ETV Bharat / entertainment

'ಕುಡಿದ ಮತ್ತಿನಲ್ಲಿ ತೂರಾಡಿದ ಸನ್ನಿ ಡಿಯೋಲ್'​​: ಇದು ನಿಜವಲ್ಲ, 'ಸಫರ್' ಸಿನಿಮಾ ಶೂಟಿಂಗ್! - Safar movie

ಕುಡಿದ ಮತ್ತಿನಲ್ಲಿ ತೂರಾಡಿರುವಂತೆ ಬಾಲಿವುಡ್​ ನಟ ಸನ್ನಿ ಡಿಯೋಲ್ ಅವರ ವಿಡಿಯೋವೊಂದು ವೈರಲ್​ ಆಗಿತ್ತು.

Sunny Deol
ಸನ್ನಿ ಡಿಯೋಲ್
author img

By ETV Bharat Karnataka Team

Published : Dec 7, 2023, 11:19 AM IST

ಗದರ್ 2 ಸಿನಿಮಾದ ಯಶಸ್ಸಿನ ನಂತರ ಬಾಲಿವುಡ್​ ನಟ ಸನ್ನಿ ಡಿಯೋಲ್ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಆದರೆ ಇತ್ತೀಚೆಗೆ ವೈರಲ್​ ವಿಡಿಯೋ ಸಲುವಾಗಿ ಭಾರಿ ಸುದ್ದಿಯಾಗಿದ್ದರು. ವಿಡಿಯೋವೊಂದು ವೈರಲ್​ ಆಗಿ ನಟನ ವರ್ತನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ರೀಗ ಅಸಲಿ ವಿಚಾರ ಹೊರಬಂದಿದೆ.

ಜುಹು ಸರ್ಕಲ್‌ನಲ್ಲಿ ಸನ್ನಿ ಡಿಯೋಲ್ ಅಡ್ಡಾಡುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್ ಆಯ್ತು. ನಟ ಅಮಲೇರಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕುಡಿದ ಮತ್ತಿನಲ್ಲಿ ಅಡ್ಡಾಡುತ್ತಿರುವಂತೆ ವೈರಲ್​ ವಿಡಿಯೋ ಚಿತ್ರಿಸಿತ್ತು. ಆದರೆ ಅಸಲಿ ವಿಚಾರ ಅದಲ್ಲ. ಬುಧವಾರದಂದು ಸ್ವತಃ ಸನ್ನಿ ಡಿಯೋಲ್​ ಅವರೇ ತಮ್ಮ ವೈರಲ್ ವಿಡಿಯೋ ಹಿಂದಿರುವ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಮುಂಬೈನ ಜುಹು ಸರ್ಕಲ್‌ನಲ್ಲಿ ನಟ ಸನ್ನಿ ಡಿಯೋಲ್ ಕುಡಿದು ತೂರಾಡುತ್ತಾ ನಡೆದುಕೊಂಡು ಹೋಗುತ್ತಿರುವುದನ್ನು ವೈರಲ್​ ವಿಡಿಯೋದಲ್ಲಿ ಕಾಣಬಹುದು. ಆಟೋರಿಕ್ಷಾವೊಂದರ ಚಾಲಕ ನಟನನ್ನು ಮಾತನಾಡಿಸಿ, ಆಟೋದೊಳಗೆ ಕೂರಿಸುತ್ತಾರೆ. ಬಳಿಕ ಇಬ್ಬರೂ ಅಲ್ಲಿಂದ ನಿರ್ಗಮಿಸುತ್ತಾರೆ. ಆದರೆ, ಈ ವಿಡಿಯೋ ಹಿಂದಿರುವ ಸತ್ಯ ಬಯಲಾಗಿದೆ.

