ETV Bharat / entertainment

ಹಾಲಿವುಡ್​ ಸಿನಿಮಾ 'ಬೀಸ್ಟ್​' ಪೋಸ್ಟರ್​ನ ಕಾಪಿ ಮಾಡಿದ್ಯಾ 'ಪಠಾಣ್​' ? - ಶಾರುಖ್​ ಖಾನ್​ ಸಿನಿಮಾ ಪಠಾಣ್​

ಅನೇಕ ಅಭಿಮಾನಿಗಳು ಪೋಸ್ಟರ್​ ನೋಡಿ ಖುಷಿ ಪಟ್ಟರೂ, ಕೆಲ ನಟಿಜನ್ಸ್​ ಕ್ಷಣ ಮಾತ್ರದಲ್ಲಿ ಹಾಲಿವುಡ್​ ಬೀಸ್ಟ್​ ಸಿನಿಮಾದ ಪೋಸ್ಟರ್​ ಅನ್ನು ಕಾಪಿ ಮಾಡಲಾಗಿದೆ ಎಂದು ಕಮೆಂಟ್​ಗಳ ಚಾಟಿ ಬೀಸಿದ್ದಾರೆ.

Pathaan and Beast posters
ಪಠಾಣ್​ ಹಾಗೂ ಬೀಸ್ಟ್​ ಸಿನಿಮಾ ಪೋಸ್ಟರ್​
author img

By

Published : Jun 28, 2022, 1:13 PM IST

ಮುಂಬೈ: ಬಾಲಿವುಡ್​ ಬಾದ್​ಶಾ ಶಾರುಖ್​ ಖಾನ್​ ಹಾಗೂ ದೀಪಿಕಾ ಪಡುಕೋಣೆ ಜೋಡಿಯಾಗಿರುವ 'ಪಠಾಣ್​' ಸಿನಿಮಾ ಮುಂದಿನ ವರ್ಷ ಜನವರಿಗೆ 25ಕ್ಕೆ ತೆರೆಗೆ ಬರಲಿದ್ದು, ಭಾನುವಾರ ಸಿನಿಮಾದ ಮೊದಲ ಪೋಸ್ಟರ್​ ರಿಲೀಸ್​ ಆಗಿದ್ದು, ಪೋಸ್ಟರ್​ ನೋಡಿದ ಅಭಿಮಾನಿಗಳು ಇದನ್ನು ಹಾಲಿವುಡ್​ನ ಇದ್ರಿಸ್​ ಎಲ್ಬಾ ಅವರ ಬೀಸ್ಟ್​ನ ಪೋಸ್ಟರ್​ಗೆ ಹೋಲಿಕೆ ಇದೆ ಎಂದು ಕಮೆಂಟ್​ ಮಾಡಿದ್ದಾರೆ.

ಪೋಸ್ಟರ್​ನಲ್ಲಿ ಶಾರುಖ್​ ಖಾನ್​ ಕೈಯ್ಯಲ್ಲಿ ಶಾಟ್​ಗನ್​ ಹಿಡಿದು ಕ್ಯಾಮರಾಕ್ಕೆ ಬೆನ್ನು ಹಾಕಿ ಭಾಗಶಃ ಮುಖವನ್ನು ತಿರುಗಿಸಿ ನಿಂತಿದ್ದಾರೆ. ಇದು ಶಾರುಖ್​ ಖಾನ್​ ಅವರ ಲುಕ್​ ಅನ್ನು ಬಹಿರಂಗ ಪಡಿಸಿದ ಮೊದಲ ಪೋಸ್ಟರ್​. ಇತ್ತೀಚೆಗಷ್ಟೇ ಸಿನಿರಂಗದಲ್ಲಿ 30 ವರ್ಷಗಳನ್ನು ಪೂರೈಸಿರುವ ಶಾರುಖ್​ ಖಾನ್​ ನಾಲ್ಕು ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಬಾದ್​ಶಾ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಪಠಾಣ್​ ಹಾಗೂ ಬೀಸ್ಟ್​ ಸಿನಿಮಾ ಪೋಸ್ಟರ್​

