ETV Bharat / entertainment

ಮುಂಬೈನಲ್ಲಿ ಪತ್ನಿ, ಪುತ್ರಿಯೊಂದಿಗೆ ರಾಮ್​ ಚರಣ್​​: ವಿಡಿಯೋ ಇಲ್ಲಿದೆ - Ram Charan at Mumbai

ಆರ್​ಆರ್​ಆರ್​ ಸ್ಟಾರ್ ರಾಮ್​ ಚರಣ್​​ ಮುಂಬೈನಲ್ಲಿ ಪತ್ನಿ, ಪುತ್ರಿಯೊಂದಿಗೆ ಸಮಯ ಕಳೆಯುತ್ತಿದ್ದಾರೆ.

Ram Charan with family at Mumbai
ಮುಂಬೈನಲ್ಲಿ ರಾಮ್ ಚರಣ್ ಕುಟುಂಬ
author img

By ETV Bharat Karnataka Team

Published : Dec 16, 2023, 2:26 PM IST

ಸಿನಿಮಾ ಸೆಲೆಬ್ರಿಟಿಗಳು ಮನೆಯಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳ ಕ್ಯಾಮರಾಗಳಲ್ಲಿ ಸೆರೆಯಾಗುತ್ತಾರೆ. ಸಾಮಾನ್ಯವಾಗಿ ಸಿನಿ ಸೆಲೆಬ್ರಿಟಿಗಳು ಎಲ್ಲೇ ಕಂಡರೂ ಪಾಪರಾಜಿಗಳು ಅವರ ವಿಡಿಯೋ ಸೆರೆ ಹಿಡಿದು ವೈರಲ್​​ ಮಾಡುತ್ತಾರೆ. ಬಾಲಿವುಡ್​ ಮಂದಿಗೆ ಇದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚೆಗೆ ಟಾಲಿವುಡ್ ಸೂಪರ್​ ಸ್ಟಾರ್ ರಾಮ್ ಚರಣ್ ಕೂಡ ಮುಂಬೈ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ನಟ ರಾಮ್​ಚರಣ್​​ ಮುಂಬೈನಲ್ಲಿದ್ದಾರೆ. ಪತ್ನಿ ಉಪಾಸನಾ ಕೂಡ ಮಗಳು ಕ್ಲಿಂ ಕಾರ ಕೊನಿಡೇಲಾ ಜೊತೆ ಮುಂಬೈ ತಲುಪಿದ್ದಾರೆ. ಕುಟುಂಬ ಒಟ್ಟುಗೂಡುತ್ತಿದ್ದಂತೆ ಪಾಪರಾಜಿಗಳು ತಮ್ಮ ಕೆಲಸ ಶುರು ಹಚ್ಚಿಕೊಂಡಿದ್ದಾರೆ. ರಾಮ್ ಚರಣ್ ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ಕೆಲ ದಿನಗಳನ್ನು ಕಳೆಯಲಿದ್ದಾರೆ ಎಂಬ ಮಾಹಿತಿ ಇದೆ.

ಮುಂಬೈನಲ್ಲಿರುವ ರಾಮ್ ಚರಣ್ ಕುಟುಂಬದ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿವೆ. ಕ್ಲಿಂ ಕಾರ ಹುಟ್ಟಿದ ನಂತರ ಈ ಕುಟುಂಬ ಎಲ್ಲಿ ಕಂಡರೂ ಕೂಡ ಫೋಟೋ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತವೆ. ಅಭಿಮಾನಿಗಳು ಸಹ ರಾಮ್​ ಚರಣ್ ಅವರಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡಲು ಕಾತರರಾಗಿರುತ್ತಾರೆ. ಮುದ್ದಾದ ಕುಟುಂಬ ಅಭಿಮಾನಿಗಳು ವರ್ಣಿಸೋದುಂಟು. ಎಂದಿನಂತೆ ಸದ್ಯ ವೈರಲ್​ ಆಗುತ್ತಿರುವ ವಿಡಿಯೋಗೂ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಇಡೀ ಕುಟುಂಬ ಮುಂಬೈಗೆ ಬರಲು ಕಾರಣವೇನು? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಮತ್ತೊಂದೆಡೆ ರಾಮ್​ ಚರಣ್ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಆರ್‌ಆರ್‌ಆರ್‌ನಲ್ಲಿ ತೆರೆ ಹಂಚಿಕೊಂಡಿರುವ ಜೂನಿಯರ್ ಎನ್‌ಟಿಆರ್, ಬಾಲಿವುಡ್ ಪ್ರಾಜೆಕ್ಟ್ ಪ್ರಾರಂಭಿಸಿದ್ದಾರೆ. ಇದೀಗ ರಾಮ್​​ ಚರಣ್ ಸಹ ಬಾಲಿವುಡ್ ಕಡೆಗೂ ಗಮನ ಹರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈನಲ್ಲಿ ಕೆಲ ದಿನಗಳ ಕಾಲ ಇರಲು ಇದೇ ಕಾರಣ ಎಂದು ಕೂಡ ಅಂದಾಜಿಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.

ಇದನ್ನೂ ಓದಿ: ಅಮಿತಾಭ್​, ಐಶ್ವರ್ಯಾ, ಶಾರುಖ್​​​ ಡ್ಯಾನ್ಸ್ ವಿಡಿಯೋ ವೈರಲ್​​; ಅಭಿಮಾನಿಗಳಿಂದ ಪ್ರೀತಿಯ ಮಳೆ

ವೈರಲ್ ವಿಡಿಯೋಗಳಲ್ಲಿ ರಾಮ್ ಚರಣ್, ಉಪಾಸನಾ, ಕ್ಲಿಂ ಕಾರ ಜೊತೆಗೆ ಮಹಿಳೆಯೋರರ್ವರು ಕಾಣಿಸಿಕೊಂಡಿದ್ದಾರೆ. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಮಗ ತೈಮೂರ್​​ನನ್ನು ನೋಡಿಕೊಳ್ಳುವವರು (ಕೇರ್ ಟೇಕರ್). ಆದರೆ ಅವರೇಕೆ ರಾಮ್​ ಚರಣ್​ ಕುಟುಂಬದ ಜೊತೆ ಕಾಣಿಸಿಕೊಂಡಿದ್ದಾರೆಂಬ ಗೊಂದಲದಲ್ಲಿ ನೆಟ್ಟಿಗರಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ನಲ್ಲಿ 'ಸಲಾರ್​'ನ ಮೊದಲ ಟಿಕೆಟ್ ಖರೀದಿಸಿದ ಬಾಹುಬಲಿ ನಿರ್ದೇಶಕ ರಾಜಮೌಳಿ

ಇನ್ನೂ ನಟ​ ತಮ್ಮ ಕುಟುಂಬ ಸಮೇತ ಮುಂಬೈಗೆ ವೈಯಕ್ತಿಕ ಕೆಲಸದ ಮೇಲೆ ಬಂದಿದ್ದಾರೆ ಎಂದು ರಾಮ್​ ಚರಣ್ ತಂಡದ ಸದಸ್ಯರು ಹೇಳಿದ್ದಾರೆ. ಸದ್ಯ ರಾಮ್ ಚರಣ್ ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಗ್ಗೆ ಯಾವುದೇ ಹೊಸ ಅಪ್‌ಡೇಟ್‌ಗಳಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.