ETV Bharat / entertainment

ರಶ್ಮಿಕಾ ಮಂದಣ್ಣ ಮುಂದಿನ ಚಿತ್ರಕ್ಕೆ ಚಾಲನೆ: ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾದ ಚಿರಂಜೀವಿ - ರಶ್ಮಿಕಾ ಮಂದಣ್ಣ ಲೇಟೆಸ್ಟ್ ನ್ಯೂಸ್

ರಶ್ಮಿಕಾ ಮಂದಣ್ಣ ಮುಂದಿನ​ ಸಿನಿಮಾಗೆ ಮೆಗಾಸ್ಟಾರ್ ಚಿರಂಜೀವಿ ಮೊದಲ ಕ್ಲ್ಯಾಪ್​ ಮಾಡಿ ಚಾಲನೆ ಕೊಟ್ಟಿದ್ದಾರೆ.

Rashmika Mandanna film with Nithin
ರಶ್ಮಿಕಾ ಮಂದಣ್ಣ ನಿತಿನ್​ ಸಿನಿಮಾ
author img

By

Published : Mar 24, 2023, 7:08 PM IST

ನ್ಯಾಶನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್​ ನಟ ನಿತಿನ್​ ಮುಖ್ಯಭೂಮಿಕೆಯ ತೆಲುಗು ಚಿತ್ರದ ಮುಹೂರ್ತ ಸಮಾರಂಭ ಇಂದು ಹೈದರಾಬಾದ್‌ನಲ್ಲಿ ನೆರವೇರಿದೆ. ಚಿತ್ರಕ್ಕೆ ತಾತ್ಕಾಲಿಕವಾಗಿ 'VNRTrio' ಎಂದು ಹೆಸರಿಡಲಾಗಿದೆ. ಚಿತ್ರ ಮುಹೂರ್ತದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಚಲನಚಿತ್ರ ನಿರ್ಮಾಪಕರಾದ ಹನು ರಾಘವಪುಡಿ, ಗೋಪಿಚಂದ್ ಮಲಿನೇನಿ, ಬಾಬಿ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು. ನಿತಿನ್ ಮತ್ತು ಚಲನಚಿತ್ರ ನಿರ್ದೇಶಕ ವೆಂಕಿ ಕುಡುಮುಲ ಅವರೊಂದಿಗೆ ರಶ್ಮಿಕಾ ಕೆಲಸ ಮಾಡುತ್ತಿರುವ ಎರಡನೇ ಚಿತ್ರವಿದು.

VNRTrio ಲಾಂಚ್ ಈವೆಂಟ್​ಗೆ ರಶ್ಮಿಕಾ ಮಂದಣ್ಣ ಪಿಂಕ್ ಸಲ್ವಾರ್ ಸೂಟ್ ಧರಿಸಿದ್ದರು. ಈ ಸಮಾರಂಭದ ಮೂರು ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳನ್ನು ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಪೂಜೆಯೊಂದಿಗೆ ನಮ್ಮ ಸಿನಿಮಾ ಪ್ರಾರಂಭಿಸಲಾಯಿತು ಎಂದು ಬಹಿರಂಗಪಡಿಸಿದರು. VNRTrio ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಉಪಸ್ಥಿತರಿದ್ದು, ಚಿರಂಜೀವಿ ಗಮನ ಸೆಳೆದಿದ್ದಾರೆ. ರಶ್ಮಿಕಾ ಮತ್ತು ನಿತಿನ್ ಅವರ ಚಿತ್ರಕ್ಕೆ ಮೆಗಾಸ್ಟಾರ್ ಚಿರಂಜೀವಿ ಮೊದಲ ಕ್ಲ್ಯಾಪ್​ ಮಾಡಿದ್ದಾರೆ.

