ETV Bharat / entertainment

2024ಕ್ಕೆ ತೆರೆ ಮೇಲೆ ಅಬ್ಬರಿಸಲು ಸಿದ್ಧಗೊಳ್ಳುತ್ತಿದೆ ಬ್ಲಾಕ್​ಬಸ್ಟರ್​ ಸಿನಿಮಾಗಳ ಸೀಕ್ವೆಲ್ಸ್​ - ಈಟಿವಿ ಭಾರತ ಕನ್ನಡ

Sequel Movies: ಮುಂದಿನ ವರ್ಷ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಲು ಸಿದ್ಧಗೊಳ್ಳುತ್ತಿರುವ ಬ್ಲಾಕ್​ಬಸ್ಟರ್​ ಸಿನಿಮಾಗಳ ಸೀಕ್ವೆಲ್​ಗಳಿವು..

List of Blockbuster Sequel Movies to Release in 2024
2024ಕ್ಕೆ ತೆರೆ ಮೇಲೆ ಅಬ್ಬರಿಸಲು ಸಿದ್ಧಗೊಳ್ಳುತ್ತಿದೆ ಬ್ಲಾಕ್​ಬಸ್ಟರ್​ ಸಿನಿಮಾಗಳ ಸೀಕ್ವೆಲ್ಸ್​
author img

By ETV Bharat Karnataka Team

Published : Dec 18, 2023, 8:45 PM IST

ಇತ್ತೀಚೆಗಿನ ಕೆಲವು ವರ್ಷಗಳಿಂದ ಯಾವುದೇ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆದ್ರು ಅದರ ಮುಂದುವರಿದ ಭಾಗವನ್ನು ತೆರೆಗೆ ತರಲು ಚಿತ್ರತಂಡ ಪ್ಲಾನ್​ ಮಾಡುತ್ತಿದೆ. ಯಶಸ್ವಿ ಸಿನಿಮಾಗಳ ಸೀಕ್ವೆಲ್​ ಮಾಡುವುದರಿಂದ ಕಲೆಕ್ಷನ್​ ಕೂಡ ಹೆಚ್ಚಾಗಬಹುದು ಎಂಬುದು ಅವರ ಅಭಿಪ್ರಾಯ. ಅಲ್ಲದೇ ಮೊದಲ ಭಾಗವನ್ನು ಮೆಚ್ಚಿದ ಪ್ರೇಕ್ಷಕರು ಕೂಡ ಸೀಕ್ವೆಲ್​ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಅದರಂತೆ ಮುಂದಿನ ವರ್ಷ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಲು ಹಲವು ಸೀಕ್ವೆಲ್​ಗಳು ತಯಾರಾಗುತ್ತಿವೆ.

'ಪುಷ್ಪ 2: ದಿ ರೂಲ್​': ಟಾಲಿವುಡ್​ ಸ್ಟೈಲಿಶ್​ ಐಕಾನ್​ ಅಲ್ಲು ಅರ್ಜುನ್​ ಅವರ 'ಪುಷ್ಪ 2: ದಿ ರೂಲ್​' ಸೀಕ್ವೆಲ್​ ಸರಣಿಯಲ್ಲಿ ಮೊದಲನೆಯದು. ಸುಕುಮಾರನ್​ ನಿರ್ದೇಶನದ ಈ ಸಿನಿಮಾ 2024ರ ಆಗಸ್ಟ್​ 15ರಂದು ತೆರೆ ಕಾಣಲಿದೆ. 'ಪುಷ್ಪ:ದಿ ರೈಸ್​' ಚಿತ್ರ ಸೂಪರ್​ ಹಿಟ್​ ಆಗಿರುವುದರಿಂದ ಸೀಕ್ವೆಲ್​ ಮೇಲೆ ಭಾರಿ ನಿರೀಕ್ಷೆ ಇದೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿ ನವೀನ್ ಎರ್ನೇನಿ ಮತ್ತು ವೈ ರವಿಶಂಕರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಅಲ್ಲು ಅರ್ಜುನ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಚಿತ್ರದಲ್ಲಿ ಸುನೀಲ್, ಫಹಾದ್ ಫಾಜಿಲ್, ಅನಸೂಯ ಮುಂತಾದವರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

