ETV Bharat / entertainment

ಡ್ರಗ್ಸ್ ಕೇಸ್​: ಆರೋಪಗಳಿಂದ ಭಾರತೀಯ ನಟಿ ದೋಷಮುಕ್ತ - ಯುಎಇನಿಂದ ತವರಿಗೆ ಮರಳಿದ ಪೆರೇರಾ - ನಟಿ ಡ್ರಗ್ಸ್ ಕೇಸ್

ತಪ್ಪೇ ಮಾಡದೇ ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಸಿಲುಕಿ ಯುಎಇ ಅಧಿಕಾರಿಗಳ ವಿಚಾರಣೆಯಲ್ಲಿದ್ದ ಬಾಲಿವುಡ್ ನಟಿ ಕ್ರಿಸನ್ನ್ ಪೆರೇರಾ ಅವರು ಎಲ್ಲ ಆರೋಪಗಳಿಂದ ದೋಷಮುಕ್ತರಾಗಿ ಮುಂಬೈಗೆ ಮರಳಿದ್ದಾರೆ.

Chrisann Pereira
ನಟಿ ಕ್ರಿಸನ್ನ್ ಪೆರೇರಾ
author img

By

Published : Aug 3, 2023, 1:53 PM IST

Updated : Aug 3, 2023, 6:09 PM IST

ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಏಪ್ರಿಲ್‌ನಲ್ಲಿ ಬಂಧನಕ್ಕೊಳಗಾದ ಬಾಲಿವುಡ್ ನಟಿ ಕ್ರಿಸನ್ನ್ ಪೆರೇರಾ ( Chrisann Pereira) ಅವರನ್ನು ಯುಎಇ ಅಧಿಕಾರಿಗಳು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿದ್ದಾರೆ. ಟ್ರಾವೆಲ್​ ಬ್ಲ್ಯಾಕ್​ಲಿಸ್ಟ್​​ನಲ್ಲಿದ್ದ ನಟಿಯ ಹೆಸರನ್ನು ತೆಗೆದುಹಾಕಿ, ಮುಂಬೈಗೆ ಮರಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಬಾಲಿವುಡ್ ಸಿನಿಮಾಗಳಾದ ಸಡಕ್ 2 ಮತ್ತು ಬಾಟ್ಲಾ ಹೌಸ್​ನಲ್ಲಿ ಕಾಣಿಸಿಕೊಂಡಿರುವ ನಟಿ ಬುಧವಾರ ತಡರಾತ್ರಿ ಮುಂಬೈಗೆ ಆಗಮಿಸಿದ್ದಾರೆ.

  • #WATCH | "Chrisann has been arrested in Sharjah for drugs case and got bail. Here, her mother made a complaint regarding the case that she didn't take it (drugs) herself, it has been planted and a few people have played a role in this so, we need to bring her justice. We took her… pic.twitter.com/JkvWCicVtX

    — ANI (@ANI) August 3, 2023 " class="align-text-top noRightClick twitterSection" data=" ">

ಬಾಲಿವುಡ್ ನಟಿ ಕ್ರಿಸನ್ನ್ ಪೆರೇರಾ ಅವರ ಸಹೋದರ ಕೆವಿನ್ ಅವರು ವಿಮಾನ ನಿಲ್ದಾಣದ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿಯನ್ನು ಸ್ವಾಗತಿಸುತ್ತಿರುವ ಮತ್ತು ಅಪ್ಪಿಕೊಳ್ಳುತ್ತಿರುವ ದೃಶ್ಯ ಇದಾಗಿದೆ. "ಕ್ರಿಸನ್ನ್ ಪೆರೇರಾ ಹಿಂತಿರುಗಿ ನಮ್ಮೊಂದಿಗೆ ಸೇರಿಕೊಂಂಡಿದ್ದಾರೆ. ಅವರು ಜೂನ್‌ನಲ್ಲಿ ಹಿಂತಿರುಗುತ್ತಾರೆ ಎಂದು ನಾನು ನಿಮಗೆ ತಿಳಿಸಿದ್ದೆ. ಆದರೆ ಪ್ರಕರಣ ಅದಕ್ಕಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡಿತು. ಸಹೋದರಿ ಅಂತಿಮವಾಗಿ ಹಿಂತಿರುಗಿದ್ದಾರೆ" ಎಂದು ಸಹೋದರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕ್ರಿಸನ್ನ್ ಪೆರೇರಾ ಅವರು ಏಪ್ರಿಲ್​ನಲ್ಲಿ ಶಾರ್ಜಾದಲ್ಲಿದ್ದರು. ಮೂರು ವಾರಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಅವರಿಗೆ ಜಾಮೀನು ನೀಡಲಾಯಿತು. ಅಂತಿಮವಾಗಿ ನಟಿಯನ್ನು ಖುಲಾಸೆಗೊಳಿಸಲಾಯಿತು. ಆದರೆ, ಕಾನೂನು ಪ್ರಕ್ರಿಯೆಗಳ ಕಾರಣ ಆ ಕೂಡಲೇ ಮುಂಬೈಗೆ ಮರಳಲು ಸಾಧ್ಯವಾಗಲಿಲ್ಲ. ವಿಳಂಬದ ಪರಿಣಾಮ, ನಟಿಯ ಮಾನಸಿಕ ಆರೋಗ್ಯದ ಬಗ್ಗೆ ಕುಟುಂಬಸ್ಥರು ಕಳವಳ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ತಪ್ಪೇ ಮಾಡದೇ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಭಾರತದ ನಟಿ: ದೋಷಮುಕ್ತರಾಗಿ ದುಬೈ ಜೈಲಿನಿಂದ ಬಿಡುಗಡೆ

