ETV Bharat / entertainment

'ದೇಶ ರಕ್ಷಿಸಲು ಶತ್ರುವನ್ನು ಕೊಲ್ಲುವುದೇ ಸೈನಿಕನ ಕರ್ತವ್ಯ': ಸ್ಯಾಮ್ ಬಹದ್ದೂರ್' ಟೀಸರ್ ಔಟ್‌- ನೋಡಿ

author img

By ETV Bharat Karnataka Team

Published : Oct 13, 2023, 3:35 PM IST

ಮೇಘನಾ ಗುಲ್ಜಾರ್ ನಿರ್ದೇಶನದ 'ಸ್ಯಾಮ್ ಬಹದ್ದೂರ್' ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.

Sam Bahadur teaser
ಸ್ಯಾಮ್ ಬಹದ್ದೂರ್ ಟೀಸರ್

ಬಾಲಿವುಡ್​ ನಟ ವಿಕ್ಕಿ ಕೌಶಲ್ ಅಭಿನಯದ 'ಸ್ಯಾಮ್ ಬಹದ್ದೂರ್' ಸಿನಿಮಾದ ಟೀಸರ್ ಇಂದು ಅನಾವರಣಗೊಂಡಿದೆ. ಮೇಘನಾ ಗುಲ್ಜಾರ್ ನಿರ್ದೇಶನದ ಚಿತ್ರದಲ್ಲಿ ವಿಕ್ಕಿ, ಭಾರತದ ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಪಾತ್ರದಲ್ಲಿ ನಟಿಸಿದ್ದಾರೆ. ಫಾತಿಮಾ ಸನಾ ಶೇಖ್ ಹಾಗೂ ಸಾನ್ಯಾ ಮಲ್ಹೋತ್ರಾ ಪ್ರಮುಖ ಪಾತ್ರ ನಿರ್ವಹಿಸಿರುವ 'ಸ್ಯಾಮ್ ಬಹದ್ದೂರ್' ಟೀಸರ್ ಆಕರ್ಷಕವಾಗಿದೆ. ಭಾರತದ ಮೊದಲ ಫೀಲ್ಡ್ ಮಾರ್ಷಲ್ ಪಾತ್ರಕ್ಕೆ ವಿಕ್ಕಿ ಕೌಶಲ್​ ಜೀವ ತುಂಬಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • " class="align-text-top noRightClick twitterSection" data="">

ವಿಕ್ಕಿ ಕೌಶಲ್ ಅವರು 'ಕಿಪ್ಪರ್' (Kipper) ಎಂದೂ ಸಹ ಕರೆಯಲ್ಪಡುವ ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರ ಪಾತ್ರ ಮಾಡಿದ್ದಾರೆ. ಫಾತಿಮಾ ಸನಾ ಶೇಖ್ ಅವರು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಹಾಗೂ ಸಾನ್ಯ ಮಲ್ಹೋತ್ರಾ ಸ್ಯಾಮ್ ಮಾಣೆಕ್​ ಶಾ ಅವರ ಪ್ರೀತಿಯ ಪತ್ನಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಮೇಘನಾ ಗುಲ್ಜಾರ್ ಹಾಗೂ ವಿಕ್ಕಿ ಕೌಶಲ್​​ 2018ರಲ್ಲಿ ತೆರೆಕಂಡ ರಾಝಿ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಮತ್ತೊಂದು ಸಿನಿಮಾ ನೀಡಲು ಸಜ್ಜಾಗಿದ್ದಾರೆ. ಟೀಸರ್, ಸ್ಯಾಮ್‌ ಅವರ ದೇಶ, ಸೈನ್ಯ, ತಮ್ಮ ಸೈನಿಕರ ಮೇಲಿನ ಪ್ರೀತಿಯನ್ನು ತೋರಿಸಿದೆ. "ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವುದು ಸೈನಿಕನ ಕರ್ತವ್ಯ" ಎಂದು ಅಭಿಪ್ರಾಯಪಡುವ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಉತ್ತರ ಕೊಡುವ ದೃಶ್ಯದೊಂದಿಗೆ ಟೀಸರ್​ ಪೂರ್ಣಗೊಳ್ಳುತ್ತದೆ. ಪ್ರಧಾನಿ ಬಳಿ ಕ್ಷಮೆ ಯಾಚಿಸುತ್ತಲೇ ತಮ್ಮ ಪ್ರತಿಕ್ರಿಯೆ ನೀಡುವ ಸ್ಯಾಮ್, "ದೇಶವನ್ನು ರಕ್ಷಿಸಲು ಶತ್ರುವನ್ನು ಕೊಲ್ಲುವುದೇ ಸೈನಿಕನ ಕರ್ತವ್ಯ" ಎಂದು ಪ್ರತಿಪಾದಿಸುತ್ತಾರೆ.

ಇದನ್ನೂ ಓದಿ: ದೇಶದ ಮೊದಲ ಫೀಲ್ಡ್‌ ಮಾರ್ಷಲ್ ಸ್ಯಾಮ್​ ಮಾಣೆಕ್‌ ಶಾ ಜೀವನಾಧಾರಿತ 'ಸ್ಯಾಮ್​ ಬಹದ್ದೂರ್'​​ ಸಿನಿಮಾ ಪೋಸ್ಟರ್ ಬಿಡುಗಡೆ

ಟೀಸರ್ ರಾಷ್ಟ್ರಪ್ರಶಸ್ತಿ ವಿಜೇತ ನಟನ ಮತ್ತೊಂದು ಗಮನಾರ್ಹ ಹಿಟ್​ನ ಸುಳಿವು ಕೊಟ್ಟಿದೆ. ಮತ್ತೊಮ್ಮೆ ತಮ್ಮ ಅಭಿನಯ ಕೌಶಲ್ಯ ಸಾಬೀತುಪಡಿಸಲು ವಿಕ್ಕಿ ಸಜ್ಜಾಗಿದ್ದಾರೆ. ಇಂದು ತೆರೆಕಂಡಿರುವ ಧಕ್ ಧಕ್ ಸಿನಿಮಾದ ನಟಿ ಫಾತಿಮಾ ಸನಾ ಶೇಖ್ ಪ್ರಮುಖ ಪಾತ್ರ ವಹಿಸಿರುವ ಕುರಿತು ಟೀಸರ್ ತಿಳಿಸುತ್ತದೆ.

ಇದನ್ನೂ ಓದಿ: Salaar vs Dunki: ಶಾರುಖ್​ ಸಿನಿಮಾ ಮುಂದೂಡಿಕೆ ಸಾಧ್ಯತೆ - ಕಾರಣ ಇಲ್ಲಿದೆ!

ವಿಕ್ಕಿ ಕೌಶಲ್​ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್', 'ಸರ್ದಾರ್ ಉಧಮ್ ಸಿಂಗ್', 'ರಾಝಿ' ಅಂತಹ ದೇಶಭಕ್ತಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ನಲ್ಲಿನ ಅಮೋಘ ಅಭಿನಯಕ್ಕಾಗಿ ಅತ್ಯುತ್ತಮ ನಟ ವಿಭಾಗದಲ್ಲಿ ಪ್ರತಿಷ್ಟಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದರು. ಡಿಸೆಂಬರ್​ 1ರಂದು ಚಿತ್ರಮಂದಿರಗಳಲ್ಲಿ ​ ಸ್ಯಾಮ್​ ಬಹದ್ದೂರ್ ಸಿನಿಮಾ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.