ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅವರ 125ನೇ ವೇದ ಸಿನಿಮಾ ಬಿಡುಗಡೆ ಆಗಿ ಎಲ್ಲ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಹೆಚ್ಚಾಗಿ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಗಳನ್ನ ಹತ್ತಿರ ಕರೆತರುತ್ತಿರುವ ವೇದ ಸಿನಿಮಾ, ಈ ವರ್ಷದ ಕೊನೆಯಲ್ಲಿ ಬಂದ ಸೂಪರ್ ಹಿಟ್ ಸಿನಿಮಾ ಆಗಿದೆ. ಈ ಹಿಟ್ ಚಿತ್ರದ ಭಾಗವಾಗಿರೋ ನಟಿ ಗಾನವಿ ಲಕ್ಷ್ಮಣ ನೂರು ಸಿನಿಮಾಗಳ ಸರ್ದಾರ ಶಿವರಾಜ್ ಕುಮಾರ್ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದು, ಈ ಚಿತ್ರಕ್ಕೆ ಆಯ್ಕೆ ಆಗಿದ್ದು ಹೇಗೆ? ಮತ್ತು ಶಿವರಾಜ್ ಕುಮಾರ್ ಬಗ್ಗೆ ಗಾನವಿ ಹಂಚಿಕೊಂಡ ಅಚ್ಚರಿ ಸಂಗತಿಗಳೇನು ಎಂಬುದನ್ನು ಅವರೇ ಹೇಳಿದ್ದಾರೆ ಕೇಳಿ...
ಕನ್ನಡ ಕಿರುತೆರೆಯಲ್ಲಿ ಜಾನಕಿ ಎಂದೇ ಪ್ರಸಿದ್ಧರಾಗಿರುವ ಗಾನವಿ ಮೂಲತಃ ಚಿಕ್ಕಮಗಳೂರಿನವರು. ಚಿಕ್ಕಮಗಳೂರಿನ ಕಾಫಿ ಪ್ಲಾಂಟರ್ಸ್ ಕುಟುಂಬದಲ್ಲಿ ಹುಟ್ಟಿರುವ ಗಾನವಿಗೆ ಸಿನಿಮಾ ನಟಿ ಆಗುವ ಕನಸು ಬಾಲ್ಯದಿಂದಲೂ ಇತ್ತು. ಸೈಕಾಲಜಿ ಮತ್ತು ಕ್ರಿಮಿನಾಲಜಿಯಲ್ಲಿ ಪದವಿ ಪಡೆದಿದ್ದ ಗಾನವಿಗೆ ನಟನೆ ಬಗ್ಗೆ ಸ್ವಲ್ಪ ಭಯವಿತ್ತು. ವಿವೇಕ್ ವಿಜಯಕುಮಾರ್ ರಂಗಭೂಮಿಯಲ್ಲಿ ಅಭಿನಯದ ಕಲಿತುಕೊಂಡಿರುವ ಗಾನವಿ ಕಿರುತೆರೆಯಲ್ಲಿ ನಟಿಸಲು ಅವಕಾಶ ಹುಡುಕಿಕೊಂಡು ಬಂತು.
ಕಿರುತೆರೆಯಲ್ಲಿ ಹಲವು ಅವಕಾಶಗಳು ಬಂದರೂ ಸೂಕ್ತ ಪಾತ್ರಕ್ಕಾಗಿ ಕಾಯುತ್ತಿದ್ದ ಗಾನವಿ ಟಿ.ಎನ್.ಸೀತಾರಾಮ್ ಅವರ ಕರೆ ಬಂದಾಗ ನಟಿಸಲು ಒಪ್ಪಿ ಆಡಿಷನ್ ನೀಡಿದರು. ಆಡಿಷನ್‌ನಲ್ಲಿ ಆಯ್ಕೆಯಾಗಿ ಮಗಳು ಜಾನಕಿ ಮೂಲಕ ಗಾನವಿ ಕರ್ನಾಟಕದ ಜನರ ಮನಗೆದ್ದರು. ಈ ಸೀರಿಯಲ್ನಿಂದ ಗಾನವಿಗೆ ಚಿಕ್ಕ ಪರದೆಯಿಂದ ದೊಡ್ಡ ಪರದೆಯಲ್ಲಿ ಮಿಂಚೋದಕ್ಕೆ ಅವಕಾಶ ಒದಗಿ ಬಂತು. ಅದುವೇ ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರ. ಈ ಸಿನಿಮಾ ಮೂಲಕ ಗಾನವಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಈ ಚಿತ್ರದ ಬಳಿಕ ಗಾನವಿಗೆ ಸಿಕ್ಕ ಬಂಪರ್ ಆಫರ್ ಎಂದರೆ ಅದು ಶಿವರಾಜ್ ಕುಮಾರ್ 125ನೇ ಸಿನಿಮಾಗೆ ಹೀರೋಯಿನ್ ಆಗಿದ್ದು. ವೇದ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದ ಗಾನವಿ ಈ ಚಿತ್ರಕ್ಕೆ ಆಯ್ಕೆ ಮಾಡಿದ್ದು ನಿರ್ದೇಶಕ ಹರ್ಷ ಅಂತೆ. ಒಂದು ಒಳ್ಳೆ ಪಾತ್ರಕ್ಕಾಗಿ ಎರಡು ಮೂರು ವರ್ಷ ಕಾದಿದ್ದರಂತೆ. ನಿರ್ದೇಶಕ ಹರ್ಷ ಅವರು, ನನ್ನ ಹೀರೋ ಚಿತ್ರದಲ್ಲಿ ನಟನೆ ನೋಡಿ ಯಾವುದೇ ಅಡಿಷನ್ ಮಾಡದೇ ಈ ಸಿನಿಮಾಗೆ ನನಗೆ ಆಯ್ಕೆ ಮಾಡಿದರು.
