ಬಾಲಿವುಡ್ ಖ್ಯಾತ ಮತ್ತು ಹಿರಿಯ ನಟ ಸತೀಶ್ ಕೌಶಿಕ್ ಹೋಳಿ ಹಬ್ಬ ಸಂದರ್ಭ (ಮಾರ್ಚ್ 7) ಹೃದಯಾಘಾತದಿಂದ ನಿಧನರಾದರು. ಈ ಸುದ್ದಿ ಚಿತ್ರರಂಗ ಮತ್ತು ಅಭಿಮಾನಿಗಳ ಕಂಬನಿಗೆ ಕಾರಣವಾಗಿತ್ತು.
ಆ ದಿನಗಳಲ್ಲಿ ದಿ. ನಟ ಸತೀಶ್ ಕೌಶಿಕ್ ಸ್ನೇಹಿತರೊಂದಿಗೆ ಹೋಳಿ ಆಡಿದ್ದ ಸಂಭ್ರಮಿಸಿದ್ದರು. ಆದ್ರೆ ಅವರ ನಿರ್ಗಮನವು ಅವರ ಅಭಿಮಾನಿಗಳ ಹೋಳಿ ಹಬ್ಬವನ್ನು ಬಣ್ಣರಹಿತವಾಗಿಸಿತು. ಚಿತ್ರರಂಗದವರು, ಗಣ್ಯರು ಸೇರಿದಂತೆ ಅಭಿಮಾನಿಗಳು ನಟನ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ, ನಟ ಸತೀಶ್ ಕೌಶಿಕ್ ಅವರ ನಿಧನಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಸಂತಾಪ ಸೂಚಿಸಿದ್ದರು. ಆ ಕಠಿಣ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಸತೀಶ್ ಕೌಶಿಕ್ ಅವರ ಕುಟುಂಬಕ್ಕೆ ಪತ್ರವನ್ನು ಕಳುಹಿಸಲಾಗಿತ್ತು. ಇದೀಗ ಸತೀಶ್ ಕೌಶಿಕ್ ಅವರ ಪತ್ನಿ ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
-
Pained by the untimely demise of noted film personality Shri Satish Kaushik Ji. He was a creative genius who won hearts thanks to his wonderful acting and direction. His works will continue to entertain audiences. Condolences to his family and admirers. Om Shanti.
— Narendra Modi (@narendramodi) March 9, 2023 " class="align-text-top noRightClick twitterSection" data="
">Pained by the untimely demise of noted film personality Shri Satish Kaushik Ji. He was a creative genius who won hearts thanks to his wonderful acting and direction. His works will continue to entertain audiences. Condolences to his family and admirers. Om Shanti.
— Narendra Modi (@narendramodi) March 9, 2023Pained by the untimely demise of noted film personality Shri Satish Kaushik Ji. He was a creative genius who won hearts thanks to his wonderful acting and direction. His works will continue to entertain audiences. Condolences to his family and admirers. Om Shanti.
— Narendra Modi (@narendramodi) March 9, 2023
ಪಿಎಂಗೆ ಧನ್ಯವಾದ ತಿಳಿಸಿದ ಶಶಿ ಕೌಶಿಕ್: ''ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ, ಈ ದುಃಖದ ಸಮಯದಲ್ಲಿ ನಿಮ್ಮ ಸಂವೇದನಾಶೀಲ ಪತ್ರವು ನನಗೆ ಮತ್ತು ನಮ್ಮ ಕುಟುಂಬಕ್ಕೆ ಮುಲಾಮಿನಂತೆ ಕಾರ್ಯ ನಿರ್ವಹಿಸಿದೆ. ಆ ದುಃಖವನ್ನು ನಿಭಾಯಿಸಲು ನನಗೆ ಶಕ್ತಿ ತುಂಬಿದಿರಿ. ನಾನು, ಮಗಳು ವಂಶಿಕಾ, ನಮ್ಮ ಇಡೀ ಕುಟುಂಬದ ಪರವಾಗಿ ಮತ್ತು ಸತೀಶ್ ಅವರ ಎಲ್ಲಾ ಅಭಿಮಾನಿಗಳ ಪರವಾಗಿ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ ಮತ್ತು ನಿಮ್ಮ ಧೀರ್ಘ ಆರೋಗ್ಯಕರ ಜೀವನಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ, ವಂದನೆಗಳು, ಶಶಿ ಕೌಶಿಕ್'' ಎಂದು ತಿಳಿಸಿದ್ದಾರೆ,.
