ETV Bharat / entertainment

ಫಿಫಾ ಫ್ಯಾನ್​​ ಫೆಸ್ಟ್‌ನಲ್ಲಿ ಬಾಲಿವುಡ್‌ ನಟಿ ನೋರಾ ಫತೇಹಿ ರಂಗು - Nora fatehi viral video

ನೋರಾ ಫತೇಹಿ ಫೀಫಾ ಫ್ಯಾನ್ ಫೆಸ್ಟಿವಲ್‌ನಲ್ಲಿ 'ಲೈಟ್ ದಿ ಸ್ಕೈ' ಸಾಂಗ್​ಗೆ ಹೆಜ್ಜೆ ಹಾಕಿ ವೇದಿಕೆಯಲ್ಲಿ ಮಿಂಚು ಹರಿಸಿದ್ದು ವಿಡಿಯೋ ವೈರಲ್​ ಆಗುತ್ತಿದೆ.

Nora fatehi said jai hind on FIFA fans fest event stage
ಕತಾರ್‌ನಲ್ಲಿ ರಾರಾಜಿಸಿದ ಭಾರತದ ತ್ರಿವರ್ಣ
author img

By

Published : Dec 2, 2022, 1:13 PM IST

Updated : Dec 2, 2022, 7:39 PM IST

ನವೆಂಬರ್ 20ರಂದು ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಆರಂಭವಾಗಿದ್ದು, ಡಿಸೆಂಬರ್ 18 ರವರೆಗೆ ನಡೆಯಲಿದೆ. ಜಾಗತಿಕ ಹಿರಿಮೆಯ ಕ್ರೀಡಾಕೂಟದಲ್ಲಿ ಬಾಲಿವುಡ್​ ನಟಿ ನೋರಾ ಫತೇಹಿ ಆಕರ್ಷಣೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದಾರೆ.

ನಟಿ, ನೃತ್ಯಗಾರ್ತಿ ನೋರಾ ಫತೇಹಿ ಫಿಫಾ ವರ್ಲ್ಡ್ ಫ್ಯಾನ್ ಫೆಸ್ಟಿವಲ್‌ನಲ್ಲಿ 'ಲೈಟ್ ದಿ ಸ್ಕೈ' ಸಾಂಗ್​ಗೆ ಹೆಜ್ಜೆ ಹಾಕಿದ್ದಾರೆ. ತನ್ನ ನೃತ್ಯದ ಮೂಲಕ ಎಲ್ಲರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಕತಾರ್​​ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಭಾರತೀಯರನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರ ನೃತ್ಯದ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ಪ್ರದರ್ಶನದ ವೇಳೆ ನೋರಾ ಫತೇಹಿ ಹೆಮ್ಮೆಯಿಂದ ದೇಶದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಸರತಿ ಸಾಲಿನಲ್ಲಿ ಬೀಸುತ್ತಾ ಜೈ ಹಿಂದ್ ಎಂದು ಘೋಷಣೆ ಕೂಗಿದ್ದು, ಪ್ರೇಕ್ಷಕರು ಸಹ ಜೈ ಹಿಂದ್ ಘೋಷಣೆಗಳನ್ನು ಮೊಳಗಿಸಿದರು.

ಇದನ್ನೂ ಓದಿ: ಮೆಕ್ಕಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಟ ಶಾರುಖ್ ಖಾನ್: ಫೋಟೋಗಳು ವೈರಲ್‌

ಇದೇ ವಿಚಾರವಾಗಿ ನಟಿಯನ್ನು ಹಲವರು ಟ್ರೋಲ್​ ಕೂಡ ಮಾಡಿದ್ದಾರೆ. ಧ್ವಜವನ್ನು ಹಿಡಿದ ರೀತಿ ಸರಿಯಾಗಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ.

Last Updated : Dec 2, 2022, 7:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.