ಆ್ಯಂಥೋನಿ ಪೌಲ್ ಸೇರಿ ಇತರ ಇಬ್ಬರು ಆರೋಪಿಗಳು ನಟಿಯನ್ನು ಈ ಪ್ರಕರಣದಲ್ಲಿ ಹೇಗೆ ಸಿಲುಕಿಸಿದರು ಎಂಬುದನ್ನು ವಿವರಿಸಿ ಮುಂಬೈ ಪೊಲೀಸರು ಜೂನ್‌ನಲ್ಲಿ ಪ್ರಕರಣದ ಆರೋಪಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಅಧಿಕಾರಿಗಳ ಪ್ರಕಾರ, ಆರೋಪಿ ಆ್ಯಂಥೋನಿ ಪೌಲ್ ನಟಿ ಕ್ರಿಸನ್ನ್ ಪೆರೇರಾ ಅವರ ತಾಯಿಯೊಂದಿಗೆ ಕೆಲ ವಿಷಯವಾಗಿ ಜಗಳ ಮಾಡಿಕೊಂಡಿದ್ದ. ಹಾಗಾಗಿ ನಟಿ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದ್ದ. ನಂತರ ವಿದೇಶಕ್ಕೆ ಹೊರಟಿದ್ದ ನಟಿಯ ಬ್ಯಾಗ್​ನಲ್ಲಿ ಮಾದಕವಸ್ತುಗಳನ್ನು ಆಕೆಗೆ ತಿಳಿಯದಂತೆ ಇಟ್ಟಿದ್ದಾನೆ (ಟ್ರೋಫಿಯೊಳಗೆ ಡ್ರಗ್ಸ್ ಅಡಗಿಸಿ ನಟಿಗೆ ಕೊಟ್ಟಿದ್ದ). ನಟಿ ಶಾರ್ಜಾಕ್ಕೆ ಪ್ರಯಾಣ ಬೆಳೆಸಿದಾಗ ಆರೋಪಿ ಪೊಲೀಸರಿಗೆ ಸುಳಿವು ನೀಡಿದ್ದಾನೆ.

ಇದನ್ನೂ ಓದಿ: ಹಾಲಿವುಡ್​​ನಲ್ಲಿ ಅವಕಾಶ ಕೊಡಿಸುತ್ತೇವೆಂದು ಹೇಳಿ ನಟಿಗೆ ವಂಚನೆ ಆರೋಪ: ಇಬ್ಬರು ಅರೆಸ್ಟ್!

ಅಧಿಕಾರಿಗಳ ಪ್ರಕಾರ, ಮಾದಕವಸ್ತು ಮಿಶ್ರಿತ ವಸ್ತುಗಳೊಂದಿಗೆ ಶಾರ್ಜಾಕ್ಕೆ ಕಳುಹಿಸುವ ಮೂಲಕ ಪೌಲ್ ಐವರು ವ್ಯಕ್ತಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ್ದ. ಇತರ ಮೂವರು ತಪ್ಪಿಸಿಕೊಂಡರೆ, ನಟಿ ಕ್ರಿಸನ್ನ್ ಮತ್ತು ರೋಡ್ರಿಗಸ್ ಎಂಬುವವರು ಮಾದಕವಸ್ತುಗಳೊಂದಿಗೆ ಬಂಧಿಸಲ್ಪಟ್ಟರು. ಮುಂಬೈ ಮೂಲದ ಡಿಜೆ ಕ್ಲೇಟನ್ ರೋಡ್ರಿಗಸ್ ಅವರನ್ನು ಇನ್ನೂ ಶಾರ್ಜಾ ಜೈಲಿನಲ್ಲಿರಿಸಲಾಗಿದೆ.

Last Updated : Aug 3, 2023, 6:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.