ETV Bharat / entertainment

'ಬ್ರೋ' ಟ್ರೇಲರ್​ ರಿಲೀಸ್​: ಪವನ್​ ಕಲ್ಯಾಣ್ ​- ಸಾಯಿ ತೇಜ್ ​ಕಾಂಬೋ ಸೂಪರ್​ - ಪವರ್​ ಸ್ಟಾರ್​ ಪವನ್​ ಕಲ್ಯಾಣ್​

ಪವನ್​ ಕಲ್ಯಾಣ್​ ಮತ್ತು ಸಾಯಿ ಧರಂ ತೇಜ್ ನಟನೆಯ 'ಬ್ರೋ' ಸಿನಿಮಾದ ಟ್ರೇಲರ್​ ಇಂದು ಬಿಡುಗಡೆಯಾಗಿದೆ.

bro
ಬ್ರೋ
author img

By

Published : Jul 22, 2023, 9:41 PM IST

ತೆಲುಗು ಚಿತ್ರರಂಗದ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಮತ್ತು ಮೆಗಾ ಹೀರೋ ಸಾಯಿ ಧರಂ ತೇಜ್​ ಕಾಂಬೋದಲ್ಲಿ ಮೂಡಿ ಬರುತ್ತಿರುವ ಚಿತ್ರ 'ಬ್ರೋ'. 2023ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಇದೂ ಒಂದು. ಇಂದು ಈ ಚಿತ್ರದ ಟ್ರೇಲರ್​ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. 'ಬ್ರೋ' ತಮಿಳಿನ 'ವಿನೋದಯ ಸೀತಂ' ಚಿತ್ರದ ರಿಮೇಕ್​ ಆಗಿದೆ. ಸಮುದ್ರಖನಿ 'ಬ್ರೋ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರವು ಜುಲೈ 28 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಂದು ರಿಲೀಸ್​ ಆಗಿರುವ ಟ್ರೇಲರ್​ ಸದ್ಯ ಟ್ರೆಂಡಿಂಗ್​ ಆಗಿದೆ.

  • " class="align-text-top noRightClick twitterSection" data="">

ಟ್ರೇಲರ್​ನಲ್ಲೇನಿದೆ?: 'ಎಲ್ಲ ಮನುಷ್ಯರು ಭಸ್ಮಾಸುರನ ವಂಶಸ್ಥರು' ಎಂಬ ಪವರ್​ ಸ್ಟಾರ್​ ಪವನ್​ ಕಲ್ಯಾಣ್ ಡೈಲಾಗ್​ನೊಂದಿಗೆ ಟ್ರೇಲರ್​ ಪ್ರಾರಂಭವಾಗುತ್ತದೆ. ಪವನ್​ ಕಲ್ಯಾಣ್​ ಮತ್ತು ಸಾಯಿ ತೇಜ್​ ಭೇಟಿಯಾಗುವುದರೊಂದಿಗೆ ಕಥೆ ಪ್ರಾರಂಭವಾಗುತ್ತದೆ. ಪವನ್​ ಮತ್ತು ತೇಜ್​ ಜೊತೆಯಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಸಂತಸ ತಂದಿದೆ. ಬಹುದಿನಗಳ ನಂತರ ಬ್ರಹ್ಮಾನಂದ ಮತ್ತೆ ತೆರೆ ಮೇಲೆ ಹಾಸ್ಯನಟನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪವನ್ ಕಲ್ಯಾಣ್ ಅವರ ಹಿಟ್ ಹಾಡುಗಳನ್ನು ಟ್ರೇಲರ್​ನ ಕೊನೆಯಲ್ಲಿ ಒಂದು ದೃಶ್ಯದಲ್ಲಿ ಮಾತ್ರ ತೋರಿಸಲಾಗಿದೆ.

ಇದನ್ನೂ ಓದಿ: ಮಾನ್ಯತಾ ದತ್ ಹುಟ್ಟುಹಬ್ಬ: ಪತ್ನಿಗೆ ಹೃದಯದಾಳದಿಂದ ಶುಭಾಶಯ ಕೋರಿದ ನಟ ಸಂಜಯ್​ ದತ್​

ಚಿತ್ರತಂಡ ಹೀಗಿದೆ.. ಈ ಸಿನಿಮಾದಲ್ಲಿ ಸಾಯಿ ತೇಜ್ ಎದುರು ನಾಯಕಿಯರಾಗಿ ಕೇತಿಕಾ ಶರ್ಮಾ ಮತ್ತು ಪ್ರಿಯಾ ಪ್ರಕಾಶ್ ನಟಿಸಿದ್ದಾರೆ. ಈ ಚಿತ್ರಕ್ಕೆ ತಮನ್ ಸಂಗೀತ ಸಂಯೋಜಿಸಿದ್ದಾರೆ. ಇನ್ನೊಂದೆಡೆ ತ್ರಿವಿಕ್ರಮ್​ ಮೂಲ ಕಥೆಯಲ್ಲಿ ಕೊಂಚ ಬದಲಾವಣೆ ಮಾಡಿ ತೆಲುಗು ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಕಟ್ಟಿಕೊಟ್ಟಿದ್ದಾರೆ. ಜೀ ಸ್ಟುಡಿಯೋಸ್ ಜೊತೆಗೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿಯಲ್ಲಿ ವಿವೇಕ್ ಕುಚಿಬೋಟ್ಲ ಮತ್ತು ಟಿಜಿ ವಿಶ್ವಪ್ರಸಾದ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ.

ತಣಿಕೆಲ್ಲ ಭರಣಿ, ಬ್ರಹ್ಮಾನಂದಂ, ಸುಬ್ಬರಾಜು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶನಿವಾರ ಬಿಡುಗಡೆಯಾದ ಬ್ರೋ ಟ್ರೈಲರ್ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆರಂಭಿಸಿದೆ. ಬಿಡುಗಡೆಯಾದ 3 ಗಂಟೆಯಲ್ಲಿ 2.6 ಮಿಲಿಯನ್​ ವಿಕ್ಷಣೆಯನ್ನು ಪಡೆದುಕೊಂಡಿದೆ. 3 ಲಕ್ಷದ 39 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಶರವೇಗದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದ ಶೂಟಿಂಗ್ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿದೆ. ಚಿತ್ರವು ಇದೇ ಜುಲೈ 28 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪವನ್​- ಸಾಯಿ ಧರಂ ನಟನೆ ಸೂಪರ್​ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಮಹೇಶ್​​ ಬಾಬು ಫ್ಯಾಮಿಲಿ ಟೈಮ್​: ಹೆಂಡತಿ, ಮಕ್ಕಳೊಂದಿಗೆ ಪ್ರವಾಸ ಹೊರಟ ಸೂಪರ್​ ಸ್ಟಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.