ETV Bharat / entertainment

ಚಂದ್ರನತ್ತ ಸಾಗಿದ ಭಾರತದ ಯಾನ: ಇಸ್ರೋ ತಂಡವನ್ನು ಶ್ಲಾಘಿಸಿದ ಸಿನಿ ತಾರೆಯರು

ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಕಕ್ಷೆ ಪ್ರವೇಶಿಸಿದೆ. ಐತಿಹಾಸಿಕ ಸಾಧನೆಯತ್ತ ಮುನ್ನುಗ್ಗುತ್ತಿರುವ ಭಾರತವನ್ನು ಸಿನಿ​ ಸೆಲೆಬ್ರಿಟಿಗಳು ಶ್ಲಾಘಿಸಿದ್ದಾರೆ. ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Chandrayaan 3
ಇಸ್ರೋ ತಂಡವನ್ನು ಶ್ಲಾಘಿಸಿದ ಸಿನಿ ತಾರೆಯರು
author img

By

Published : Jul 14, 2023, 8:49 PM IST

ಕೋqfyM ಕಣ್ಣುಗಳು ಕಾತರತೆಯಿಂದ ಕಾಯುತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ ಆಗಿರುವ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಕಕ್ಷೆ ಪ್ರವೇಶಿಸಿದೆ. ಇಂದು ಮಧ್ಯಾಹ್ನ 2.35ಕ್ಕೆ ಎಲ್​ವಿಎಂ-3 ಎಂ4 ರಾಕೆಟ್​ ಆಂಧ್ರಪ್ರದೇಶದ ಸುಳ್ಳೂರುಪೇಟೆಯಲ್ಲಿರುವ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದೆ. ಇಸ್ರೋ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆ ಸಾಲಿನಲ್ಲಿ ಸಿನಿಮಾ​ ಸೆಲೆಬ್ರಿಟಿಗಳು ಕೂಡ ಸೇರಿಕೊಂಡಿದ್ದಾರೆ.

  • Onward to greater horizons! Thrilled to witness another momentous launch! Congratulations & all the best to the brilliant team at ISRO for the launch of #Chandrayaan3 today! Proud of you all! 👍👍

    — Mahesh Babu (@urstrulyMahesh) July 14, 2023 rm.twitter.com/widgets.js" charset="utf-8">" class="align-text-top noRightClick twitterSection" data=" rm.twitter.com/widgets.js" charset="utf-8">"> rm.twitter.com/widgets.js" charset="utf-8">

ಬಾಲಿವುಡ್​ ನಟರಾದ ರವೀನಾ ಟಂಡನ್, ಸೋನು ಸೂದ್, ಅನುಪಮ್ ಖೇರ್ ಮತ್ತು ಇತರರು ತಮ್ಮ ಟ್ವಿಟರ್​ ಖಾತೆಯ ಮೂಲಕ ಚಂದ್ರಯಾನ 3 ಮಿಷನ್​ಗಾಗಿ ಇಸ್ರೋ ಪರಿಶ್ರಮವನ್ನು ಕೊಂಡಾಡಿದ್ದಾರೆ. ಚಂದ್ರಯಾನ 3 ಯಶಸ್ವಿಯಾದರೆ, ಅಮೆರಿಕ, ರಷ್ಯಾ ಮತ್ತು ಚೀನಾದ ನಂತರ ಭಾರತವು ಚಂದ್ರನ ಮೇಲ್ಮೈಯಲ್ಲಿ ಇಳಿದು ಸವಾರಿ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ.

'ನಮಗೆಲ್ಲರಿಗೂ ಹೆಮ್ಮೆಯ ಕ್ಷಣ..': ಐತಿಹಾಸಿಕ ಸಾಧನೆಯತ್ತ ಮುನ್ನುಗ್ಗುತ್ತಿರುವ ಭಾರತವನ್ನು ಶ್ಲಾಘಿಸಿ ರವೀನಾ ಟಂಡನ್​ ಟ್ವೀಟ್​ ಮಾಡಿದ್ದಾರೆ. "ನಮಗೆಲ್ಲರಿಗೂ ಹೆಮ್ಮೆಯ ಕ್ಷಣ. ಜೈ ಹಿಂದ್​! ಯಶಸ್ವಿ ಉಡಾವಣೆಗಾಗಿ ಇಸ್ರೋ ಸಂಸ್ಥೆಯ ಎಲ್ಲ ವಿಜ್ಞಾನಿಗಳಿಗೂ ಅಭಿನಂದನೆಗಳು. #ಚಂದ್ರಯಾನ 3 ಹರ್​ ಹರ್​ ಮಹಾದೇವ್​" ಎಂದು ಬರೆದಿದ್ದಾರೆ. ನಟ ಸೋನ್​ ಸೂದ್​ ಕೂಡ ಇಸ್ರೋ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಇತಿಹಾಸ ರಚಿಸಲಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣ" ಎಂದಿದ್ದಾರೆ.

