ETV Bharat / entertainment

'ನಿಜವಾಗಿಯೂ ಏನಾದರೂ ಬದಲಾಗಿದೆಯೇ?': ಬಾಲ್ಯದ ವಿಡಿಯೋ ಹಂಚಿಕೊಂಡ ನಟಿ ಜಾಹ್ನವಿ ಕಪೂರ್​ - ಜಾಹ್ನವಿ ಕಪೂರ್ ಮತ್ತು ವರುಣ್ ಧವನ್

ನಟಿ ಜಾಹ್ನವಿ ಕಪೂರ್​ ತಮ್ಮ ಥ್ರೋಬ್ಯಾಕ್​ ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಬಾಲ್ಯದ ನೆನಪುಗಳೊಂದಿಗೆ ಅಭಿಮಾನಿಗಳಿಗೆ ಟ್ರೀಟ್​ ನೀಡಿದ್ದಾರೆ.

Janhvi Kapoor
ಜಾಹ್ನವಿ ಕಪೂರ್​
author img

By

Published : Jul 16, 2023, 5:39 PM IST

ನಟಿ ಜಾಹ್ನವಿ ಕಪೂರ್​ ಇನ್​ಸ್ಟಾ ವಿಡಿಯೋ

ಬಾಲಿವುಡ್​ ನಟಿ ಜಾಹ್ನವಿ ಕಪೂರ್​ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಬವಾಲ್​, ದೇವರ, ಮಿಸ್ಟರ್​ ಆ್ಯಂಡ್​ ಮಿಸೆಸ್​ ಮಾಹಿ, ಉಲ್ಜಾ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲ ಚಿತ್ರಗಳಿಗೆ ಈಗಾಗಲೇ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಮುಂದಿನ ಪ್ರಾಜೆಕ್ಟ್​ಗಳು ಇನ್ನಷ್ಟೇ ಘೋಷಣೆಯಾಗಬೇಕಿದೆ. ಹೀಗೆ ಒಂದರ ಹಿಂದೆ ಒಂದರಂತೆ ಬಹುಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಅದರಲ್ಲಿ 'ಬವಾಲ್'​ ತೆರೆಕಾಣಲು ಸಜ್ಜಾಗಿದೆ. ಈ ಸಿನಿಮಾ ವಿಚಾರವಾಗಿಯೇ ಜಾಹ್ನವಿ ಕಪೂರ್​ ಸದ್ಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಇತ್ತ ಈ ಚೆಲುವೆ ಹೊಸ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸೋಷಿಯಲ್​ ಮೀಡಿಯಾದಲ್ಲೂ ಸದ್ದು ಮಾಡುತ್ತಿದ್ದಾರೆ. ಇದೀಗ ತಮ್ಮ ಬಾಲ್ಯದ ವಿಡಿಯೋದೊಂದಿಗೆ ಅಭಿಮಾನಿಗಳಿಗೆ ಟ್ರೀಟ್​ ನೀಡಿದ್ದಾರೆ. ಜಾಹ್ನವಿ ತಮ್ಮ ಥ್ರೋಬ್ಯಾಕ್​ ವಿಡಿಯೋವನ್ನು ಹಂಚಿಕೊಳ್ಳಲು ಇನ್​ಸ್ಟಾ ವೇದಿಕೆಯನ್ನು ಬಳಸಿಕೊಂಡರು. ಬಾಲ್ಯದ ನೆನಪುಗಳನ್ನು ದೃಶ್ಯ ರೂಪದಲ್ಲಿ ಕೈಬಿಟ್ಟರು. ವಿಡಿಯೋದಲ್ಲಿ ಜಾಹ್ನವಿ ನೀಲಿ ಬಣ್ಣದ ದಿರಿಸಿನಲ್ಲಿ ಕ್ಯೂಟ್​ ಆಗಿ ಕಂಡಿದ್ದಾರೆ. ಅವರ ಕೂದಲನ್ನು ಪೋನಿಟೇಲ್​ ಆಗಿ ಕಟ್ಟಲಾಗಿದೆ. ಗುಲಾಬಿ ಬಣ್ಣದ ಹೇರ್​ ಕ್ಲಿಪ್ಪನ್ನು ಹಾಕಿಕೊಂಡಿದ್ದಾರೆ.