ವಾಸ್ತವವಾಗಿ ನಟ ಸನ್ನಿ ಡಿಯೋಲ್, 'ಸಫರ್' ಶೀರ್ಷಿಕೆಯ ಸಿನಿಮಾ ಶೂಟಿಂಗ್​​​​ನಲ್ಲಿದ್ದರು. ಅವರು ಮದ್ಯದ ಅಮಲಿನಲ್ಲಿರಲಿಲ್ಲ, ಆದ್ರೆ ಮದ್ಯದ ನಶೆ ಏರಿ ತೂರಾಡುತ್ತಿರುವಂತೆ ನಟಿಸುತ್ತಿದ್ದರು. ಈ ಸಿನಿಮಾ ಮರಾಠಿ ಚಲನಚಿತ್ರ 'ಪ್ರವಾಸ್‌'ನ ರೀಮೇಕ್ ಆಗಿದ್ದು, ಶಶಾಂಕ್ ಉದ್ರಾಪುರ್ಕರ್ ಅವರ ನಿರ್ದೇಶನವಿದೆ. ಗದರ್ 2 ನಟ ಜೀನ್ಸ್, ಕ್ಯಾಶುವಲ್​ ವೈಟ್​ ಶರ್ಟ್ ಧರಿಸಿ ಆಟೋ ಡ್ರೈವರ್‌ನೊಂದಿಗೆ ಮಾತನಾಡಿರುವುದು ಕಂಡು ಬಂದಿದೆ. ವಿಡಿಯೋ ವೈರಲ್​ ಆದ ಬಳಿಕ ಸನ್ನಿ ಡಿಯೋಲ್​ ತಮ್ಮ ಮುಂದಿನ ಸಿನಿಮಾ ಸಫರ್​ನ ತೆರೆಮರೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಅಫ್ವಾಹೋನ್ ಕಾ 'ಸಫರ್' ಬಸ್ ಯಹಿ ತಕ್" ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ಯಶಸ್ವಿ ದಾಂಪತ್ಯ ಜೀವನಕ್ಕೆ ಇದೇ ಕಾರಣ!

ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಲು ಆರಂಭಿಸಿದ್ದರು. ಆನ್​ಲೈನ್​ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಇದು ಡೀಪ್‌ಫೇಕ್ ವಿಡಿಯೋ ಎಂದು ನಂಬಿದ್ದರು, ಹಲವರು ನಿಜವಾಗಿಯೂ ಅಮಲೇರಿದ್ದಾರೆಂದು ನಂಬಿದ್ದರು. ಅದಾಗ್ಯೂ, ಸಿನಿಮಾ ಶೂಟಿಂಗ್​ ಇರಬಹುದೇನೋ ಎಂದು ಒಂದಿಷ್ಟು ಮಂದಿ ನಂಬಿದ್ದರು.

ಇದನ್ನೂ ಓದಿ: ಧಾರ್ಮಿಕ ನಂಬಿಕೆಗಳಿಗಾಗಿ ಪ್ರೀತಿ ತ್ಯಾಗ ಮಾಡಿದ ಆಸಿಮ್ ರಿಯಾಜ್ - ಹಿಮಾಂಶಿ ಖುರಾನಾ!

ಕೆಲ ತಿಂಗಳ ಹಿಂದಿನ ಸಂದರ್ಶನವೊಂದರಲ್ಲಿ ಸನ್ನಿ ಡಿಯೋಲ್ ತಾವು ಕುಡಿಯುವುದಿಲ್ಲ ಎಂದು ಹೇಳಿಕೊಂಡಿದ್ದರು. ಅಲ್ಲದೇ ಜನರು ಈ ಡ್ರಿಂಕ್ಸ್​ ಅನ್ನು ಹೇಗೆ ಆನಂದಿಸುತ್ತಾರೆ, ಅದೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದ್ದರು. ಕಹಿಯಾಗಿರುತ್ತದೆ, ಕೆಟ್ಟ ವಾಸನೆ ಹೊಂದಿರುತ್ತದೆ, ತಲೆನೋವು ಬರುತ್ತದೆ ಎಂದು ಹೇಳಿಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.