ETV Bharat / entertainment

ಡೈರೆಕ್ಟರ್​ ಲೋಹಿತ್ ಜತೆ ಹೊಸ ಚಿತ್ರಕ್ಕೆ ಗ್ರೀನ್‌ ಸಿಗ್ನಲ್ ಕೊಟ್ಟ ಡೈನಾಮಿಕ್ ಪ್ರಿನ್ಸ್ - Prajwal lohit new movie

ನಿರ್ದೇಶಕ ಲೋಹಿತ್ ಮತ್ತು ನಟ ಪ್ರಜ್ವಲ್ ದೇವರಾಜ್ ಮಾಫಿಯಾ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಇದರ ನಡುವೆಯೇ ಮತ್ತೊಂದು ಹೊಸ ಸಿನಿಮಾವನ್ನು ಮಾಡೋದಾಗಿ ಈ ಜೋಡಿ ಘೋಷಿಸಿದೆ.

Prajwal Devaraj new movie with director lohit
ನಿರ್ದೇಶಕ ಲೋಹಿತ್ ಜೊತೆ ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ
author img

By

Published : Nov 17, 2022, 5:45 PM IST

ಸ್ಯಾಂಡಲ್​ವುಡ್​ನಲ್ಲಿ‌ ಮಮ್ಮಿ, ದೇವಕಿ ಚಿತ್ರಗಳ ಮೂಲಕ ಭರವಸೆ ಮೂಡಿಸಿರೋ ನಿರ್ದೇಶಕ ಲೋಹಿತ್ ಹೆಚ್. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜತೆ ಹೊಸ ಚಿತ್ರವನ್ನು ಮಾಡೋದಾಗಿ ಘೋಷಿಸಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಮಾಫಿಯಾ ಸಿನಿಮಾಗೆ ಲೋಹಿತ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದು, ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರ ನಡುವೆಯೇ ಮತ್ತೊಂದು ಹೊಸ ಸಿನಿಮಾವನ್ನು ಈ ಜೋಡಿ ಘೋಷಿಸಿದೆ.

ಡೈರೆಕ್ಟರ್ ಲೋಹಿತ್ ಹೇಳಿದ ಕಥೆಯ ಎಳೆ ತುಂಬಾ ಇಷ್ಟ ಆಯ್ತು. ಅವರ ಕೆಲಸದ ಶೈಲಿ ಹಾಗೂ ಸಾಮರ್ಥ್ಯವನ್ನು ಹತ್ತಿರದಿಂದ ಅರಿತಿರುವುದರಿಂದ ಮತ್ತೊಂದು ಸಿನಿಮಾವನ್ನು ಅವರೊಂದಿಗೆ ಮಾಡಲು ಕೈ ಜೋಡಿಸಿದ್ದೇನೆ ಎಂದು ನಟ ಪ್ರಜ್ವಲ್ ದೇವರಾಜ್ ತಿಳಿಸಿದ್ದಾರೆ.

ಸದ್ಯ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದ್ದು, ಡಿಸೆಂಬರ್​ನಲ್ಲಿ ಚಿತ್ರದ ಕೆಲಸಗಳು ಆರಂಭವಾಗಲಿವೆ. ಇದೊಂದು ಹಾರರ್ ಥ್ರಿಲ್ಲರ್ ಒಳಗೊಂಡ ಟೈಂ ಲೂಪ್ ಸಿನಿಮಾವಾಗಿದೆ. ಸದ್ಯದಲ್ಲೇ ಸಿನಿಮಾ ಟೈಟಲ್, ತಾರಾಬಳಗ ಸೇರಿ ಎಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳೋದಾಗಿ ನಿರ್ದೇಶಕರು ಹೇಳಿದ್ದಾರೆ.

ಮಾಫಿಯಾ‌ ಸಿನಿಮಾ ನಡೆಯುತ್ತಿರುವಾಗಲೇ ಈ ಸಿನಿಮಾ ಬಗ್ಗೆ ಪ್ರಜ್ವಲ್ ಸರ್ ಜೊತೆ ಮಾತನಾಡಿದ್ದೆ. ಕಥೆ ಕೇಳಿ ಸಖತ್ ಇಂಪ್ರೆಸ್ ಆಗಿ ನಾವೇ ಈ ಪ್ರಾಜೆಕ್ಟ್ ಮಾಡೋಣ ಎಂದು ಹೇಳಿದ್ರು. 'ಮಾಫಿಯಾ'ದಲ್ಲಿ ಪ್ರಜ್ವಲ್ ಸರ್ ಜೊತೆ ಕೆಲಸ ಮಾಡಿದ್ದು, ಒಂದೊಳ್ಳೆ ಅನುಭವ ನೀಡಿದೆ. ತುಂಬಾ ಸಪೋರ್ಟಿವ್ ಆಗಿರುತ್ತಾರೆ ಎಂದು ನಿರ್ದೇಶಕ ಲೋಹಿತ್ ತಿಳಿಸಿದರು.

ಇದನ್ನೂ ಓದಿ: ಬೆಳಕಿನ ಹಬ್ಬಕ್ಕೆ ಬಂತು ಮಾಫಿಯಾ ಚಿತ್ರದ ನೂತನ ಪೋಸ್ಟರ್

ಶಾನ್ವಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿ ಶಾನ್ವಿ ಎನ್ ಮತ್ತು ಅಚಿಂತ್ಯ ಆರ್ ಆರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ನೊಬಿನ್ ಪೌಲ್ ಸಂಗೀತ ನಿರ್ದೇಶನ, ಜೆಬಿನ್ ಪಿ ಜೇಕಬ್ ಕ್ಯಾಮರಾ ನಿರ್ದೇಶನ, ಸಿ.ರವಿಚಂದ್ರನ್ ಸಂಕಲನ ಚಿತ್ರಕ್ಕಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ನೀಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.