ತಮ್ಮ ಸಿನಿಮಾ ಬಗ್ಗೆ ಹೆಚ್ಚು ಬಹಿರಂಗಪಡಿಸದ ನಟಿ, ತನ್ನ ಮುಂಬರುವ ಈ ಚಿತ್ರವು ಕ್ರೇಜಿ ಮತ್ತು ಮೋಜಿನ ಸವಾರಿಯಾಗಿರುತ್ತದೆ ಎಂದು ಸುಳಿವು ನೀಡಿದರು. VNRTrio ಪ್ರಯಾಣ ಆರಂಭಿಸುವ ವೇಳೆ ರಶ್ಮಿಕಾ ಅವರು ಹಿತೈಷಿಗಳ ಆಶೀರ್ವಾದ ಮತ್ತು ಪ್ರೀತಿಯನ್ನು ಕೋರಿದ್ದಾರೆ. 2020ರಲ್ಲಿ ಬಿಡುಗಡೆಯಾದ ಭೀಷ್ಮಾ ಚಿತ್ರದಲ್ಲಿ ನಿತಿನ್​ ಮತ್ತು ರಶ್ಮಿಕಾ ಮುಖ್ಯಭೂಮಿಕೆಯಲ್ಲಿದ್ದರು. VNRTrio ಅವರು ತೆರೆ ಹಂಚಿಕೊಳ್ಳುತ್ತಿರುವ ಎರಡನೇ ಚಿತ್ರ.

ಮೈತ್ರಿ ಮೂವಿ ಮೇಕರ್ಸ್‌ ಬಂಡವಾಳ ಹೂಡುತ್ತಿರುವ ಈ ಚಿತ್ರ ಪೂರ್ಣ ಪ್ರಮಾಣದ ಮನೋರಂಜನಾ ಚಿತ್ರ ಎಂದು ಹೇಳಲಾಗಿದೆ. ಚಿತ್ರ ತಯಾರಕರು ಇತ್ತೀಚೆಗಷ್ಟೇ VNRTrio ಉಲ್ಲಾಸದ ವಿಡಿಯೋದೊಂದಿಗೆ ಘೋಷಿಸಿದ್ದರು. ಇದರಲ್ಲಿ ಪ್ರಮುಖ ನಟರು ತಮ್ಮ ಬಗ್ಗೆ ಮಾತುಕತೆ ನಡೆಸಿದ್ದರು. ರಶ್ಮಿಕಾ ಅವರ 'ನ್ಯಾಷನಲ್ ಕ್ರಶ್' ಟ್ಯಾಗ್‌ನಿಂದ ಹಿಡಿದು ವಿವಾದಗಳು ಮತ್ತು ಫ್ಲಾಪ್‌ಗಳವರೆಗೆ ಮಾತನಾಡಿದ್ದರು. ವಿಡಿಯೋ ಹಾಸ್ಯಭರಿತವಾಗಿದ್ದು, ಇದು ಕಾಮಿಡಿ ಸಿನಿಮಾ ಆಗಿದೆ.

ಇದನ್ನೂ ಓದಿ: 3 ಈಡಿಯಟ್ಸ್‌ ಸೀಕ್ವೆಲ್ ಸುಳಿವು ಕೊಟ್ಟ ಸ್ಟಾರ್ಸ್​... All is Well ಎಂದ ಫ್ಯಾನ್ಸ್

VNRTio ತಯಾರಕರು ಚಿತ್ರದ ಬಗ್ಗೆ ವಿವರಗಳನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿ, ವೆಂಕಿ ಅವರ ಹಿಂದಿನ ನಿರ್ದೇಶನದ ಸಾಹಸ ಚಿತ್ರಗಳಾದ ಚಲೋ ಮತ್ತು ಭೀಷ್ಮಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: 'ಎಲ್ಲಾ ಗೇಲಿಗೂ ಹೊಡಿ ಗೋಲಿ, ನೀನು ನೀನಾಗಿರು': ಪೆಪ್ಸಿ ಜಾಹೀರಾತಿನಲ್ಲಿ ರಾಕಿಂಗ್​ ಸ್ಟಾರ್​ ಯಶ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೆಚ್ಚು ಕ್ರೇಜ್ ಹೊಂದಿರುವ ಟಿ - 20 ಲೀಗ್‌ ಐಪಿಎಲ್ - 16 ಇದೇ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಐಪಿಎಲ್ 2023 ಉದ್ಘಾಟನಾ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ನಟಿ ತಮನ್ನಾ ಭಾಟಿಯಾ ಅವರ ಲೈವ್ ಡ್ಯಾನ್ಸ್ ಪ್ರದರ್ಶನ ನಡೆಯಲಿದೆ ಎಂದು ವರದಿ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.