ETV Bharat / entertainment

'ಬಾಲಿ'ಯಲ್ಲಿ ಸಮಂತಾ ಜಾಲಿ: ಸ್ನೇಹಿತೆ ಜೊತೆಗಿನ ವಿಡಿಯೋ ಹಂಚಿಕೊಂಡ ಸೌತ್​ ತಾರೆ - ಈಟಿವಿ ಭಾರತ ಕನ್ನಡ

ನಟಿ ಸಮಂತಾ ಬಾಲಿ ಪ್ರವಾಸದಿಂದ ಒಂದೆರಡು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

Samantha
ಸಮಂತಾ
author img

By

Published : Jul 28, 2023, 4:12 PM IST

ಸೌತ್​ ಸೂಪರ್​ಸ್ಟಾರ್​ ನಟಿ ಸಮಂತಾ ರುತ್ ಪ್ರಭು ಸದ್ಯ 'ಬಾಲಿ' ಪ್ರವಾಸದಲ್ಲಿದ್ದಾರೆ.​ ಅವರು ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತ ಗಮನ ಹರಿಸಲು ಸಿನಿಮಾಗಳಿಂದ ಕೊಂಚ ಕಾಲ ಬ್ರೇಕ್​ ತೆಗೆದುಕೊಂಡಿದ್ದಾರೆ. ತಮ್ಮ ಬಿಡುವಿನ ವೇಳೆಯನ್ನು ಸಂತಸದಿಂದ ಕಳೆಯುತ್ತಿದ್ದಾರೆ. ಪ್ರವಾಸ, ಧ್ಯಾನ, ದೇವಸ್ಥಾನ ಭೇಟಿ, ಮೂವಿ ಟೈಮ್​ ಎಂದು ಬ್ಯುಸಿಯಾಗಿದ್ದಾರೆ. ತಮ್ಮ ದಿನಚರಿಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಶುಕ್ರವಾರ ಸಮಂತಾ ಬಾಲಿ ಪ್ರವಾಸದಿಂದ ಒಂದೆರಡು ವಿಡಿಯೋಗಳನ್ನು ಕೈ ಬಿಟ್ಟಿದ್ದಾರೆ.

ಇನ್​ಸ್ಟಾದಲ್ಲಿ ಹಂಚಿಕೊಂಡ ವಿಡಿಯೋಗೆ, "ಸ್ವರ್ಗವು ಭೂಮಿಯ ಮೇಲಿನ ಸ್ಥಳವಾಗಿದೆ. ಅತ್ಯಂತ ಸುಂದರವಾದ ಸೂರ್ಯೋದಯ" ಎಂದು ಕ್ಯಾಪ್ಶನ್​ ನೀಡಿದ್ದಾರೆ. ಗೆಳತಿ ಅನುಷಾ ಸ್ವಾಮಿಯನ್ನು ಈ ವಿಡಿಯೋಗೆ ಟ್ಯಾಗ್​ ಮಾಡಿದ್ದಾರೆ. ಈಗಾಗಲೇ ಸಮಂತಾ ಹಂಚಿಕೊಂಡಿರುವ ಅನೇಕ ಪೋಸ್ಟ್​ಗಳಲ್ಲಿ ಅನುಷಾ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಮಂತಾ ಅವರು ಸ್ನೇಹಿತೆ ಅನುಷಾ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿರುವುದು ಸ್ಪಷ್ಟವಾಗಿದೆ.

ಸಮಂತಾ ಮತ್ತು ಅನುಷಾ ಜೊತೆಗಿರುವ ವಿಡಿಯೋಗಳು ತುಂಬಾ ಚೆನ್ನಾಗಿದೆ. ಇಬ್ಬರು ಸ್ನೇಹದ ಬಾಂಧವ್ಯವನ್ನು ಇದು ತೋರಿಸುತ್ತದೆ. ಕೆಲವು ಗಂಟೆಗಳ ನಂತರ ಹಂಚಿಕೊಂಡ ವಿಡಿಯೋದಲ್ಲಿ ಸಮಂತಾ ಮತ್ತು ಅನುಷಾ ಇಬ್ಬರು ಡ್ಯಾನ್ಸ್​ ಮಾಡುತ್ತಿದ್ದಾರೆ. "ಹುಡುಗಿಯರ ಪ್ರವಾಸ 100/100" ಎಂದು ಪೋಸ್ಟ್​ಗೆ ಕ್ಯಾಪ್ಶನ್​ ನೀಡಿದ್ದಾರೆ. ಇದರೊಂದಿಗೆ ಹುಡುಗಿಯರು ಎಷ್ಟರ ಮಟ್ಟಿಗೆ ಪ್ರವಾಸವನ್ನು ಆನಂದಿಸುತ್ತಾರೆ ಎಂಬುದನ್ನು ಕಾಣಬಹುದು. ಸಮಂತಾ ಅಂತೂ ಬಾಲಿಯಲ್ಲಿ ಜಾಲಿ ಮೂಡ್​ನಲ್ಲಿದ್ದಾರೆ.

