ETV Bharat / entertainment

ದಾಖಲೆ ಬರೆದ 'ವೀರ ಸಿಂಹ ರೆಡ್ಡಿ'.. ಒಂದೇ ಥಿಯೇಟರ್​ನಲ್ಲಿ 200 ದಿನ ಪ್ರದರ್ಶನ ಕಂಡ ಬಾಲಯ್ಯ ಸಿನಿಮಾ

author img

By

Published : Jul 30, 2023, 7:32 PM IST

Balakrishna record: ಸುಮಾರು 200 ದಿನಗಳ ಕಾಲ ಒಂದೇ ಚಿತ್ರಮಂದಿರಲ್ಲಿ ದಿನಕ್ಕೆ ನಾಲ್ಕು ಪ್ರದರ್ಶನದಂತೆ ಬಾಲಯ್ಯ ನಟನೆಯ 'ವೀರ ಸಿಂಹ ರೆಡ್ಡಿ' ಸಿನಿಮಾ ಪ್ರದರ್ಶನ ಕಂಡಿದೆ.

tollywood hero balakrishna
ಬಾಲಕೃಷ್ಣ

2023ರ ಬಹುನಿರೀಕ್ಷಿತ ತೆಲುಗು ಸಿನಿಮಾ 'ವೀರ ಸಿಂಹ ರೆಡ್ಡಿ' ಸಂಕ್ರಾಂತಿ ಸಮಯದಲ್ಲಿ ಬಿಡುಗಡೆಯಾಗಿ ಥಿಯೇಟರ್​ನಲ್ಲಿ ಸದ್ದು ಮಾಡಿತ್ತು. ನಟಸಿಂಹ ನಂದಮೂರಿ ಬಾಲಕೃಷ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಟಾಲಿವುಡ್ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಕಲೆಕ್ಷನ್​ ಮಾಡಿತ್ತು. ಬಾಲಯ್ಯ ಡ್ಯುಯೆಲ್​ ರೋಲ್​ನಲ್ಲಿ ಮಿಂಚಿದ್ದ ಈ ಚಿತ್ರ ಮೊದಲ ದಿನವೇ ಒಳ್ಳೆ ಟಾಕ್​ ಪಡೆದು ಹಣದ ಸುರಿಮಳೆಯನ್ನೇ ಹರಿಸಿತ್ತು.​

ದಾಖಲೆ ಬರೆದ 'ವೀರ ಸಿಂಹ ರೆಡ್ಡಿ': ಇತ್ತೀಚೆಗಷ್ಟೇ 'ವೀರ ಸಿಂಹ ರೆಡ್ಡಿ' ಸಿನಿಮಾ ಅಪರೂಪದ ದಾಖಲೆ ಬರೆದಿದೆ. ಸುಮಾರು 200 ದಿನಗಳ ಕಾಲ ಒಂದೇ ಚಿತ್ರಮಂದಿರಲ್ಲಿ ದಿನಕ್ಕೆ ನಾಲ್ಕು ಪ್ರದರ್ಶನದಂತೆ ಸಿನಿಮಾ ಪ್ರದರ್ಶನ ಕಂಡಿದೆ. ಈ ಮೂಲಕ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದಿದೆ. ಇದಕ್ಕೆ ಸಾಕ್ಷಿಯಾದದ್ದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆಲೂರಿನಲ್ಲಿರುವ ಎಸ್‌ಎಲ್‌ಎನ್‌ಎಸ್ ಥಿಯೇಟರ್‌. ಜನವರಿ 12 ರಂದು ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರವು ಎಸ್‌ಎಲ್‌ಎನ್‌ಎಸ್ ಥಿಯೇಟರ್​ನಲ್ಲಿ ಏಪ್ರಿಲ್ 21 ರಂದು 100 ದಿನಗಳ ಗಡಿ ದಾಟಿದೆ. ಕಳೆದ ಶುಕ್ರವಾರ 200 ದಿನಗಳನ್ನು ಪೂರೈಸಿದೆ.

