ETV Bharat / entertainment

ಶಾರುಖ್ 'ಜವಾನ್' ಭರ್ಜರಿ ಓಪನಿಂಗ್​​ ನಿರೀಕ್ಷೆ; ಫಸ್ಟ್‌ ಡೇ ಶೋಗೆ ಮಾರಾಟವಾದ ಟಿಕೆಟ್​​ಗಳೆಷ್ಟು?! - ಜವಾನ್ ಟಿಕೆಟ್

Jawan Advance Booking: ಸೆಪ್ಟೆಂಬರ್​ 7ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ 'ಜವಾನ್'​ ಸಿನಿಮಾದ ಪ್ರೀ-ಟಿಕೆಟ್​ ಬುಕಿಂಗ್​ ಪ್ರಕ್ರಿಯೆ​ ಉತ್ತಮವಾಗಿ ಸಾಗಿದೆ.

Jawan advance booking
ಜವಾನ್ ನಿಮಾದ ಪ್ರೀ ಟಿಕೆಟ್​ ಬುಕಿಂಗ್​ ಪ್ರೊಸೆಸ್
author img

By ETV Bharat Karnataka Team

Published : Sep 3, 2023, 2:10 PM IST

ಬಾಲಿವುಡ್ ನಟ ಶಾರುಖ್​ ಖಾನ್​ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಜವಾನ್​' ಸೆಪ್ಟೆಂಬರ್​ 7 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸಲಿದೆ. ಸಿನಿಮಾ ರಿಲೀಸ್​ಗೆ ದಿನಗಣನೆ ಆರಂಭವಾಗಿದ್ದು, ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ಈಗಾಗಲೇ ಪ್ರೀ-ಟಿಕೆಟ್​ ಬುಕಿಂಗ್​ ಪ್ರೊಸೆಸ್​ ಓಪನ್​ ಆಗಿದ್ದು, ಸಿನಿಮಾ ಸಕಾರಾತ್ಮಕ ಸ್ಪಂದನೆ ಸ್ವೀಕರಿಸುತ್ತಿದೆ.

ಗುರುವಾರ ಸಿನಿಮಾ ಬಿಡುಗಡೆ ಆಗಲಿದೆ. ಮೊದಲ ದಿನವೇ ಜವಾನ್​ ಭರ್ಜರಿ ಓಪನಿಂಗ್​ ಹೊಂದುವ ನಿರೀಕ್ಷೆ ಇದೆ. ಸಿನಿಮೋದ್ಯಮ ಟ್ರ್ಯಾಕರ್​​ ಸ್ಯಾಕ್ನಿಲ್ಕ್, ಚಿತ್ರ ಈಗಾಗಲೇ 13.17 ಕೊಟಿ ರೂ. ಮೌಲ್ಯದ 4,26,171 ಟಿಕೆಟ್​ಗಳನ್ನು ಮಾರಾಟ ಮಾಡಿದೆ ಎಂದು ತಿಳಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೂ ಮೂರು ದಿನಗಳು ಬಾಕಿ ಉಳಿದಿದ್ದು, ಈ ಸಂಖ್ಯೆ ಮತ್ತಷ್ಟು ಏರುವ ನಿರೀಕ್ಷೆ ಇದೆ. ಮುಂಗಡ ಟಿಕೆಟ್​ ಖರೀದಿ ಕ್ಷಣ ಕ್ಷಣಕ್ಕೂ ಏರುತ್ತಿದೆ.

ಆ್ಯಕ್ಷನ್​ ಪ್ಯಾಕ್ಡ್​​ ಸಿನಿಮಾ ಸೆಪ್ಟೆಂಬರ್​ 1ರಂದು ಅನಾವರಣಗೊಂಡಿರುವ ಟ್ರೇಲರ್​ ಮೂಲಕ ಕುತೂಹಲ ಹೆಚ್ಚಿಸಿತ್ತು. ಚೆನ್ನೈ ಮತ್ತು ದುಬೈನಲ್ಲಿ ನಡೆದಿರುವ ಅದ್ಧೂರಿ ಈವೆಂಟ್​ಗಳು ಶಾರುಖ್​ ಅವರ ಸ್ಟಾರ್​ ಡಮ್​ ಪ್ರದರ್ಶಿಸಿತ್ತು.