ಪುಷ್ಪ ಪಾತ್ರ ಡೈಲಾಗ್ ಹೇಳೋದಕ್ಕೆ ಸ್ವಲ್ಪ ಕಷ್ಟ ಆಯ್ತು. ಅದರಲ್ಲೂ ನಾನು ಶಿವರಾಜ್ ಕುಮಾರ್ ಸಾರ್ ಜೊತೆ ಅಭಿನಯಿಸಿದ್ದು, ಲೈಫ್ ಟೈಮ್ ಅಚೀವ್ಮೆಂಟ್ ರೀತಿ ಎಂದರು. ಅದರಲ್ಲಿ ಶಿವರಾಜ್ ಕುಮಾರ್ ಸರ್ ನನ್ನ ಬಗ್ಗೆ ಹಾಡುವ ಪುಷ್ಪ ಪುಷ್ಪ ಹಾಡು ನನಗೆ ಪರ್ಸನಲಿ ತುಂಬಾ ಇಷ್ಟ ಆಗಿದೆ ಎಂದು ಹೇಳಿದ್ದಾರೆ.
ವೇದ ಸಿನಿಮಾ ಬಿಡುಗಡೆ ಆದ್ಮಲೇ ತುಂಬಾ ಜನ ನನ್ನ ಹತ್ತಿರ ಬಂದು ಪುಷ್ಪ ಕ್ಯಾರೆಕ್ಟರ್ ನೀವಾ ಮಾಡಿರೋದು ಅಂತಾ ಕೇಳಿದಾಗ ಸಖತ್ ಥ್ರಿಲ್ ಆಯಿತು. ಅದು ನನಗೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್. ಶಿವರಾಜ್ ಕುಮಾರ್ ಅಂತಹ ಸ್ಟಾರ್ ನಟನ ಜೊತೆ ಪ್ರತಿಯೊಬ್ಬ ಹೀರೋಯಿನ್ಗೆ ಅಭಿನಯಿಸಬೇಕು ಅಂತಾ ಆಸೆ ಇರುತ್ತೆ. ಆ ಮಾತು ನನ್ನ ವಿಷಯದಲ್ಲಿ ನಿಜವಾಗಿದೆ. ವೇದ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಾರ್ ಹಾಗೂ ನನ್ನ ಕೆಮಿಸ್ಟ್ರಿ ತುಂಬಾ ಚೆನ್ನಾಗಿ ವರ್ಕ್ ಔಟ್ ಆಗಿದ್ದು. ಅದು ನನಗೆ ಬೆಸ್ಟ್ ಫೀಲಿಂಗ್ ಅನಿಸಿತ್ತು.
ಶಿವರಾಜ್ ಕುಮಾರ್ ಸಾರ್ ಅವರ ಸರಳ ವ್ಯಕ್ತಿತ್ವಕ್ಕೆ ನಾನು ಅಭಿಮಾನಿ. ಯಾಕಂದ್ರೆ ಶಿವಣ್ಣ ಜೊತೆ ಅಭಿನಯ ಮಾಡೋದಕ್ಕೆ ಸಾವಿರಾರು ಹೀರೋಯಿನ್ಗಳು ನಟಿಸೋಕೆ ಕ್ಯೂನಲ್ಲಿ ನಿಂತಿರುತ್ತಾರೆ. ಅಂತಹ ದೊಡ್ಡ ಗುಣ. ಸಹಜವಾಗಿ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಸ್ಟಾರ್ ಡಮ್ ಹೆಚ್ಚಿರುತ್ತೆ. ಆದರೆ, ಶಿವರಾಜ್ ಕುಮಾರ್ ವಿಷಯದಲ್ಲಿ ತದ್ವಿರುದ್ಧ. ಶಿವರಾಜ್ ಕುಮಾರ್ ಸಾರ್ ಹೊಸ ಪ್ರತಿಭಗಳು ಬೆಳೆಸುವ ಮನಸ್ಸು. ಹೀಗಾಗಿ ಶಿವರಾಜ್ ಕುಮಾರ್ ಸಾರ್ ಸಾವಿರಾರು ಸಿನಿಮಾಗಳನ್ನು ಮಾಡಲಿ ಅಂತಾ ಗಾನವಿ ಲಕ್ಷ್ಮಣ ಹಾರೈಯಿಸಿದರು.
ಇದನ್ನೂ ಓದಿ: ಗೆಲುವಿಗೆ ಇಡೀ ಚಿತ್ರತಂಡ ಕಾರಣ.. ವೇದ 2 ಮಾಡುವ ಆಲೋಚನೆಯಲ್ಲಿದ್ದೇವೆ:ಶಿವಣ್ಣ