ವಿಡಿಯೋವನ್ನು ಶೇರ್​ ಮಾಡಿರುವ ಜಾಹ್ನವಿ, 'ನಿಜವಾಗಿಯೂ ಏನಾದರೂ ಬದಲಾಗಿದೆಯೇ?' ಎಂದು ಬರೆದುಕೊಂಡಿದ್ದಾರೆ. ನಟಿಯ ಶೀರ್ಷಿಕೆ ಆಹಾರದ ಮೇಲಿನ ಪ್ರೀತಿಯನ್ನು ತೋರಿಸುತ್ತಿದೆ. ಮಗು ಜಾಹ್ನವಿಯ ಕೂದಲಿಗೆ ಆಹಾರ ಮೆತ್ತಿಕೊಂಡಿರುವುದು ವಿಡಿಯೋ ಮೆತ್ತಿಕೊಂಡಿದೆ. ತುಂಬಾ ಮುದ್ದಾದ ದೃಶ್ಯ ಇದಾಗಿದೆ. ಅಭಿಮಾನಿಗಳು, ನೀವೂ ಆಗಲೂ ಚೆಂದ, ಈಗ ಮತ್ತೂ ಚೆಂದ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ನಟಿ ಸಮಂತಾ ರುತ್ ಪ್ರಭು "ಹ್ಯಾಪಿ ಪ್ಲೇಸ್​" ಯಾವುದು ಗೊತ್ತಾ? "ಚೇತರಿಕೆಯ ಪ್ರಯಾಣ"ದಲ್ಲಿ ಸೌತ್​ ಸುಂದರಿ

'ಬಹುನಿರೀಕ್ಷಿತ ಬವಾಲ್​': ಜಾಹ್ನವಿ ಕಪೂರ್ ಮತ್ತು ವರುಣ್ ಧವನ್ ಅಭಿನಯದ ಬಹುನಿರೀಕ್ಷಿತ ರೊಮ್ಯಾಂಟಿಕ್ ಸಿನಿಮಾ 'ಬವಾಲ್‌'. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ನಿತೇಶ್ ತಿವಾರಿ ಆಕ್ಷನ್​ ಕಟ್​ ಹೇಳಿರುವ ಬವಾಲ್ ಜುಲೈ 21 ರಿಂದ ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ. ವಿಶ್ವ ಸಮರ 2 ರ ಹಿನ್ನೆಲೆಯನ್ನಿಟ್ಟುಕೊಂಡು ಕಥೆ ರಚಿಸಲಾಗಿದೆ.

ಚಿತ್ರತಂಡ ಎರಡು ದಿನಗಳ ಹಿಂದೆ ದಿಲ್ ಸೆ ದಿಲ್ ತಕ್ ಹಾಡನ್ನು ಅನಾವರಣಗೊಳಿಸಿದ್ದರು. ಪ್ಯಾರಿಸ್‌ನಲ್ಲಿ ಜೋಡಿ ನಡುವೆ ಪ್ರೇಮ ಚಿಗುರೊಡೆಯುತ್ತಿರುವ ದೃಶ್ಯಗಳು ಈ ದಿಲ್ ಸೆ ದಿಲ್ ತಕ್ ಹಾಡಿನಲ್ಲಿದೆ. ಅದಕ್ಕೂ ಮೊದಲು 'ತುಮ್ಹೆ ಕಿತ್ನಾ ಪ್ಯಾರ್ ಕರ್ತೆ' ಸಾಂಗ್​ ಅನ್ನು ರಿಲೀಸ್​ ಮಾಡಿದ್ದರು. ಈ ಹಾಡನ್ನು ಸಂಗೀತ ಮಾಂತ್ರಿಕ ಅರಿಜಿತ್ ಸಿಂಗ್ ಹಾಡಿದ್ದರೆ, ಮಿಥುನ್ ಅವರ ಸಂಯೋಜನೆ ಈ ಹಾಡಿಗಿತ್ತು.

ಚಿತ್ರವು ಒಂದು ವಿಶಿಷ್ಟ ಪ್ರೇಮಕಥೆಯಾಗಿದ್ದು, ಇದರಲ್ಲಿ ಜಾನ್ವಿ ಕಪೂರ್​ ಕನಸುಗಳುಳ್ಳ ಸರಳ ಹುಡುಗಿಯಾಗಿ ನಟಿಸಿದ್ದಾರೆ. "ನಟರಾದ ನಾವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇವೆ. ಆದರೆ ನಟರಾಗಿ, ಪ್ರತಿಭೆ ಅನಾವರಣಗೊಳಿಸಲು ಹೆಚ್ಚು ಅವಕಾಶಗಳನ್ನು ನೀಡುವ ಪಾತ್ರಗಳು ನಮಗೆ ಅಪರೂಪಕ್ಕೆ ಸಿಗುತ್ತದೆ. ಈ ವಿಶಿಷ್ಟ ರೊಮ್ಯಾಂಟಿಕ್​ ಸ್ಟೋರಿಯಲ್ಲಿ ನಿಶಾ ಆಗಿ ಕಾಣಿಸಿಕೊಂಡಿದ್ದೇನೆ'' ಎಂದು ತಿಳಿಸಿದರು.

ಇದನ್ನೂ ಓದಿ: Sudeep nephew Sanchith: 'ಜೂನಿಯರ್​ ಕಿಚ್ಚ'ನ 'ಜಿಮ್ಮಿ' ಕ್ಯಾರೆಕ್ಟರ್​ ಗ್ಲಿಂಪ್ಸ್ ಮೇ​ಕಿಂಗ್​ ವಿಡಿಯೋ ಔಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.