  • A massive trend alert already.. #Jawan advance ticket sales (with Day 1 yet to close) will be a RECORD SETTER ADVANCE ... already #Pathaan is being overtaken as we write this. Around 1.75L tkts in National Chains & 3L all over is being eyed !!
    ❣️💣❣️💣❣️💣❣️💥❣️💣💥… pic.twitter.com/OOg0cOuAUZ

    — Girish Johar (@girishjohar) September 1, 2023 " class="align-text-top noRightClick twitterSection" data=" ">

ಶುಕ್ರವಾರದಂದು ಸಿನಿಮಾ ವ್ಯವಹಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್​ ಅವರು ಸೋಷಿಯಲ್​​ ಮೀಡಿಯಾ ಪ್ಲಾಟ್​ಫಾರ್ಮ್ Xನಲ್ಲಿ (ಹಿಂದಿನ ಟ್ವಿಟರ್​) ಜವಾನ್​ ಕುರಿತು ಬರೆದುಕೊಂಡಿದ್ದರು. ''ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಜವಾನ್​ ಮೂಲಕ ಶಾರುಖ್​ ಖಾನ್​ ಇತಿಹಾಸ ನಿರ್ಮಿಸಲಿದ್ದಾರೆ'' ಎಂದು ತಿಳಿಸಿದ್ದರು. ಸಿನಿಮಾ ವ್ಯವಹಾರ ವಿಶ್ಲೇಷಕ ಗಿರೀಶ್​ ಜೋಹರ್​ ಅವರು ''ಜವಾನ್​ ಮ್ಯಾಸಿವ್​ ಟ್ರೆಂಡ್''​ ಎಂದು ಟ್ವೀಟ್​​ ಮಾಡಿದ್ದರು.

ಶಾರುಖ್​ ಖಾನ್​ ಕಟ್ಟಾ ಅಭಿಮಾನಿಗಳು ಪ್ರೀ-ಟಿಕೆಟ್​ ಬುಕಿಂಗ್ ಆ್ಯಪ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ದೇಶದೆಲ್ಲೆಡೆ ಟಿಕೆಟ್​ಗಳನ್ನು ಕಾಯ್ದಿರಿಸುತ್ತಿದ್ದಾರೆ. ಹೈದರಾಬಾದ್​, ಚೆನ್ನೈ ಸೇರಿದಂತೆ ಇತರೆ ಪ್ರಮುಖ ನಗರಗಳಲ್ಲಿ ಮೊದಲ ದಿನದ ಶೋಗಳ ಟಿಕೆಟ್‌ಗಳು ಬಹುತೇಕ ಸೇಲ್ ಆಗಿವೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: 'ಗದರ್-2' ಸಕ್ಸಸ್ ಪಾರ್ಟಿ​: ಶಾರುಖ್​, ಅಮೀರ್​ ಸೇರಿ ತಾರೆಯರ ಸಮಾಗಮ- ವಿಡಿಯೋ ನೋಡಿ

ಇತ್ತೀಚೆಗೆ ಚೆನ್ನೈನಲ್ಲಿ ಜವಾನ್​ ಪ್ರೀ ರಿಲೀಸ್​ ಈವೆಂಟ್​ ನಡೆಯಿತು. ಶಾರುಖ್​ ಖಾನ್​ ಭಾಗಿಯಾಗಿ ಅದ್ಧೂರಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ನಿರ್ದೇಶಕ ಅಟ್ಲೀ, ನಟ ವಿಜಯ್​ ಸೇತುಪತಿ, ನಟಿ ಪ್ರಿಯಾಮಣಿ, ಗಾಯಕ ಅನಿರುಧ್ ರವಿಚಂದರ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಬಳಿಕ ದುಬೈನಲ್ಲೂ ಗ್ರ್ಯಾಂಡ್​ ಈವೆಂಟ್ ಆಯೋಜಿಸಿ, ಬುರ್ಜ್ ಖಲೀಫಾದಲ್ಲಿ ಟ್ರೇಲರ್​ ಪ್ರದರ್ಶಿಸಲಾಗಿತ್ತು.

ಇದನ್ನೂ ಓದಿ: 'ಗದರ್-2' ಪಾರ್ಟಿಯಲ್ಲಿ ಅಪ್ಪಿಕೊಂಡ 'ಮಾಜಿ ಲವ್​ಬರ್ಡ್ಸ್': ಕಾರ್ತಿಕ್​-ಸಾರಾ ವಿಡಿಯೋ ವೈರಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.