ನಂದಮೂರಿ ಬಾಲಕೃಷ್ಣ ಅವರಿಗೆ ಇಂತಹ ದಾಖಲೆಗಳೇನು ಹೊಸತಲ್ಲ. ಅವರು ನಟಿಸಿದ ಅನೇಕ ಸಿನಿಮಾಗಳು ದಾಖಲೆಯನ್ನು ಬರೆದಿವೆ. ಹಾಗಾಗಿ ಈ ಪಟ್ಟಿಯಲ್ಲಿ ಒಂದಲ್ಲ, ಎರಡಲ್ಲ 'ವೀರ ಸಿಂಹ ರೆಡ್ಡಿ' ಸೇರಿದಂತೆ ಆರು ಚಿತ್ರಗಳಿವೆ. ಅವುಗಳಲ್ಲಿ 'ಮಂಗಮ್ಮ ಗರಿ ಮನವಡು', 'ಲೆಜೆಂಡ್', 'ಸಿಂಹ', 'ನರಸಿಂಹ ನಾಯ್ಡು', 'ಸಮರ ಸಿಂಹ ರೆಡ್ಡಿ' ಚಿತ್ರ ಸುಮಾರು 200 ದಿನಗಳ ಕಾಲ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಓರ್ವ ನಟನ ಚಿತ್ರ ಒಂದೇ ಥಿಯೇಟರ್​ನಲ್ಲಿ 200 ದಿನ ಪ್ರದರ್ಶನ ಕಾಣುತ್ತಿರುವುದು ಅಪರೂಪದ ದಾಖಲೆಯೇ ಸರಿ. ಈ ಅಪರೂಪದ ಸಾಧನೆ ಮಾಡಿರುವುದು ಬಾಲಯ್ಯ ಅನ್ನೋದು ಮತ್ತೊಂದು ಹೆಮ್ಮೆಯ ವಿಚಾರ.

ಇದನ್ನೂ ಓದಿ: ವಧುವಿನಂತೆ ಕಂಗೊಳಿಸುತ್ತಿರುವ ಮೃಣಾಲ್​ ಠಾಕೂರ್​; ಕ್ಯಾಪ್ಶನ್​ ನೋಡಿ ಫ್ಯಾನ್ಸ್​ ಶಾಕ್​!

ಬಾಲಯ್ಯ ಮುಂದಿನ ಸಿನಿಮಾ: ನಂದಮೂರಿ ಬಾಲಕೃಷ್ಣ ನಟನೆಯ ಮುಂದಿನ ಚಿತ್ರ 'ಭಗವಂತ ಕೇಸರಿ'. ಈ ಸಿನಿಮಾಗೆ ಪ್ರಾರಂಭದಲ್ಲಿ NBK108 ಟೈಟಲ್​ ಇಡಲಾಗಿತ್ತು. ಅನಿಲ್ ರವಿಪುಡಿ ನಿರ್ದೇಶನದಲ್ಲಿ 'ಭಗವಂತ ಕೇಸರಿ' ಮೂಡಿಬರುತ್ತಿದೆ. ದಸರಾ ಪ್ರಯುಕ್ತ ಅಕ್ಟೋಬರ್​ 19 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನ್‌ಮೆಂಟ್ ಆಗಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಬಾಲಯ್ಯ ಹಿರಿಯ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಯ್ಯ ಜೊತೆ ನಟಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್​ನ ಮೊದಲ ಚಿತ್ರವಿದು. ಬಾಲಯ್ಯ ಮತ್ತು ಶ್ರೀಲೀಲಾ ತಂದೆ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ವಿಲನ್​ ಪಾತ್ರ ಮಾಡಲಿದ್ದಾರೆ. ಶೈನ್ ಸ್ಕ್ರೀನ್ ಬ್ಯಾನರ್ ಅಡಿ ಹರೀಶ್ ಪೆದ್ದಿ ಮತ್ತು ಸಾಹು ಗರಪಾಟಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: RARKPK ಸಿನಿಮಾದ 'ವಾಟ್ ಜುಮ್ಕಾ' ಹಾಡಿಗೆ ದೀಪ್​ವೀರ್​ ದಂಪತಿ ಡ್ಯಾನ್ಸ್​; ನೀವೂ ನೋಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.