ETV Bharat / entertainment

ಸಿಂಗಮ್ ಎಗೈನ್: ರಣ್​ವೀರ್​ ಸಿಂಗ್​ ಪೋಸ್ಟರ್ ಹಂಚಿಕೊಂಡ ದೀಪಿಕಾ ಪಡುಕೋಣೆ - deepika padukone

Singham again: ಸಿಂಗಮ್ ಎಗೈನ್ ಚಿತ್ರದಿಂದ ರಣ್​ವೀರ್​ ಸಿಂಗ್​ ಲುಕ್​ ಅನಾವರಣಗೊಂಡಿದೆ.

Ranveer Singh look from Singham again
ಸಿಂಘಮ್ ಎಗೈನ್ ಚಿತ್ರದಿಂದ ರಣ್​ವೀರ್​ ಸಿಂಗ್​ ಲುಕ್​
author img

By ETV Bharat Karnataka Team

Published : Oct 30, 2023, 2:12 PM IST

Updated : Oct 30, 2023, 2:41 PM IST

ಹಿಂದಿ ಚಿತ್ರರಂಗದಲ್ಲಿ ಈವರೆಗೆ ಮೂಡಿ ಬಂದಿರುವ ಜನಪ್ರಿಯ ಸಾಹಸ ಚಿತ್ರಗಳ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂದಿನ ಬಹು ನಿರೀಕ್ಷಿತ ಆ್ಯಕ್ಷನ್​​ ಚಿತ್ರ 'ಸಿಂಗಮ್ ಎಗೈನ್'. ಚಿತ್ರದ ಹೊಸ ಅಪ್​ಡೇಟ್ ಹೊರಬಿದ್ದಿದ್ದು, ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ.

ರಣ್​ವೀರ್​ ಸಿಂಗ್​ ಫಸ್ಟ್ ಲುಕ್: ಇತ್ತೀಚೆಗಷ್ಟೇ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರ ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಳಿಸಲಾಗಿತ್ತು. 'ಸಿಂಗಮ್ ಎಗೈನ್' ಸಿನಿಮಾದಲ್ಲಿ ಲೇಡಿ ಪೊಲೀಸ್​ ಆಫೀಸರ್ ಶಕ್ತಿ ಶೆಟ್ಟಿ ಪಾತ್ರ ನಿರ್ವಹಿಸುತ್ತಿರುವುದನ್ನು ಚಿತ್ರತಂಡ ಬಹಿರಂಗಪಡಿಸಿತ್ತು. ಇದೀಗ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗಾಗಿ ಚಿತ್ರದಿಂದ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ.

ಪತಿಯ ಪೋಸ್ಟರ್ ಹಂಚಿಕೊಂಡ ದೀಪಿಕಾ ಪಡುಕೋಣೆ: ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪತಿ ರಣ್​​​ವೀರ್ ಸಿಂಗ್ ಅವರ ಫಸ್ಟ್ ಲುಕ್​ ಅನ್ನು ಹಂಚಿಕೊಂಡಿಕೊಂಡಿದ್ದಾರೆ. 'ಸಿಂಗಮ್ ಎಗೈನ್ ' ಚಿತ್ರಕ್ಕೆ ಸಿಂಬಾ ಆಗಿ ಪ್ರವೇಶಿಸಿರುವುದಾಗಿ ನಿರ್ದೇಶಕ ರೋಹಿತ್​​ ಶೆಟ್ಟಿ ತಿಳಿಸಿದ್ದಾರೆ. ರಣ್​​​ವೀರ್ ಸಿಂಗ್ ಅವರು ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಸೇರಿದಂತೆ ಹಲವರ ಜೊತೆ ತೆರೆ ಹಂಚಿಕೊಂಡಿದ್ದಾರೆ.

