ETV Bharat / entertainment

ಅಭಿಮಾನಿಗಳ ಮೇಲೆ ಪ್ರೀತಿಯ ಧಾರೆಯೆರೆದ ಶಾರುಖ್​ ಖಾನ್​​...ಜವಾನ್​ ನಟನ ಫ್ಯಾನ್ಸ್ ಫುಲ್​ ಖುಷ್​ - ವಿಜಯ್​ ಸೇತುಪತಿ

shah rukh khan reacts on jawan success: ಜವಾನ್​ ಸಿನಿಮಾಗೆ ಸಿಕ್ಕ ಸಕಾರಾತ್ಮಕ ಸ್ಪಂದನೆಗೆ ಶಾರುಖ್​ ಖಾನ್​ ಪ್ರತಿಕ್ರಿಯಿಸಿದ್ದಾರೆ.

shah rukh khan reacts on jawan success
ಜವಾನ್​ ಸಕ್ಸಸ್​ ಬಗ್ಗೆ ಶಾರುಖ್​ ಖಾನ್​ ರಿಯಾಕ್ಷನ್
author img

By ETV Bharat Karnataka Team

Published : Sep 7, 2023, 7:54 PM IST

ದಕ್ಷಿಣ ಚಿತ್ರರಂಗದ ಯಶಸ್ವಿ ನಿರ್ದೇಶಕ ಅಟ್ಲೀ ನಿರ್ದೇಶನದಲ್ಲಿ ಮೂಡಿ ಬಂದ ಜವಾನ್​ ಸಿನಿಮಾವನ್ನು ಅಭಿಮಾನಿಗಳು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಬಿಗ್​ ಸ್ಟಾರ್ ಕಾಸ್ಟ್, ಬಿಗ್​ ಬಜೆಟ್​ ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಯಶ ಕಂಡಿದೆ. ಸೋಷಿಯಲ್​ ಮೀಡಿಯಾದಲ್ಲಿ ಜವಾನ್​ ಟ್ರೆಂಡಿಂಗ್​ನಲ್ಲಿದೆ. ಪ್ರೇಕ್ಷಕರು ಸಿನಿಮಾ ಕುರಿತು ತಮ್ಮ ಪಾಸಿಟಿವ್​ ವಿಮರ್ಶೆ ಕೊಡುತ್ತಿದ್ದಾರೆ. ಮತ್ತೊಂದೆಡೆ ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಅಭಿಮಾನಿಗಳ ಉತ್ಸಾಹ ವರ್ಣಿಸಲು ಪದಗಳ ಕೊರತೆಯಾಗಿದೆ. ಜವಾನ್​ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿರುವ ಅಭಿಮಾನಿಗಳಿಗೆ ಸೂಪರ್​ ಸ್ಟಾರ್​ ಶಾರುಖ್​ ಖಾನ್​ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಭಿಮಾನಿಗಳ ಮೇಲೆ ಪ್ರೀತಿಯ ಧಾರೆಯೆರೆದಿದ್ದಾರೆ.

  • Wow have to take time out and thank each and every Fan Club and all of you who have gone so happily in the theatres and even outside. So overwhelmed will surely do the needful as soon as I get my breath back in a day or so. Uff!! Love u for loving #Jawan

    — Shah Rukh Khan (@iamsrk) September 7, 2023 " class="align-text-top noRightClick twitterSection" data=" ">

ಎಸ್​ಆರ್​ಕೆ ಪ್ರೀತಿಪೂರ್ವಕ ಸಂದೇಶ: ಬಹುನಿರೀಕ್ಷಿತ ಸಿನಿಮಾ ಇಂದು ಮುಂಜಾನೆ 6 ಗಂಟೆಗೆ ಬಿಡುಗಡೆ ಆಗಿದೆ. ತಮ್ಮ ಚಿತ್ರ ತೆರೆಕಂಡ ಕೆಲವೇ ಗಂಟೆಗಳ ಬಳಿಕ ಕೋಟ್ಯಂತರ ಅಭಿಮಾನಿಗಳ ಮೆಚ್ಚಿನ ನಟ ಶಾರುಖ್​ ಖಾನ್​ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ X (ಹಿಂದಿನ ಟ್ವಿಟರ್​) ನಲ್ಲಿ ಹೃದಯಸ್ಪರ್ಶಿ ಬರಹ ಹಂಚಿಕೊಂಡಿದ್ದಾರೆ. ಚಿತ್ರಮಂದಿರಗಳ ಹೊರಗೆ ಮತ್ತು ಒಳಗೆ ತಮ್ಮ ಮೇಲೆ ಅಚಲ ಪ್ರೀತಿ, ಬೆಂಬಲ ತೋರಿದ ಅಭಿಮಾನಿಗಳನ್ನುದ್ದೇಶಿಸಿ ಎಸ್​ಆರ್​ಕೆ ಪ್ರೀತಿಪೂರ್ವಕ ಸಂದೇಶ ಹಂಚಿಕೊಂಡಿದ್ದಾರೆ.