ಅನೇಕ ಅಭಿಮಾನಿಗಳು ಪೋಸ್ಟರ್​ ನೋಡಿ ಖುಷಿ ಪಟ್ಟರೂ, ಕೆಲ ನಟಿಜನ್ಸ್​ ಕ್ಷಣ ಮಾತ್ರದಲ್ಲಿ ಹಾಲಿವುಡ್​ ಬೀಸ್ಟ್​ ಸಿನಿಮಾದ ಪೋಸ್ಟರ್​ ಅನ್ನು ಕಾಪಿ ಮಾಡಲಾಗಿದೆ ಎಂದು ಕಮೆಂಟ್​ಗಳ ಚಾಟಿ ಬೀಸಿದ್ದಾರೆ. ಇದ್ರಿಸ್ ಎಲ್ಬಾ ಅವರ ಬೀಸ್ಟ್ ಪೋಸ್ಟರ್ ಅನ್ನು ಮೊದಲು ಬಿಡುಗಡೆ ಮಾಡಲಾಗಿತ್ತು. ಈ ಪೋಸ್ಟರ್​ನಲ್ಲೂ ಎಲ್ಬಾ ಅದೇ ಶೈಲಿಯಲ್ಲಿ ನಿಂತು ಕೈಯ್ಯಲ್ಲಿ ಚಾಕು ಹಿಡಿದುಕೊಂಡಿದ್ದಾರೆ. ಚಿತ್ರ ಈ ವರ್ಷ ಆಗಸ್ಟ್ 19 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಟ್ವಿಟರ್​ನಲ್ಲಿ ಹಲವಾರು ಹ್ಯಾಷ್​​ಟ್ಯಾಗ್​​​​ಗಳು ಕ್ರಿಯೇಟ್​ ಆಗಿದ್ದು, ಕೆಲವರು ಎರಡೂ ಪೋಸ್ಟರ್​ಗಳನ್ನು ಸೂಕ್ಷ್ಮವಾಗಿ ನೋಡಿ ಅವುಗಳಲ್ಲಿ ತುಂಬಾ ವ್ಯತ್ಯಾಸಗಳಿವೆ ಎಂದು ನಟ ಹಾಗೂ ನಿರ್ದೇಶಕ ಸಿದ್ಧಾರ್ಥ್​ ಆನಂದ್​ ಅವರ ಪರವಾಗಿ ಮಾತನಾಡಿದ್ದಾರೆ. ಶಾರುಖ್​ ಮರು ಎಂಟ್ರಿಯಾಗಿದೆ. ಇದು ಬೀಸ್ಟ್​ ಸಿನಿಮಾದ ರೀಮೇಕ್​ ಅಲ್ಲ ಎಂದು ನಂಬುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಮತ್ತೊಬ್ಬರು, ಬಾಲಿವುಡ್ ತನ್ನ ಸೃಜನಶೀಲತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಇದು ಸಂಗೀತವನ್ನು, ಅಂದರೆ ಹಳೆಯ ಹಾಡುಗಳನ್ನು ಮರುಸೃಷ್ಟಿಸುವುದು ಮತ್ತು ರಿಮಿಕ್ಸ್​ ಮಾಡುವುದರಿಂದ ಪ್ರಾರಂಭವಾಗಿತ್ತು. ಈಗ ರೀಮೇಕ್​ ಪೋಸ್ಟರ್​ ಪರಿಕಲ್ಪನೆಯನ್ನು ನಕಲು ಮಾಡುವಲ್ಲಿಗೆ ಬಂದಿದೆ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ : ಮತ್ತೆ ತೆರೆ ಹಂಚಿಕೊಳ್ಳಲಿರುವ ದೀಪಿಕಾ - ರಣಬೀರ್ ಕಪೂರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.