ETV Bharat / entertainment

ಬಿಡುಗಡೆಯಾದ ಮೊದಲ ದಿನವೇ ಬಾಂಗ್ಲಾದೇಶದಲ್ಲಿ 'ಜವಾನ್​' ಪ್ರದರ್ಶನ; ಶಾರುಖ್​ಗೆ ಮತ್ತೊಂದು ಯಶಸ್ಸು! - etv bharat kannada

Jawan hits screens in Bangladesh: ಶಾರುಖ್​ ಖಾನ್​ ನಟನೆಯ 'ಜವಾನ್​' ಸಿನಿಮಾ ಬಾಂಗ್ಲಾದೇಶದಲ್ಲೂ ಬಿಡುಗಡೆಯಾಗಿದೆ. ಭಾರತದಲ್ಲಿ ತೆರೆಕಂಡ ದಿನವೇ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಚಲನಚಿತ್ರ ಇದಾಗಿದೆ.

Jawan
ಜವಾನ್
author img

By ETV Bharat Karnataka Team

Published : Sep 8, 2023, 4:14 PM IST

ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ ನಟನೆಯ 'ಜವಾನ್​' ಸಿನಿಮಾ ಸಾಕಷ್ಟು ವಿವಾದಗಳ ನಂತರ ಬಾಂಗ್ಲಾದೇಶದ ಸೆನ್ಸಾರ್​ ಮಂಡಳಿಯಿಂದ ಯಶಸ್ವಿಯಾಗಿ ಕ್ಲಿಯರೆನ್ಸ್​ ಪಡೆದುಕೊಂಡಿದೆ. ಈ ಮೂಲಕ ದೇಶದ ಚಿತ್ರಮಂದಿರಗಳಲ್ಲಿ ಜವಾನ್​ ಬಿಡುಗಡೆಗೆ ಅನುಮತಿ ದೊರೆತಿದೆ. ವಿಶ್ವದಾದ್ಯಂತ ಚಿತ್ರವು ನಿನ್ನೆ, ಸೆಪ್ಟಂಬರ್​ 7ರಂದು ಬಿಡುಗಡೆಯಾಗಿದೆ. ಭಾರತದಲ್ಲಿ ತೆರೆಕಂಡ ದಿನವೇ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಚಲನಚಿತ್ರ ಇದಾಗಿದೆ.

ವರದಿಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ಜವಾನ್​ ಸಿನಿಮಾವು ಸೆಪ್ಟಂಬರ್​ 7ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೆನ್ಸಾರ್​ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಬಳಿಕ ರಾತ್ರಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿದೆ. ಇದಕ್ಕೂ ಮೊದಲು ಸಲ್ಮಾನ್​ ಖಾನ್​ ಅವರ 'ಕಿಸಿ ಕಿ ಭಾಯ್​ ಕಿಸಿ ಕಿ ಜಾನ್'​ ಸಿನಿಮಾವು ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಿತ್ತು. ಆದರೆ, ಅದು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಅದಕ್ಕೂ ಮುನ್ನ 'ಪಠಾಣ್​' ಸಿನಿಮಾವು ಬಾಂಗ್ಲಾ ಜನರಿಂದ ಭಾರೀ ಉತ್ಸಾಹ ಮತ್ತು ಪ್ರತಿಕ್ರಿಯೆಯನ್ನು ಗಳಿಸಿತ್ತು.

ಆದರೆ ವಿಶೇಷವಾಗಿ, ವಿದೇಶಿ ಸಿನಿಮಾವು ಮೊದಲ ಪ್ರದರ್ಶನ ಕಂಡ ಬಳಿಕ ಕೆಲವು ದಿನಗಳ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗುತ್ತದೆ. ಆದರೆ ಈ ರೂಢಿಯನ್ನು ಜವಾನ್​ ಪುಡಿ ಮಾಡಿದೆ. ಜವಾನ್​ ಸಿನಿಮಾ ಭಾರತದಲ್ಲಿ ತೆರೆ ಕಂಡ ದಿನವೇ ಬಾಂಗ್ಲಾದಲ್ಲೂ ಪ್ರಥಮ ಪ್ರದರ್ಶನ ಕಂಡಿದೆ. ಇದು ಶಾರುಖ್​ ಖಾನ್​ಗೆ ಮತ್ತೊಂದು ಯಶಸ್ಸನ್ನು ತಂದುಕೊಟ್ಟಿದೆ. ಬಾಂಗ್ಲಾದೇಶದಲ್ಲಿರುವ ಬಾದ್​ ಶಾ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ: Jawan review: 'ಜವಾನ್​'ಗೆ ಎಲ್ಲೆಡೆ ಅದ್ಭುತ ರೆಸ್ಪಾನ್ಸ್​.. ಪ್ರೇಕ್ಷಕರಿಂದ ಶಾರುಖ್​ ಸಿನಿಮಾಗೆ ಸಿಕ್ತು ಫುಲ್​ ಮಾರ್ಕ್ಸ್​​

