ETV Bharat / entertainment

ಶಶಾಂಕ್ ನಿರ್ದೇಶನದ ಬಹುನಿರೀಕ್ಷೆಯ ಸಿನಿಮಾ ಲವ್ 360 ಬೆಳ್ಳಿ ತೆರೆಗೆ - ಜಗವೇ ನೀನು ಗೆಳತಿಯೆ

ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ. ಅದರಲ್ಲೂ ಸಿದ್ದ್ ಶ್ರೀರಾಮ್ ಹಾಡಿರುವ "ಜಗವೇ ನೀನು ಗೆಳತಿಯೇ" ಹಾಡಂತೂ ಭಾರಿ ಜನಪ್ರಿಯವಾಗಿದೆ.

Love 360 release
ಲವ್ 360 ಬೆಳ್ಳಿ ತೆರೆಗೆ
author img

By

Published : Aug 19, 2022, 9:20 AM IST

ಲವ್ 360 ಶೀರ್ಷಿಕೆಯಿಂದಲೇ ಸ್ಯಾಂಡಲ್​ವುಡ್​ನಲ್ಲಿ ಸೌಂಡ್ ಮಾಡುತ್ತಿರುವ ಸಿನಿಮಾ. ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ ಸಿನಿಮಾಗಳ ನಿರ್ದೇಶಕ ಶಶಾಂಕ್ ನಿರ್ದೇಶನದ ಚಿತ್ರ ಲವ್ 360 ಸಿನಿಮಾ‌ ನಾಳೆ 150ಕ್ಕೂ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಈ ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅನಾವರಣ ಮಾಡಿ, ಮೆಚ್ಚುಗೆಯ ಮಾತುಗಳನ್ನೂ ಹೇಳಿದ್ದರು.

ಇದೊಂದು ಕ್ಯೂಟ್ ಲವ್ ಸ್ಟೋರಿ ಸಿನಿಮಾವಾಗಿದ್ದು, ಹಾಡುಗಳು ಹಾಗೂ ಟ್ರೈಲರ್​ನಿಂದ ಸದ್ದು ಮಾಡುತ್ತಿರುವ ಲವ್ 360 ಸಿನಿಮಾ ಸಹಜವಾಗಿ ಸ್ಯಾಂಡಲ್​ವುಡ್​ನಲ್ಲಿ ಕುತೂಹಲ ಹುಟ್ಟಿಸಿದೆ. ಯುವ ನಟ ಪ್ರವೀಣ್ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ರಚನಾ ಇಂದರ್ ನಾಯಕಿಯಾಗಿ ಗಮನ ಸೆಳೆದಿದ್ದಾರೆ.

ಪ್ರವೀಣ್ ಹಾಗೂ ರಚನಾ ಅಲ್ಲದೇ ನಟರಾದ ಡ್ಯಾನಿ ಕುಟ್ಟಪ್ಪ ಹಾಗೂ ಮಹಂತೇಶ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ. ಅದರಲ್ಲೂ ಸಿದ್ದ್ ಶ್ರೀರಾಮ್ ಹಾಡಿರುವ "ಜಗವೇ ನೀನು ಗೆಳತಿಯೆ" ಹಾಡಂತೂ ಭಾರೀ‌ ಮಟ್ಟದಲ್ಲಿ ಜನಪ್ರಿಯವಾಗಿದೆ. ಅಭಿಷೇಕ್ ಕಲ್ಲತ್ತಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗಿರಿಮಹೇಶ್ ಅವರ ಸಂಕಲನವಿದೆ. ನಿರ್ದೇಶಕ ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾಗೆ ಪ್ರೇಕ್ಷಕರು ಎಷ್ಟು ಮಾರ್ಕ್ಸ್​ ಕೊಡುತ್ತಾರೆ ಎನ್ನುವುದು ನಾಳೆ ಗೊತ್ತಾಗಲಿದೆ.

ಇದನ್ನೂ ಓದಿ : ತಮಿಳು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ ಕನ್ನಡ ನಿರ್ದೇಶಕ ನಾಗಶೇಖರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.