ಗ್ಲ್ಯಾಮರ್ ಹಾಗೂ ಬೋಲ್ಡ್ ಪಾತ್ರಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಸಕ್ಸಸ್ ಕಂಡ ನಟಿ ರಾಗಿಣಿ ದ್ವಿವೇದಿ. ಸದ್ಯ ಕನ್ನಡ ಸಿನಿಮಾರಂಗದಲ್ಲಿ ಒಂದು ದಶಕ ಪೂರೈಯಿಸಿರುವ ರಾಗಿಣಿ ದ್ವಿವೇದಿ ಇದೀಗ ಕನ್ನಡ ಅಲ್ಲದೇ ಪರಭಾಷೆಯ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಬಾಲಿವುಡ್ ಸಿನಿಮಾ ಬಗ್ಗೆ ಸ್ವತಃ ರಾಗಿಣಿ ದ್ವಿವೇದಿ ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.
ಸಖತ್ ಸ್ಟೈಲಿಷ್ ಆಗಿ ಬಂದಿದ್ದ ರಾಗಿಣಿ ದ್ವಿವೇದಿ ತಮ್ಮ ಮೊದಲ ಹಿಂದಿ ಸಿನಿಮಾ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ಈ ಸಿನಿಮಾಗೆ ವಾಕಾ ಹೌಸ್ ಅಂತಾ ಟೈಟಲ್ ಇಟ್ಟಿದ್ದು, ಔಟ್ ಅಂಡ್ ಔಟ್ ಹಾರಾರ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಈ ಚಿತ್ರವನ್ನು ಆಯುಷ್ ಶರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಆಯುಷ್ ಶರ್ಮಾ ಬಾಲಿವುಡ್ನಲ್ಲಿ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರ ಆಯುಷ್ ಶರ್ಮಾಗೆ ಡ್ರೀಮ್ ಪ್ರಾಜೆಕ್ಟ್ ಅಂತಾ ಹೇಳಬಹುದು. ಇನ್ನು ಈ ಸಿನಿಮಾವನ್ನು ಬಾಂಬೆ ಮೂಲದ ಮೋಹನ್ ಎಂಬುವರು ಪ್ರೊಡಕ್ಷನ್ ಹೌಸ್ ಎಂಬ ಹೆಸರಿನ ಅಡಿ ಮತ್ತೊಬ್ಬ ಅಮೆರಿಕ ಇನ್ವೆಸ್ಟರ್ ಜೊತೆಗೂಡಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಲಂಡನ್ನಲ್ಲಿ ಮೊದಲ ಶೆಡ್ಯೂಲ್ ಶೂಟಿಂಗ್: ಈಗಾಗ್ಲೇ ಲಂಡನ್ನಲ್ಲಿ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸಿಕೊಂಡು ರಾಗಿಣಿ ದ್ವಿವೇದಿ ಬಂದಿದ್ದು, ಲಂಡನ್ ಶೂಟಿಂಗ್ ಮಾಡಬೇಕಾದರೆ ತುಂಬಾ ಕಷ್ಟ ಆಯಿತ್ತು. ಏಕೆಂದರೆ, ಅಲ್ಲಿ ತುಂಬಾ ಚಳಿ ಇರುತ್ತೆ ನನಗೆ ಚಳಿ ಅಂದ್ರೆ ಆಗಿ ಬರಲ್ಲ. ಹೀಗಾಗಿ ಅಲ್ಲಿ ಶೂಟಿಂಗ್ ಮಾಡುವಾಗ ಕಷ್ಟ ಆಯ್ತು. ಹಿಂದಿಯಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ ತುಪ್ಪದ ಬೆಡಗಿ ಸಿನಿಮಾ ಎಲ್ಲರಿಗೂ ಇಷ್ಟ ಆಗುತ್ತೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಕನ್ನಡ, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ರಾಗಿಣಿ ದ್ವಿವೇದಿ ನಟಿಸುತ್ತಿದ್ದಾರೆ. ಇದೀಗ ಅವರು ಬಾಲಿವುಡ್‌ನಲ್ಲೂ ಮಿಂಚುವುದಕ್ಕೆ ರೆಡಿ ಆಗಿದ್ದಾರೆ. ಬೆಂಗಾಳಿ ನಟ ಪರಮ್ ಜೊತೆ ರಾಗಿಣಿ ದ್ವಿವೇದಿ ಪರದೆ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ರಾ ರಾಜ್‌ಕುಮಾರ್ ಸಿನಿಮಾದ ಒಂದು ಹಾಡಿಗೆ ರಾಗಿಣಿ ಹೆಜ್ಜೆ ಹಾಕಿದ್ದರು. ಇದೀಗ ಪೂರ್ಣ ಪ್ರಮಾಣದಲ್ಲಿ ಹಿಂದಿ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅದರ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಖತ್ ಗ್ಲಾಮರಸ್ ಆಗಿ ಆ ಚಿತ್ರದಲ್ಲಿ ರಾಗಿಣಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ನಟನೆಗೆ ತಂದೆ ತಾಯಿ ಸಂತಸ: ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಗಿಣಿ, ಇದು ಬಹಳ ಒಳ್ಳೆಯ ತಂಡ. ಇದೊಂದು ಹಾರರ್ ಥ್ರಿಲ್ಲರ್ ಸಿನಿಮಾ. ಅಪ್ಪ ರಾಕೇಶ್ ಕುಮಾರ್ ದ್ವಿವೇದಿ ಮಾಧ್ಯಮ ಗೋಷ್ಠಿಗೆ ಬಂದಿದ್ದರು. ರಾಗಿಣಿ ದ್ವಿವೇದಿ ಸದ್ಯ ಬಾಲಿವುಡ್ನಲ್ಲಿ ಸಿನಿಮಾ ಮಾಡುತ್ತಿರುವುದು ತಂದೆ ತಾಯಿಗೆ ಖುಷಿ ಕೊಟ್ಟಿದೆಯಂತೆ. ಈ ಬಾರಿಯಾದರೂ ಸಬ್ ಟೈಟಲ್ ಇಲ್ಲದೇ ಮಗಳ ಸಿನಿಮಾ ನೋಡಬಹುದು ಎಂದು ಪೋಷಕರು ಹೇಳಿದ್ದಾರೆ ಎಂದು ರಾಗಿಣಿ ತಿಳಿಸಿದರು. ಚಿತ್ರರಂಗದಲ್ಲಿ ಗುರುತಿಸಿ ಕೊಳ್ಳಲು ತಂದೆ ತಾಯಿ ತುಂಬಾ ಬೆಂಬಲ ನೀಡಿದ್ದಾರೆ ಎಂದು ಇದೇ ವೇಳೆ ನೆನೆದರು.
ಸ್ಯಾಂಡಲ್ವುಡ್ನಲ್ಲಿ ವಿವಾಹ ಪರ್ವವೇ ಆರಂಭ ಆಗಿರುವ ಹಿನ್ನೆಲೆಯಲ್ಲಿ ಮಾಧ್ಯಮದವರು ಮದುವೆ ವಿಷಯವಾಗಿ ಪ್ರಶ್ನೆ ಮಾಡಿದಾಗ, ಮದುವೆ ಮಾಡಿಕೊಳ್ಳುವವರು ಸಂತೋಷವಾಗಿ ಇರಲಿ. ಆದರೆ ನಾನು ಇವಾಗ್ಲೇ ಮದುವೆ ಮಾಡಿಕೊಳ್ಳುವ ಯೋಚನೆ ಇಲ್ಲ. ನನಗೆ ಸಿನಿಮಾ ಮಾಡೋದು ಹಾಗೂ ಸಿನಿಮಾಗಳನ್ನು ನೋಡ್ತಾ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಗುರಿಯಿದೆ ಎಂದರು. ಈ ಮಾತು ಹೇಳುವ ಮೂಲಕ ಮದುವೆ ವಿಚಾರವನ್ನು ಡೈವರ್ಟ್ ಮಾಡುವ ಪ್ರಯತ್ನ ಮಾಡಿದರು.
ಇದನ್ನೂ ಓದಿ: ಕೆಡಿ ಸಿನಿಮಾಕ್ಕಾಗಿ ಬರೊಬ್ಬರಿ 18 ಕೆಜಿ ತೂಕ ಇಳಿಸಿಕೊಂಡ ಆ್ಯಕ್ಷನ್ ಪ್ರಿನ್ಸ್!: ಅದ್ಧೂರಿ ಆರ್ಭಟ ಹೀಗಿದೆ