ETV Bharat / entertainment

ಸಿಂಘಂ ಎಗೈನ್: ಪೊಲೀಸ್​ ಅಧಿಕಾರಿ ಶಕ್ತಿ ಶೆಟ್ಟಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ - ಫಸ್ಟ್ ಲುಕ್ ಔಟ್ - ಅಜಯ್ ದೇವ್​ಗನ್

Deepika Padukone: ಸಿಂಘಂ ಎಗೈನ್ ಸಿನಿಮಾದಿಂದ ನಟಿ ದೀಪಿಕಾ ಪಡುಕೋಣೆ ಫಸ್ಟ್ ಲುಕ್​ ಅನಾವರಣಗೊಂಡಿದೆ.

Deepika Padukone  Singham Again look
ಸಿಂಘಂ ಎಗೈನ್ ಸಿನಿಮಾದಿಂದ ದೀಪಿಕಾ ಪಡುಕೋಣೆ ಫಸ್ಟ್ ಲುಕ್
author img

By ETV Bharat Karnataka Team

Published : Oct 15, 2023, 12:16 PM IST

ಪಠಾಣ್​​, ಜವಾನ್ ಸಿನಿಮಾ ಯಶಸ್ಸಿನಲೆಯಲ್ಲಿರುವ ಬಾಲಿವುಡ್​​ ಪ್ರತಿಭಾನ್ವಿತ ನಟಿ ದೀಪಿಕಾ ಪಡುಕೋಣೆ ಕೈಯಲ್ಲಿ ಬಿಗ್​ ಬಜೆಜ್​​, ಬಹುನಿರೀಕ್ಷಿತ ಸಿನಿಮಾಗಳು ಇವೆ. ಕಲ್ಕಿ 2898 ಎಡಿ ಸಿನಿಮಾ ಸಲುವಾಗಿ ಸುದ್ದಿಯಾಗುತ್ತಿರುವ ನಟಿಯ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ಸಿಂಘಂ ಎಗೈನ್' (Singham Again). ಈ ಸಿನಿಮಾದಿಂದ ನಟಿಯ ಮೊದಲ ನೋಟ ಬಹಿರಂಗಗೊಂಡಿದೆ.

ದೀಪಿಕಾ ಪಡುಕೋಣೆ ಫಸ್ಟ್ ಲುಕ್: ಇಂದು ಬಾಲಿವುಡ್​ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿಕರ ಪೋಸ್ಟ್ ಶೇರ್ ಮಾಡಿದ್ದಾರೆ. ಬಾಲಿವುಡ್​​ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಆ್ಯಕ್ಷನ್​​ ಕಟ್​ ಹೇಳುತ್ತಿರುವ 'ಸಿಂಘಂ ಎಗೈನ್' ಸಿನಿಮಾದಿಂದ ತಮ್ಮ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಸೂಪರ್ ಸ್ಟಾರ್ ಅಜಯ್ ದೇವಗನ್ ಮುಖ್ಯಭೂಮಿಕೆಯ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರು 'ಶಕ್ತಿ ಶೆಟ್ಟಿ'ಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೌದು, ಪಠಾಣ್ ನಟಿ ಈ ಚಿತ್ರದಲ್ಲಿ ಪೊಲೀಸ್​ ಅಧಿಕಾರಿ 'ಶಕ್ತಿ ಶೆಟ್ಟಿ' ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪೊಲೀಸ್​ ಅಧಿಕಾರಿ 'ಶಕ್ತಿ ಶೆಟ್ಟಿ' ಪಾತ್ರದಲ್ಲಿ ದೀಪಿಕಾ: 'ಸಿಂಘಂ ಎಗೈನ್'ನ ಎರಡು ಫೋಟೋಗಳ ಸೆಟ್ ಅನ್ನು ನಟಿ ದೀಪಿಕಾ ಪಡುಕೋಣೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್​ನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ, ಕಿಡಿಗೇಡಿಗಳನ್ನು ಸದೆಬಡಿದಿರುವ ಚಿತ್ರಣವನ್ನು ಕಾಣಬಹುದು. ಹಿನ್ನೆಲೆಯಲ್ಲಿ ಪೊಲೀಸ್ ಗಾಡಿ, ಧಗಧಗಿಸುತ್ತಿರುವ ಅಗ್ನಿ ಜೊತೆಗೆ ಹತ್ತಾರು ದುಷ್ಟರು ಗಾಯಗೊಂಡು ಬಿದ್ದಿದ್ದಾರೆ. ಅವರ ಪೈಕಿ ಓರ್ವನ ಹಣೆಗೆ ಹಣ್​ ಗುರಿಯಾಗಿಸಿರುವುದನ್ನು ಕಾಣಬಹುದು. ಖಡಕ್​ ಪೊಲೀಸ್​ ಪಾತ್ರ ನಿರ್ವಹಿಸಿರುವಂತೆ ತೋರಿದ್ದು, ಸಿನಿಮಾ ಹೈ ಆ್ಯಕ್ಷನ್ ಸನ್ನಿವೇಶಗಳನ್ನು ಒಳಗೊಂಡಿರಲಿದೆ ಎಂಬುದು ​​ಫಸ್ಟ್ ಲುಕ್​​ನಲ್ಲೇ ಗೊತ್ತಾಗುತ್ತಿದೆ. ಎರಡನೇ ಫೋಟೋದಲ್ಲಿ ಗನ್​ ಹಿಡಿದು ಸ್ಮೈಲ್​ ಮಾಡುತ್ತಿರುವುದನ್ನು ಕಾಣಬಹುದು. ನಟಿಯ ಮೊಗದ ಮೇಲೆ ವಿಜಯಶಾಲಿ ಭಾವನೆ, ಜೊತೆಗೆ ವಿಚಿತ್ರ ಸ್ಮೈಲ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಸಿನಿಮಾ ಮೂಲಕ ದೀಪಿಕಾ ಪಡುಕೋಣೆ ದೊಡ್ಡ ಪ್ರಯಾಣಕ್ಕೆ ಸಜ್ಜಾಗಿರುವಂತೆ ತೋರುತ್ತಿದೆ.

