ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ ಅಭಿನಯದ ಆರ್ಸಿ 15 ಸಿನಿಮಾ ಶೂಟಿಂಗ್ ಸದ್ಯ ನ್ಯೂಜಿಲೆಂಡ್ನಲ್ಲಿ ನಡೆಯುತ್ತಿದೆ. ನಟ ರಾಮ್ ಚರಣ್ ನ್ಯೂಜಿಲೆಂಡ್ ಸುತ್ತಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಚಿತ್ರಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡೈರೆಕ್ಟರ್ ಶಂಕರ್ ನಿರ್ದೇಶನದ 'RC15' ಸಿನಿಮಾ ಶೂಟಿಂಗ್ನ ಹೊಸ ಶೆಡ್ಯೂಲ್ ನ್ಯೂಜಿಲೆಂಡ್ನಲ್ಲಿ ಭರದಿಂದ ಸಾಗುತ್ತಿದೆ. ರಾಮ್ ಚರಣ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ದೇಶ ಸುತ್ತಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದಾರೆ. ರಾಮ್ ಚರಣ್ ನ್ಯೂಜಿಲೆಂಡ್‌ನ ಬೀದಿಗಳಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ 'ಇನ್ನೂ ಆಲೋಚನೆಗಳಲ್ಲಿ' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್ ಕೂಡ ಲೈಕ್ ಮಾಡಿದ್ದಾರೆ. ಹೊಸ ಲುಕ್ನಲ್ಲಿ ಕಾಣಿಸಿಕೊಂಡಿರುವ ರಾಮ್ ಚರಣ್ ಅಭಿಮಾನಿಗಳಲ್ಲಿ ಉತ್ಸಾಹ ತುಂಬಿದ್ದಾರೆ.
![Tollywood Hero Ram Charan stylish look](https://etvbharatimages.akamaized.net/etvbharat/prod-images/17046239_newwwsss.jpg)
ಇದನ್ನೂ ಓದಿ: 'ಕನ್ನಡ ಚಿತ್ರರಂಗವೇ ನನ್ನ ಕರ್ಮಭೂಮಿ' - ರಿಷಬ್ ಶೆಟ್ಟಿ
'RC15' ರಾಜಕೀಯ ಥ್ರಿಲ್ಲರ್ ಚಿತ್ರವಾಗಿದ್ದು, ಅದ್ಧೂರಿ ಬಜೆಟ್‌ನಲ್ಲಿ ತಯಾರಾಗುತ್ತಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್ ಜೊತೆ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ. ಶ್ರೀಕಾಂತ್, ಅಂಜಲಿ ಮತ್ತು ನವೀನ್ ಚಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಮುಂದಿನ ಚಿತ್ರ RC15ಕ್ಕೆ ಆರ್ಆರ್ಆರ್ ಸ್ಟಾರ್ ಭರ್ಜರಿ ಸಿದ್ಧತೆ
ತಮಿಳಿನ ಜನಪ್ರಿಯ ನಟ ಎಸ್‌ಜೆ ಸೂರ್ಯ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರ ಬಹಳ ಮುಖ್ಯವಾಗಿದ್ದು, ಪ್ರೇಕ್ಷಕರನ್ನು ಮೆಚ್ಚಿಸಲಿದೆ ಎಂದು ವರದಿಯಾಗಿದೆ. ಈ ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜು ಅವರ ಕಥೆ ಇದ್ದರೆ, ತಮನ್ ಧ್ವನಿ ಸಂಯೋಜಿಸುತ್ತಿದ್ದಾರೆ. ಜಾನಿ ಮಾಸ್ಟರ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಲಿದ್ದಾರೆ.