'ಇಂಡಿಯನ್​ 2': ಇಂಡಿಯನ್ 2 ಸಿನಿಮಾ 1996ರಲ್ಲಿ ಬಂದ ಇಂಡಿಯನ್​​ ಚಿತ್ರದ ಸೀಕ್ವೆಲ್​​​. ಚಿತ್ರದಲ್ಲಿ, ಸೌತ್​ ಸೂಪರ್​ಸ್ಟಾರ್​ ಕಮಲ್ ಹಾಸನ್ ಅವರು ಸೇನಾಪತಿ ಪಾತ್ರ ಪುನರಾವರ್ತಿಸಿದ್ದಾರೆ. ಇಂಡಿಯನ್​ 2 ಬಿಗ್ ಸ್ಟಾರ್ ಕಾಸ್ಟ್ ಹೊಂದಿರುವ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ಸ್ ಜೊತೆ ರೆಡ್ ಗೈಂಟ್ ಮೂವೀಸ್​​ ಸೇರಿ ನಿರ್ಮಾಣ ಮಾಡುತ್ತಿದೆ. ಸೀಕ್ವೆಲ್​​ ಭಾಗವೇ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಮೊದಲ ಭಾಗ ಮುಂದಿನ ವರ್ಷ ಏಪ್ರಿಲ್ 12 ರಂದು ತೆರೆಕಾಣಲಿದೆ ಎಂದು ಹೇಳಲಾಗಿದೆ.

ಎಸ್ ಶಂಕರ್​ ನಿರ್ದೇಶನದ ಬಹುನಿರೀಕ್ಷಿತ ಇಂಡಿಯನ್ 2 ಸಿನಿಮಾವನ್ನು ಸುಭಾಸ್ಕರನ್ ಅಲ್ಲಿರಾಜ ಮತ್ತು ಉದಯನಿಧಿ ಸ್ಟಾಲಿನ್ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ನೆಡುಮುಡಿ ವೇಣು, ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ಗುಲ್ಶನ್ ಗ್ರೋವರ್, ವಿವೇಕ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಸಮುದ್ರಕನಿ, ಬಾಬಿ ಸಿಂಹ, ಗುರು ಸೋಮಸುಂದರಂ, ಜಯಪ್ರಕಾಶ್, ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ದೆಹಲಿ ಗಣೇಶ್ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ರವಿವರ್ಮನ್ ಮತ್ತು ರತ್ನವೇಲು ಛಾಯಾಗ್ರಹಣ, ಅನಿರುದ್ಧ್ ರವಿಚಂದರ್ ಸಂಗೀತ, ಎ. ಶ್ರೀಕರ್ ಪ್ರಸಾದ್ ಸಂಕಲನ ಈ ಚಿತ್ರಕ್ಕಿದೆ.

'ಕಾಂತಾರ' ಪ್ರೀಕ್ವೆಲ್​: ರಿಷಬ್ ಶೆಟ್ಟಿ ಸ್ವ ನಿರ್ದೇಶನದ ಸಿನಿಮಾ 'ಕಾಂತಾರ ಚಾಪ್ಟರ್​-1'. ಕಳೆದ ವರ್ಷದ ಬ್ಲಾಕ್ ಬಸ್ಟರ್ ಹಿಟ್ 'ಕಾಂತಾರ' ಚಿತ್ರದ ಪ್ರೀಕ್ವೆಲ್​ ಚಿತ್ರ ಇದಾಗಿದೆ. ‘ಕಾಂತಾರ’ ಸಿನಿಮಾದ ಮೊದಲ ಭಾಗದಲ್ಲಿ ನೋಡಿದ ಕಥೆಯ ಮೊದಲು ಏನಾಯ್ತು? ಎಂಬುದನ್ನು ಈ 'ಕಾಂತಾರ ಚಾಪ್ಟರ್​ 1'ರಲ್ಲಿ ತೋರಿಸಲಾಗುವುದು. ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ನಿರ್ಮಾಪಕ ವಿಜಯ್​ ಕಿರಗಂದೂರ್ ಕಾಂತಾರ ಪ್ರೀಕ್ವೆಲ್​ ಅನ್ನು ಬರೋಬ್ಬರಿ 100 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣ ಮಾಡಲಿದ್ದಾರೆ. ಶೂಟಿಂಗ್​ ಎಲ್ಲಾ ಮುಗಿಸಿ ಮುಂದಿನ ವರ್ಷ ಸಿನಿಮಾ ತೆರೆ ಕಾಣಲಿರುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬಹುನಿರೀಕ್ಷಿತ 'ಕಾಂತಾರ' ಪ್ರೀಕ್ವೆಲ್ ಬಿಡುಗಡೆಗೆ ಮುಹೂರ್ತ ನಿಗದಿ​: ಶೂಟಿಂಗ್​ ಸ್ಥಳದಲ್ಲೂ ಬದಲಾವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.