ಇದನ್ನೂ ಓದಿ: ವಾರದ ಕಥೆ ಕಿಚ್ಚನ ಜೊತೆ: ''ದೇವರೇ ಕ್ಷಮೆ ಕೊಡಬೇಕಾದ್ರೆ ನಾವ್ಯಾರು, ನೀವ್ಯಾರು'' - ಹೇಗಿತ್ತು ಸುದೀಪ್​​ ಕ್ಲಾಸ್?

ಅಜಯ್ ದೇವ್​ಗನ್​​, ದೀಪಿಕಾ ಪಡುಕೋಣೆ ಅಲ್ಲದೇ ಚಿತ್ರದಲ್ಲಿ ರಣ್​​​ವೀರ್ ಸಿಂಗ್ ಮತ್ತು ಅಕ್ಷಯ್ ಕುಮಾರ್ ಕೂಡ ವಿಶೇಷ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ನಟರು ತಮ್ಮ ಸಿಂಬಾ ಮತ್ತು ಸೂರ್ಯವಂಶಿ ಪಾತ್ರಗಳನ್ನು ಪುನರಾವರ್ತಿಸಲಿದ್ದಾರೆ. ಇವರಲ್ಲದೇ, ಕರೀನಾ ಕಪೂರ್ ಖಾನ್ ಸಹ ಚಿತ್ರ ತಂಡದ ಭಾಗವಾಗಿದ್ದಾರೆ. ರೋಹಿತ್ ಶೆಟ್ಟಿ ಅವರ ಈ ಸಿನಿಮಾ 2024ರ ಸ್ವಾತಂತ್ರ್ಯ ದಿನದ ಸಂದರ್ಭ ತೆರೆಕಾಣಲು ನಿರ್ಧರಿಸಿದೆ. ಆ ಸಂದರ್ಭ ಟಾಲಿವುಡ್​ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ 2 ಕೂಡ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಕಣ್ಣೋಟದಲ್ಲೇ ಕೊಲ್ಲುವ ಚೆಲುವೆ: ತಮನ್ನಾ ಭಾಟಿಯಾ ಸೌಂದರ್ಯ ಕಣ್ತುಂಬಿಕೊಂಡ ನೆಟ್ಟಿಗರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.