಾರೆ.

ಇದನ್ನೂ ಓದಿ: 'ತೆಲುಗು ಇಂಡಿಯನ್ ಐಡಲ್ 2'ರ ವಿಜೇತೆ ಸೌಜನ್ಯ ಗುಣಗಾನ ಮಾಡಿದ ಅಲ್ಲು ಅರ್ಜುನ್​​

ಆಯುಷ್ಮಾನ್​ ಖುರಾನಾಗೆ ಪಿತೃವಿಯೋಗ: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರ ತಂದೆ ಮತ್ತು ಖ್ಯಾತ ಜ್ಯೋತಿಷಿ ಪಿ ಖುರಾನಾ ಚಂಡೀಗಢದಲ್ಲಿ ಮೇ 19 ರಂದು ನಿಧನರಾದರು. ಪಿ ಖುರಾನಾ ಅವರು ಕೆಲವು ದಿನಗಳಿಂದ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ವೆಂಟಿಲೇಟರ್​ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದರು.

ಖ್ಯಾತ ಜ್ಯೋತಿಷಿಯಾಗಿದ್ದ ಪಿ ಖುರಾನಾ: ಪಂಡಿತ್ ಪಿ ಖುರಾನಾ ಅವರು ಜ್ಯೋತಿಷ್ಯ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿದ್ದು, ಅವರು ಈ ಕುರಿತು ಹಲವಾರು ಪುಸ್ತಕಗಳನ್ನು ಬರೆದು ಹೆಸರುವಾಸಿಯಾಗಿದ್ದರು. ಪಿ ಖುರಾನಾ ಚಂಡೀಗಢದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಾದ್ಯಂತ ಪ್ರಸಿದ್ಧರಾಗಿದ್ದರು. ತಂದೆಯ ಭವಿಷ್ಯ ಆಯುಷ್ಮಾನ್‌ನನ್ನು ಸ್ಟಾರ್​ನನ್ನಾಗಿ ಮಾಡಿತು. ಹೀಗಾಗಿಯೇ ಆಯುಷ್ಮಾನ್​ಗೆ ತಮ್ಮ ತಂದೆಯ ಮೇಲೆ ವಿಶೇಷ ಪ್ರೀತಿ ಇತ್ತು. ಹೆಚ್ಚಾಗಿ ಅವರು ತಮ್ಮ ತಂದೆಯ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡುತ್ತಿದ್ದರು.

ಇದನ್ನೂ ಓದಿ: ಪೋಷಕರಾಗಲಿರುವ ಸ್ವರಾ ಭಾಸ್ಕರ್ - ಫಹಾದ್ ಅಹ್ಮದ್: ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.