  • Beqaraar ho Gaye ab toh aa hi Jaiye….Ghar Waalon ko bhi saath Laiye.
    Aap ko humaari kasam….!!!
    Ready with our offering of love for all of you. Hope you all are entertained!!!https://t.co/fLEcPK9UQT

    Watch Jawan in cinemas now- in Hindi, Tamil & Telugu. pic.twitter.com/8pUXDWRkyY

ಶಾರುಖ್​ ಖಾನ್​ ಟ್ವೀಟ್: ಬಾಲಿವುಡ್​​ ಐಕಾನ್​​ ಈ ರೀತಿಯಾಗಿ ಬೆಂಬಲಿಗರಿಗೆ ತಮ್ಮ ಕೃತಘ್ಞತೆ ವ್ಯಕ್ತಪಡಿಸಿದ್ದಾರೆ. ''ವಾವ್​, ನಾನಿದಕ್ಕೆ ಸಮಯ ತೆಗೆದುಕೊಳ್ಳಬೇಕು. ಎಲ್ಲಾ ಫ್ಯಾನ್​ ಕ್ಲಬ್​​ ಮತ್ತು ನಿಮ್ಮೆಲ್ಲರಿಗೂ ಧನ್ಯವಾದ ಹೇಳಬೇಕು. ಸಂತೋಷದಿಂದ ಥಿಯೇಟರ್​ಗಳಿಗೆ ಹೋದ ಎಲ್ಲರಿಗೂ ಧನ್ಯವಾದಗಳು. ಜವಾನ್​ನನ್ನು ಪ್ರೀತಿಸಿದ್ದಕ್ಕಾಗಿ, ನಿಮ್ಮನ್ನು ಪ್ರೀತಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

  • Love u boys and girls I hope u enjoy the entertainment. Kept awake to see u go to the theater. Big love and thanks https://t.co/WYOKRfqspG

ಇದನ್ನೂ ಓದಿ: Jawan collection: ಜವಾನ್​ ಮೊದಲ ದಿನ 100 ಕೋಟಿ ದಾಟುತ್ತಾ - ಪಠಾಣ್​ ದಾಖಲೆ ಪುಡಿಗಟ್ಟುತ್ತಾ?

ಇಂದು ಥಿಯೇಟರ್​ ಹೊರಗೆ ಮತ್ತು ಒಳಗೆ ಕಂಡುಬಂದ ಅಭಿಮಾನಿಗಳ ಉತ್ಸಾಹ, ಸಂಭ್ರಮಾಚರಣೆ ನಿಜಕ್ಕೂ ಹಬ್ಬದ ವಾತಾವರಣದಂತಿತ್ತು. ಶಾರುಖ್​ ಖಾನ್​ ಟ್ವೀಟ್​ಗೂ ಮುನ್ನ, ಎಸ್​ಆರ್​ಕೆ ಫ್ಯಾನ್ಸ್​ ಪೇಜ್​ಗಳು ಸಂಭ್ರಮಾಚರಣೆಯ ವಿಡಿಯೋ ಹಂಕೊಂಡಿವೆ. ಮುಂಬೈನ ಖ್ಯಾತ ಥಿಯೇಟರ್​ ಗೈಟಿ ಗ್ಯಾಲಾಕ್ಸಿ ಥಿಯೇಟರ್​ ಬಳಿ ಮುಂಜಾನೆ 6 ಗಂಟೆ ಹೊತ್ತಿಗೆ ಪ್ರೇಕ್ಷಕರು ಥಿಯೇಟರ್​​ನತ್ತ ಮುಖ ಮಾಡುತ್ತಿದ್ದು, ಸುತ್ತಲೂ ವಿದ್ಯುತ್​ ದೀಪಾಲಂಕಾರವುಳ್ಳ ವಿಡಿಯೋ ವನ್ನು ಫ್ಯಾನ್ಸ್​ ಪೇಜ್​ ಶೇರ್ ಮಾಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಉಳಿದಂತೆ ನಟ ಶಾರುಖ್​ ಖಾನ್​ ಬಗ್ಗೆ, ವಿ ಲವ್​ ಶಾರುಖ್​​, ಭಾರತ್​ ಕಿ ಶಾನ್​​ ಶಾರುಖ್​​ , ಬಂದಾ ಹೈ ತೋ ಜಿಂದಾ ಹೈ ಎಂಬೆಲ್ಲಾ ಕಾಮೆಂಟ್​ಗಳು ಹರಿದು ಬರುತ್ತಿದೆ.

ಇದನ್ನೂ ಓದಿ: ದೇಶಾದ್ಯಂತ ಜವಾನ್​ ಸದ್ದು: ಚಿತ್ರಮಂದಿರಗಳತ್ತ ಪ್ರೇಕ್ಷಕರ ಸಂಭ್ರಮಾಚರಣೆ - ಹುಚ್ಚೆದ್ದು ಕುಣಿದ ಫ್ಯಾನ್ಸ್!

ಸದ್ಯ ಎಲ್ಲರ ಗಮನ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ಕೇಂದ್ರೀಕೃತವಾಗಿದೆ. ಭಾರತೀಯ ಗಲ್ಲಾಪಟ್ಟಿಯಲ್ಲಿ 75 ಕೋಟಿ ರೂ. ಸೇರಿದಂತೆ ವಿಶ್ವಾದ್ಯಂತ ಒಟ್ಟು 100 ಕೋಟಿ ರೂ. ಗಡಿ ದಾಟಲಿದೆ ಎಂದು ಸಿನಿ ವಿಶ್ಲೇಷಕರು ಅಂದಾಜಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.