'ಸಿಂಗಮ್ ಎಗೈನ್' ಕಾಸ್ಟ್: ಬಹು ನಿರೀಕ್ಷಿತ ಆ್ಯಕ್ಷನ್​ ಪ್ಯಾಕ್ಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಅಜಯ್​ ದೇವ್​ಗನ್​, ದೀಪಿಕಾ ಪಡುಕೋಣೆ, ರಣ್​ವೀರ್​ ಸಿಂಗ್, ಟೈಗರ್ ಶ್ರಾಫ್​ ನಟಿಸುತ್ತಿದ್ದಾರೆ. ರೋಹಿತ್​ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ಮತ್ತು ವಿಕ್ಕಿ ಕೌಶಲ್ ಅವರೂ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಆದ್ರೆ ಚಿತ್ರದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಈವರೆಗೆ ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಇಂದು ರಣ್​​ವೀರ್​ ಸಿಂಗ್ ಅವರ ಮೊದಲ ನೋಟ ಅನಾವರಣಗೊಂಡಿದೆ.

ಇದನ್ನೂ ಓದಿ: ಕಾಫಿ ವಿತ್​​ ಕರಣ್ ಪ್ರೋಮೋ ರಿಲೀಸ್​.. ಡಿಯೋಲ್ ಬ್ರದರ್ಸ್ ಮುಂದಿನ ಅತಿಥಿಗಳು

ಅಪಾರ ಸಂಖ್ಯೆಯ ಅಭಿಮಾನಿಗಳು ಅಜಯ್ ದೇವಗನ್ ಮತ್ತು ಅಕ್ಷಯ್ ಕುಮಾರ್ ಅವರ ಫಸ್ಟ್ ಲುಕ್‌ಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಅನಾವರಣಗೊಂಡಿರುವ ಪೋಸ್ಟರ್​​ಗಳು ಸಿನಿಪ್ರಿಯರ ಕುತೂಹಲ ಹೆಚ್ಚಿಸುವಲ್ಲಿ ಯಶಸ್ಸು ಕಂಡಿದೆ. ಈ ಹಿಂದಿನ ಸಿಂಗಮ್​ 1 ಮತ್ತು 2 ಪ್ರೇಕ್ಷಕರಿಗೆ ಕಂಪ್ಲೀಟ್​ ಎಂಟರ್​​ಟೈನ್​ಮೆಂಟ್​ ಕೊಡುವಲ್ಲಿ ಯಶ ಕಂಡಿದೆ. ಮೂರನೇ ಕಂತಿನಲ್ಲಿ ಬಿಗ್​​ ಸ್ಟಾರ್​ ಕಾಸ್ಟ್ ಇದ್ದು, ಪ್ರೇಕ್ಷಕರ ಕುತೂಹಲ - ನಿರೀಕ್ಷೆ ದ್ವಿಗುಣಗೊಂಡಿದೆ.

'ಸಿಂಗಮ್ ಎಗೈನ್' ರಿಲೀಸ್ ಯಾವಾಗ? ಈ ಆ್ಯಕ್ಷನ್​ ಥ್ರಿಲ್ಲರ್ ಸಿನಿಮಾ 'ಸಿಂಗಮ್​ 3' 2024ರ ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅದೇ ಸಮಯದಲ್ಲಿ, ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಪುಷ್ಪ 2 ಕೂಡ ಬಿಡುಗಡೆಯಾಗಲಿದೆ. ಸಿಂಗಂ ಮತ್ತು ಪುಷ್ಪಾ ನಡುವೆ ಭಾರಿ ಬಾಕ್ಸ್ ಆಫೀಸ್ ಪೈಪೋಟಿ ಏರ್ಪಡಲಿದೆ.

ಇದನ್ನೂ ಓದಿ: ಸಿಂಘಂ ಎಗೈನ್: ಪೊಲೀಸ್​ ಅಧಿಕಾರಿ ಶಕ್ತಿ ಶೆಟ್ಟಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ - ಫಸ್ಟ್ ಲುಕ್ ಔಟ್

Last Updated : Oct 30, 2023, 2:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.