ETV Bharat / entertainment

ಮಗಳ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ರಣ್​​​ಬೀರ್ ಕಪೂರ್: ವಿಡಿಯೋ ನೋಡಿ - ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ

ಬಾಲಿವುಡ್​ ನಟ ರಣ್​​​ಬೀರ್ ಕಪೂರ್ ತಮ್ಮ ಭುಜದ ಮೇಲೆ ಪುತ್ರಿ ರಾಹಾ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ranbir kapoor tattoo
ರಣ್​​​ಬೀರ್ ಕಪೂರ್ ಟ್ಯಾಟೂ
author img

By ETV Bharat Karnataka Team

Published : Nov 24, 2023, 5:08 PM IST

Updated : Nov 24, 2023, 5:20 PM IST

ಬಾಲಿವುಡ್​ ಸ್ಟಾರ್ ರಣ್​​​ಬೀರ್ ಕಪೂರ್ ತಮ್ಮ ಮುಂದಿನ ಬಹುನಿರಿಕ್ಷಿತ ಸಿನಿಮಾ 'ಅನಿಮಲ್' ಪ್ರಚಾರದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಮಹಾನಗರಗಳಲ್ಲಿ ತಿರುಗಾಟ ಹೆಚ್ಚಾಗಿದೆ. ಇತ್ತೀಚೆಗೆ ಸೌತ್ ಸೂಪರ್‌ ಸ್ಟಾರ್ ನಂದಮೂರಿ ಬಾಲಕೃಷ್ಣ ಅವರು ನಡೆಸಿಕೊಡುವ ''ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ'' ಶೀರ್ಷಿಕೆಯ ತೆಲುಗು ಸೆಲೆಬ್ರಿಟಿ ಚಾಟ್ ಶೋನಲ್ಲಿ ರಣ್​ಬೀರ್​ ಕಪೂರ್ ತಮ್ಮ ತಂಡದೊಂದಿಗೆ ಕಾಣಿಸಿಕೊಂಡರು. ಒಟಿಟಿ ಕಾರ್ಯಕ್ರಮದ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ರಣ್​​ಬೀರ್ ತಮ್ಮ ಭುಜದ ಮೇಲೆ 'ರಾಹಾ' ಎಂಬ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದು, ಅದನ್ನು ಈ ಜನಪ್ರಿಯ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ್ದಾರೆ.

ರಣ್​​ಬೀರ್ ಕಪೂರ್ ಅವರು 'ಅನಿಮಲ್' ಸಹನಟಿ ರಶ್ಮಿಕಾ ಮಂದಣ್ಣ ಮತ್ತು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಜನಪ್ರಿಯ ಶೋ 'ಅನ್‌ಸ್ಟಾಪಬಲ್‌'ನಲ್ಲಿ ಕಾಣಿಸಿಕೊಂಡರು. ತಮ್ಮ ಚಿತ್ರ ಪ್ರಚಾರ ಮಾಡುವ ಸಲುವಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಸಂಪೂರ್ಣ ಸಂಚಿಕೆ ಒಟಿಟಿ ವೇದಿಕೆ 'ಆಹಾ'ದಲ್ಲಿ ಲಭ್ಯವಿದೆ. ಸಂಚಿಕೆಯು ಬಹಳ ಮನರಂಜನಾತ್ಮಕವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಶೋನ ವಿಡಿಯೋ ತುಣುಕುಗಳು ವೈರಲ್​ ಆಗಿದೆ. ಕಾರ್ಯಕ್ರಮದ ವೈರಲ್ ವಿಡಿಯೋ ಒಂದರಲ್ಲಿ, ರಣ್​ಬೀರ್​ ಕಪೂರ್ ತಮ್ಮ ಪುತ್ರಿ ಹೆಸರನ್ನು ಟ್ಯಾಟು ಹಾಕಿಸಿಕೊಂಡಿರುವುದನ್ನು ಪ್ರದರ್ಶಿಸಿದ್ದಾರೆ.

2022ರ ನವೆಂರ್​ನಲ್ಲಿ ರಣ್​​ಬೀರ್ ಕಪೂರ್ ಹಾಗೂ ಆಲಿಯಾ ಭಟ್ ದಂಪತಿ ಪೋಷಕರಾಗಿ ಭಡ್ತಿ ಪಡೆದರು. ಪುತ್ರಿ ರಾಹಾ ಹೆಸರನ್ನು ತಮ್ಮ ಭುಜದ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ಬಾಲಿವುಡ್​ ಸ್ಟಾರ್ ಹೀರೋ ಅದನ್ನು ಹೆಮ್ಮೆಯಿಂದ ಪ್ರದರ್ಶಿಸಿದ್ದಾರೆ. ಇದಕ್ಕೂ ಮೊದಲು 2022ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ರಣ್​​ಬೀರ್ ಕಪೂರ್ ತಮ್ಮ ಮಕ್ಕಳಿಗೆ ಸಂಬಂಧಿಸಿದ ಟ್ಯಾಟೂಗಳನ್ನು ಹಾಕಿಸಿಕೊಳ್ಳುವ ಬಗ್ಗೆ ಮಾತನಾಡಿದ್ದರು. ಫೈನಲಿ ಟ್ಯಾಟೂ ಹಾಕಿಸಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ರಣ್​ಬೀರ್ ಕಪೂರ್​ಗೆ ಕನ್ನಡ, ತೆಲುಗು ಕಲಿಸಿದ ರಶ್ಮಿಕಾ ಮಂದಣ್ಣ: ವಿಡಿಯೋ ನೋಡಿ

ರಣ್​​​ಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಸಿನಿಮಾ ಟ್ರೇಲರ್​ ನಿನ್ನೆಯಷ್ಟೇ ಬಿಡುಗಡೆ ಆಗಿದೆ. ಟ್ರೇಲರ್​ ಸಿನಿಪ್ರಿಯರಿಂದ ಮೆಚ್ಚುಗೆ ಸ್ವೀಕರಿಸಿದ್ದು, ಪ್ರೇಕ್ಷಕರು ಸಿನಿಮಾ ನೋಡುವ ಕುತೂಹಲ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾಲಿಗೆ ಸೌತ್​ ಸ್ಟಾರ್ ಹೀರೋಯಿನ್​ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್​ ಸೂಪರ್​ ಸ್ಟಾರ್ ರಣ್​​​ಬೀರ್ ಕಪೂರ್ ಸ್ಕ್ರೀನ್​​ ಶೇರ್ ಮಾಡಿದ್ದಾರೆ. ಟ್ರೇಲರ್ ಮೆಚ್ಚಿದ ಆಲಿಯಾ ಭಟ್ ಸಿನಿಮಾ ಬಗೆಗಿನ ತಮ್ಮ ಉತ್ಸಾಹ ಮತ್ತು ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ತಂದೆ-ಮಗನ ಸಂಬಂಧದ ಕುರಿತ ಆಕರ್ಷಕ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಡಿಸೆಂಬರ್​ 1 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಭರದ ಪ್ರಚಾರ ಸಾಗಿದೆ.

ಇದನ್ನೂ ಓದಿ: 'ಅನಿಮಲ್'​ ಚಿತ್ರದ ಟ್ರೈಲರ್​ ಬಿಡುಗಡೆ; ತಂದೆ ರಕ್ಷಣೆಗೆ ಯಾರನ್ನಾದರೂ ಕೊಲ್ಲಲು ಸಿದ್ಧ ಈ ಮಗ

Last Updated : Nov 24, 2023, 5:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.