ಪ್ರಧಾನಿ ನರೇಂದ್ರ ಮೋದಿ ಸಂತಾಪ: ಹಿರಿಯ ನಟ ಸತೀಶ್ ಕೌಶಿಕ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದರು. 'ಅತ್ಯುತ್ತಮ ನಟ ಸತೀಶ್ ಕೌಶಿಕ್ ಅವರ ನಿಧನದಿಂದ ಆಘಾತಕ್ಕೊಳಗಾಗಿದ್ದೇನೆ, ಅವರು ಅದ್ಭುತ ಕಲಾವಿದರಾಗಿದ್ದರು, ಅವರು ತಮ್ಮ ನಟನೆಯಿಂದ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ. ನಿಮ್ಮ ಅದ್ಭುತ ಕೊಡುಗೆಗಳು, ನಿಮ್ಮ ಕೆಲಸವು ನಿಮ್ಮ ಪ್ರೀತಿಪಾತ್ರರ ಹೃದಯದಲ್ಲಿ ಉಳಿಯುತ್ತದೆ, ಕುಟುಂಬಕ್ಕೆ ನನ್ನ ಸಂತಾಪ, ಓಂ ಶಾಂತಿ' ಎಂದು ಪಿಎಂ ಮೋದಿ ಸಂಪಾಪ ಸೂಚಿಸಿದ್ದರು.
![shashi Kaushik expresses gratitude to pm](https://etvbharatimages.akamaized.net/etvbharat/prod-images/18020659_1.png)
ಸತೀಶ್ ಸಿನಿ ಪಯಣ: ದಿ. ನಟ ಸತೀಶ್ ಚಂದ್ರ ಕೌಶಿಕ್ ಅವರು 1956ರ ಏಪ್ರಿಲ್ 13ರಂದು ಹರಿಯಾಣದಲ್ಲಿ ಜನಿಸಿದರು. 1980ರ ದಶಕದಲ್ಲಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ಅಮೋಘ ಅಭಿನಯ, ಹಾಸ್ಯಪ್ರಜ್ಞೆಯಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಅದ್ಭುತ ನಟ, ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಭಾರತೀಯ ಚಲನಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿದ್ದರು. 1980 ಮತ್ತು 1990ರ ದಶಕದಲ್ಲಿ ಮಿಸ್ಟರ್ ಇಂಡಿಯಾ, ಸಾಜನ್ ಚಲೇ ಸಸುರಾಲ್ ಮತ್ತು ಜುದಾಯಿಯಂತಹ ಚಿತ್ರಗಳ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು.
ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ ಕಬ್ಜ.. ಸೀಕ್ವೆಲ್ಗೆ ಕಥೆ ರೆಡಿಯೆಂದ ನಿರ್ದೇಶಕ
ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ತಮ್ಮ ಆಪ್ತ ಸ್ನೇಹಿತನ ಹಠಾತ್ ನಿಧನದ ಸುದ್ದಿಯನ್ನು ಬಹಿರಂಗಪಡಿಸಿದ ಮೊದಲ ವ್ಯಕ್ತಿ. ಇಬ್ಬರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅನುಪಮ್ ಖೇರ್, ನಟ ಸತೀಶ್ ಕೌಶಿಕ್ ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ ಮಿಂಚಿದ್ದ ದೀಪಿಕಾ ಮರಳಿ ಸ್ವದೇಶಕ್ಕೆ: ಪಡುಕೋಣೆ ಏರ್ಪೋರ್ಟ್ ಲುಕ್ ವೈರಲ್