ಇದನ್ನೂ ಓದಿ: 'ಕೋಟ್ಯಾಂತರ ಹೃದಯಗಳು ನಿಮಗಾಗಿ ಪ್ರಾರ್ಥಿಸುತ್ತಿವೆ': ಚಂದ್ರಯಾನ 3ಗೆ ಶುಭಹಾರೈಸಿದ ಬಾಲಿವುಡ್​ ಸೆಲೆಬ್ರಿಟಿಗಳು

ಇನ್ನೂ ಇಸ್ರೋ ಉಡಾವಣೆಯ ವಿಡಿಯೋವನ್ನು ಹಂಚಿಕೊಂಡ ಅನುಪಮ್​ ಖೇರ್​, "ಜೈ ಹಿಂದ್" ಎಂದು ಬರೆದಿದ್ದಾರೆ. ಅದಕ್ಕೂ ಮೊದಲು ಟಾಲಿವುಡ್​ ನಟ ಮಹೇಶ್​ ಬಾಬು ಕೂಡ ಟ್ವೀಟ್​ ಮಾಡಿದ್ದಾರೆ. "ಹೆಚ್ಚಿನ ದಿಗಂತಗಳಿಗೆ ಮುಂದುವರಿಯಿರಿ! ಮತ್ತೊಂದು ಮಹತ್ವದ ಉಡಾವಣೆಗೆ ಸಾಕ್ಷಿಯಾಗಲು ರೋಮಾಂಚನವಾಗಿದೆ. ಉಡಾವಣೆಗಾಗಿ ISRO ನಲ್ಲಿರುವ ಅದ್ಭುತ ತಂಡಕ್ಕೆ ಅಭಿನಂದನೆಗಳು ಮತ್ತು ಶುಭಾಶಯಗಳು. #ಚಂದ್ರಯಾನ3 ಇಂದು! ನಿಮ್ಮೆಲ್ಲರ ಬಗ್ಗೆ ಹೆಮ್ಮೆ" ಎಂದು ಬರೆದಿದ್ದಾರೆ.

  • Today, all eyes will be glued to the TV & the skies as our nation stands on the verge of another historic feat. To the great men & women @isro, our wishes & prayers are with you 🙏🇮🇳#Chandrayaan3

    — Ajay Devgn (@ajaydevgn) July 14, 2023 " class="align-text-top noRightClick twitterSection" data=" ">

ಅದೇ ರೀತಿ ನಟ ಜಾಕಿ ಶ್ರಾಫ್​ ಕೂಡ ಇಸ್ರೋ ವಿಜ್ಞಾನಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. "ಜೈ ಹಿಂದ್.. ಚಂದ್ರಯಾನ- 3 ಬಾಹ್ಯಾಕಾಶ ನೌಕೆ" ಎಂದು ಟ್ವೀಟ್​ ಮಾಡಿದ್ದಾರೆ. ಸಂತಸ ವ್ಯಕ್ತಪಡಿಸುತ್ತಾ ನಟ ಅಜಯ್​ ದೇವಗನ್​, "ಇಂದು, ನಮ್ಮ ರಾಷ್ಟ್ರವು ಮತ್ತೊಂದು ಐತಿಹಾಸಿಕ ಸಾಧನೆಯ ಅಂಚಿನಲ್ಲಿ ನಿಂತಿರುವಾಗ, ಎಲ್ಲಾ ಕಣ್ಣುಗಳು ಟಿವಿ ಮತ್ತು ಆಕಾಶದತ್ತ ನೋಡುತ್ತಿರುತ್ತವೆ. ಇಸ್ರೋ ವಿಜ್ಞಾನಿಗಳಿಗೆ ನಮ್ಮ ಶುಭಾಶಯಗಳು. ನಮ್ಮ ಪ್ರಾರ್ಥನೆ ಎಂದಿಗೂ ನಿಮ್ಮೊಂದಿಗಿರುತ್ತದೆ" ಎಂದು ಬರೆದಿದ್ದಾರೆ.

ರಾಕೆಟ್​ ಯಶಸ್ವಿಯಾಗಿ ಕಕ್ಷೆಗೆ ಸೇರಿದ ಬಳಿಕ ಪ್ರಧಾನಿ ಮೋದಿ, ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಸೇರಿದಂತೆ ಅನೇಕ ರಾಜಕಾರಣಿಗಳು ಇಸ್ರೋಗೆ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯ ವಿಜ್ಞಾನಿಗಳ ಈ ಯಶಸ್ವಿ ಯೋಜನೆಗೆ ಕೋಟ್ಯಂತರ ಜನರು ಶುಭಹಾರೈಸಿದ್ದಾರೆ. ಕನಸು, ಭರವಸೆ, ಆಶಯ ಹೊತ್ತು ಸಾಗಿದ ಈ ರಾಕೆಟ್​ ಮೇಲೆ ಇಡೀ ಭಾರತೀಯರ ದೃಷ್ಟಿ ನೆಟ್ಟಿದೆ.

ಇದನ್ನೂ ಓದಿ: Chandrayana 3: ಚಂದ್ರಯಾನ 3 ಯಶಸ್ವಿ ಉಡಾವಣೆ: ಇಸ್ರೋದಲ್ಲಿ ಸಂಭ್ರಮದ ಹೊನಲು... ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.