ETV Bharat / entertainment

'ಲವ್‍ ಯೂ ಶಂಕರ್' ಚಿತ್ರಕ್ಕೆ ಸಿಕ್ತು ಶ್ರೀ ಸಿದ್ಧಗಂಗಾ ಮಹಾಸ್ವಾಮೀಜಿಗಳ ಆರ್ಶೀವಾದ - love you Shankar

'ಲವ್‍ ಯೂ ಶಂಕರ್' ಸಿನಿಮಾದ 'ಓಂ ನಮಃ ಶಿವಾಯ' ಹಾಡನ್ನು ಸಿದ್ಧಲಿಂಗ ಮಹಾಸ್ವಾಮೀಜಿಗಳು ಬಿಡುಗಡೆ ಮಾಡಿದ್ದಾರೆ.

Om Namah Shivaya song from love you Shankar release
'ಲವ್‍ ಯೂ ಶಂಕರ್' ಚಿತ್ರಕ್ಕೆ ಸಿಕ್ತು ಶ್ರೀ ಸಿದ್ಧಗಂಗಾ ಮಹಾಸ್ವಾಮೀಜಿಗಳ ಆರ್ಶೀವಾದ
author img

By ETV Bharat Karnataka Team

Published : Oct 7, 2023, 6:48 AM IST

ಭಾರತದ ಅತೀ ದೊಡ್ಡ ಕಾಂಪೋಸಿಟ್‍ ಅನಿಮೇಷನ್‍ ಡ್ರಾಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಲವ್‍ ಯೂ ಶಂಕರ್' ಸಿನಿಮಾದ 'ಓಂ ನಮಃ ಶಿವಾಯ' ಹಾಡನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಬಿಡುಗಡೆ ಮಾಡಿದ್ದಾರೆ. ಈ ಮೂಲಕ 'ಲವ್‍ ಯೂ ಶಂಕರ್' ಚಿತ್ರತಂಡಕ್ಕೆ ಮಹಾಸ್ವಾಮೀಜಿಗಳ ಆರ್ಶೀವಾದ ಸಿಕ್ಕಂತಾಗಿದೆ.

ಓಂ ನಮಃ ಶಿವಾಯ ಹಾಡು ಅನಾವರಣ: 'ಓಂ ನಮಃ ಶಿವಾಯ' ಹಾಡಿಗೆ ವರ್ಧನ್ ಸಿಂಗ್ ಸಂಗೀತ ಸಂಯೋಜಿಸಿದ್ದಾರೆ. ರಿಲಯನ್ಸ್ ಎಂಟರ್​ಟೈನ್​​ಮೆಂಟ್ ಸ್ಟುಡಿಯೋ ಮತ್ತು ಎಸ್​ಡಿ ವರ್ಲ್ಡ್ ಫಿಲಂ ಪ್ರೈವೇಟ್‍ ಲಿಮಿಟೆಡ್‍ ಜೊತೆಯಾಗಿ ಅರ್ಪಿಸುತ್ತಿರುವ ಲವ್‍ ಯೂ ಶಂಕರ್ ಚಿತ್ರವನ್ನು ಜನಪ್ರಿಯ ನಿರ್ದೇಶಕ, ಮೈ ಫ್ರೆಂಡ್‍ ಗಣೇಶ ಖ್ಯಾತಿಯ ರಾಜೀವ್ ಎಸ್‍ ರುಯಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶ್ರೇಯಸ್‍ ತಲಪಾಡೆ, ತನಿಷಾ ಮುಖರ್ಜಿ, ಸಂಜಯ್‍ ಮಿಶ್ರಾ, ಮನ್‍ ಗಾಂಧಿ, ಅಭಿಮನ್ಯು ಸಿಂಗ್‍, ಪ್ರತೀಕ್‍ ಜೈನ್‍, ಹೇಮಂತ್‍ ಪಾಂಡೆ ಸೇರಿದಂತೆ ಮೊದಲಾದವರು ನಟಿಸಿದ್ದಾರೆ.

ವಿಭಿನ್ನ ಕಥಾಹಂದರದ ಸಿನಿಮಾ: ಈ ಸಿನಿಮಾ ತಮ್ಮ ವಿಭಿನ್ನ ಕಥಾಹಂದರ ಮತ್ತು ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಲಿದೆ ಎಂಬುದು ಚಿತ್ರತಂಡದ ವಿಶ್ವಾಸ. ತೇಜಸ್‍ ದೇಸಾಯಿ ಮತ್ತು ಸುನೀತಾ ದೇಸಾಯಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವರ್ಧನ್‍ ಸಿಂಗ್‍ ಮತ್ತು ರಾಮಿರಾ ತನೇಜ ಸಹ - ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: 'ಸುಶಾಂತ್ ಮಾನಸಿಕ ಪರಿಸ್ಥಿತಿ ನನಗೆ ತಿಳಿದಿತ್ತು': ಗೆಳತಿ ರಿಯಾ ಚಕ್ರವರ್ತಿ

ಕನ್ನಡ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರವು ನವಿರಾದ ಭಾವನೆಗಳು, ಅದ್ಭುತ ಪಾತ್ರಗಳು, ಉತ್ತಮ ಹಾಡುಗಳು ಮತ್ತು ಕಲಾವಿದರ ಅದ್ಭುತ ಪಾತ್ರಪೋಷಣೆಯಿಂದ ಎಲ್ಲ ಭಾಷೆಗಳ ಮತ್ತು ಪ್ರದೇಶಗಳ ಪ್ರೇಕ್ಷಕರಿಗೆ ಆಪ್ತವಾಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ಈ ಲವ್‍ ಯೂ ಶಂಕರ್ ಸಿನಿಮಾ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ವಿಸಿಕಾ ಫಿಲ್ಮ್ಸ್​ (Visica films) ವಿತರಣಾ ಸಂಸ್ಥೆ ಕರ್ನಾಟಕದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಮಾರ್ಡನ್​ Or ಟ್ರೆಡಿಶನಲ್​​.. ಎರಡಕ್ಕೂ ಸೈ ಈ ನಾಗಿನ್​ ನಟಿ; ಮನಸೆಳೆಯುವ ಮೌನಿ ಮೋಹಕ ನೋಟ ನೋಡಿ

2023ರಲ್ಲಿ ಸಾಲು ಸಾಲು ಸಿನಿಮಾ ಬಿಡುಗಡೆ ಆಗಿದೆ. ಬಾಲಿವುಡ್​ನಿಂದ ಹಿಡಿದು ದಕ್ಷಿಣ ಚಿತ್ರರಂಗದವರೆಗೂ ನಾನಾ ಭಾಷೆಗಳ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವೀ ಆಗಿದೆ. ಮುಂದಿನ ಎರಡೂವರೆ ತಿಂಗಳಲ್ಲಿ ಬಹುನಿರೀಕ್ಷಿತ ಚಿತ್ರಗಲು ತೆರೆ ಕಾಣಲಿವೆ. 'ಲವ್‍ ಯೂ ಶಂಕರ್' ಕೂಡ ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.