ಜವಾನ್​ ಸಿನಿಮಾವನ್ನು ಬಾಂಗ್ಲಾದೇಶದಲ್ಲಿ ಅದು ಕೂಡ ಮೊದಲ ದಿನವೇ ಬಿಡುಗಡೆ ಮಾಡಲು ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಏಕೆಂದರೆ ಇಂದಿನಿಂದ ಅಲ್ಲಿ ಎರಡು ಸಿನಿಮಾಗಳು ಬಿಡುಗಡೆಯಾಗಿದೆ. ಹೀಗಿರುವಾಗ ಅಲ್ಲಿನ ನಿರ್ಮಾಣ ಸಂಸ್ಥೆ ಮತ್ತು ನಟರಿಗೆ ಕಲೆಕ್ಷನ್​ ವಿಚಾರದಲ್ಲಿ ತೊಡಕಾದಿತು ಎಂಬ ಕಾರಣಕ್ಕೆ ಜವಾನ್​ ಬಿಡುಗಡೆಗೆ ವಿರೋಧ ಕೇಳಿಬಂದಿತ್ತು. ಬಾಂಗ್ಲಾದೇಶ ಚಲನಚಿತ್ರ ನಿರ್ಮಾಪಕರ ಸಂಘದ ಅಲಿಖಿತ ನಿಯಮಗಳ ಪ್ರಕಾರ, ಬಾಂಗ್ಲಾದಲ್ಲಿ ಒಂದು ವಾರದಲ್ಲಿ ಎರಡಕ್ಕಿಂತ ಹೆಚ್ಚು ಚಿತ್ರಗಳನ್ನು ಬಿಡುಗಡೆ ಮಾಡುವಂತಿಲ್ಲ.

ಎರಡು ಬಾಂಗ್ಲಾದೇಶ ಸಿನಿಮಾಗಳಾದ ದೆಲ್ವಾರ್​ ಜಹಾನು ಜಾಂತು ನಿರ್ದೇಶನದ ಸುಜನ್​ ಮಾಝಿ ಮತ್ತು ಮುಶ್ಪಿಕರ್​ ರೆಹಮಾನ್​ ಗುಲ್ಜಾರ್​ ನಿರ್ದೇಶನದ ದುಃಶಶಿ ಖೋಕಾ ಸಿನಿಮಾ ಸೆಪ್ಟಂಬರ್​ 8 (ಇಂದು) ಬಿಡುಗಡೆಯಾಗಿದೆ. ಹೀಗಿರುವಾಗ ಈ ಎರಡು ಸ್ಥಳೀಯ ಚಿತ್ರಗಳನ್ನು ಈಗಾಗಲೇ ನಿಗದಿಪಡಿಸಲಾಗಿದ್ದು, ಮುಂಬರುವ ವಾರದಲ್ಲಿ ಯಾವುದೇ ಹೆಚ್ಚುವರಿ ಚಿತ್ರ ಬಿಡುಗಡೆಗೆ ಅವಕಾಶವಿರುವುದಿಲ್ಲ ಎಂದು ದೆಲ್ವಾರ್​ ಜಹಾನು ಪ್ರತಿಪಾದಿಸಿದ್ದರು.

ಈ ಮಧ್ಯೆ ತಮಿಳು ನಿರ್ದೇಶಕ ಅಟ್ಲೀ ಅವರ ಜವಾನ್​ ಬಾಂಗ್ಲಾದೇಶದಲ್ಲಿ ತೆರೆಕಂಡಿದ್ದು, ಶಾರುಖ್​ ಅಭಿಮಾನಿಗಳ ಸಂಭ್ರಮಾಚರಣೆಗೆ ಕಾರಣವಾಗಿತ್ತು. ಈ ಆ್ಯಕ್ಷನ್​ ಪ್ಯಾಕ್ಡ್​ ಎಂಟರ್​ಟೈನ್​ಮೆಂಟ್​ ಸಿನಿಮಾ ಭಾರತ ಮಾತ್ರವಲ್ಲದೇ ಯುನೈಟೆಡ್​ ಸ್ಟೇಟ್ಸ್​ ಮತ್ತು ದುಬೈನಲ್ಲೂ ಪ್ರದರ್ಶನ ಕಾಣುತ್ತಿದೆ. ಬಾದ್​ ಶಾ ಅಭಿಮಾನಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಹಿಂದಿ ಚಿತ್ರರಂಗದ ಈವರೆಗಿನ ಬಾಕ್ಸ್​ ಆಫೀಸ್​ ದಾಖಲೆ ಮುರಿದ 'ಜವಾನ್​'!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.