ಇದನ್ನೂ ಓದಿ: ಆಧ್ಯಾತ್ಮಿಕ ಪ್ರವಾಸ ಕೈಗೊಂಡ ಸಮಂತಾ.. ಇಶಾದಲ್ಲಿ ಧ್ಯಾನ, ಈರೋಡ್ ಪನ್ನಾರಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ

ನಿನ್ನೆಯಷ್ಟೇ ಸಮಂತಾ ಉಬುದ್​ನ ಮಂಕಿ ಫಾರೆಸ್ಟ್​ಗೆ ಭೇಟಿ ಕೊಟ್ಟಿದ್ದರು. ಕೋತಿಯೊಂದಿಗೆ ತೆಗೆದ ಫೋಟೋವನ್ನು ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದರು. ಅವರ ಜೊತೆಯಲ್ಲಿ ಸ್ನೇಹಿತೆ ಅನುಷಾ ಕೂಡ ಇದ್ದರು. ಫೋಟೋಗೆ 'ಮಂಗ ಕಂಡಿತು' ಎಂದು ಕ್ಯಾಪ್ಶನ್​ ನೀಡಿದ್ದರು. ಅದಕ್ಕೂ ಮೊದಲು ನಟಿ ಐಸ್​ ಬಾತ್​ ಟಬ್​ನ ವಿಡಿಯೋವನ್ನು ಹಂಚಿಕೊಂಡಿದ್ದರು. 'ಐಸ್ ಬಾತ್.. ನಾಲ್ಕು ಡಿಗ್ರಿ, ಆರು ನಿಮಿಷ' ಎಂದು ಕ್ಯಾಪ್ಶನ್​ ನೀಡಿದ್ದರು. ಐಸ್​ ತುಂಬಿರುವ ನೀರಿನಲ್ಲಿ ಬರೋಬ್ಬರಿ 6 ನಿಮಿಷ ಕುಳಿತಿರುವ ಇನ್​ಸ್ಟಾ ಸ್ಟೋರಿ ಇದಾಗಿತ್ತು.

ಸಮಂತಾ ಪ್ರಾಜೆಕ್ಟ್​ಗಳು.. ಸಮಂತಾ ಅವರು ನಟಿಸಿ, ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ಖುಷಿ. ತೆಲುಗು ಸೂಪರ್​ ಸ್ಟಾರ್​ ವಿಜಯ ದೇವರಕೊಂಡ ಜೊತೆ ಸ್ಕ್ರೀನ್​ ಶೇರ್​ ಮಾಡಿದ್ದಾರೆ. ಶಿವ ನಿರ್ವಾಣ ನಿರ್ದೇಶನದಲ್ಲಿ ರೆಡಿಯಾಗಿರುವ ಈ ಚಿತ್ರ ಸೆಪ್ಟೆಂಬರ್​ 1 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಇನ್ನೂ ಸಿಟಾಡೆಲ್​ ನಟಿಯ ಮತ್ತೊಂದು ಪ್ರಾಜೆಕ್ಟ್​. ಈ ವೆಬ್​ ಸಿರೀಸ್​ನಲ್ಲಿ ಬಾಲಿವುಡ್​ ನಟ ವರುಣ್​ ಧವನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 'ಜಿಲಾಟೊ ಮಾರ್ನಿಂಗ್ ಟು ಯು'... ನಟಿ ಸಮಂತಾ ಮನೆಗೆ ಹೊಸ ಸದಸ್ಯನ ಆಗಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.