ETV Bharat / entertainment

'KH234' ಸಿಕ್ತು ಅಧಿಕೃತ ಚಾಲನೆ: 36 ವರ್ಷಗಳ ಬಳಿಕ ಒಂದಾದ್ರು ಕಮಲ್​ ಹಾಸನ್​-ಮಣಿರತ್ನಂ - ಈಟಿವಿ ಭಾರತ ಕನ್ನಡ

ಕಮಲ್​ ಹಾಸನ್​ ನಟನೆಯ 234ನೇ ಸಿನಿಮಾಗೆ ಖ್ಯಾತ ನಿರ್ದೇಶಕ ಮಣಿರತ್ನಂ ಆ್ಯಕ್ಷನ್​ ಕಟ್​ ಹೇಳಲಿದ್ದು, ಚಿತ್ರಕ್ಕೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ.

KH234: Kamal Haasan and Mani Ratnam's highly anticipated reunion finally takes off - watch the exciting launch video
'KH234' ಸಿಕ್ತು ಅಧಿಕೃತ ಚಾಲನೆ: 36 ವರ್ಷಗಳ ಬಳಿಕ ಒಂದಾದ್ರು ಕಮಲ್​ ಹಾಸನ್​- ಮಣಿರತ್ನಂ
author img

By ETV Bharat Karnataka Team

Published : Oct 27, 2023, 7:41 PM IST

ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ನಟ ಕಮಲ್​ ಹಾಸನ್​. ಲೋಕೇಶ್​ ಕನಕರಾಜ್​ ಜೊತೆಗಿನ 'ವಿಕ್ರಮ್​' ಸಿನಿಮಾ ಹಿಟ್​ ಆದ ನಂತರ ಇವರ ಜನಪ್ರಿಯತೆ ದುಪ್ಪಟ್ಟಾಗಿದೆ. ಈಗಾಗಲೇ ಸಾಕಷ್ಟು ಪ್ರಾಜೆಕ್ಟ್​ಗಳನ್ನು ಕೈಗೆತ್ತಿಕೊಂಡಿರುವ ಸ್ಟಾರ್​, ಖ್ಯಾತ ನಿರ್ದೇಶಕ ಮಣಿರತ್ನಂ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಸದ್ಯಕ್ಕೆ 'KH234' ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರಕ್ಕೆ ಅಧಿಕೃತವಾಗಿ ಇಂದು ಚಾಲನೆ ಸಿಕ್ಕಿದೆ. ಈ ಸಿನಿಮಾಗಾಗಿ 36 ವರ್ಷಗಳ ಬಳಿಕ ಕಮಲ್​ ಹಾಸನ್​ ಮತ್ತು ಮಣಿರತ್ನಂ ಒಂದಾಗುತ್ತಿದ್ದಾರೆ.

ಕಮಲ್​ ಹಾಸನ್​ ಏಕಕಾಲಕ್ಕೆ ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ 'ಇಂಡಿಯನ್​ 2' ಚಿತ್ರದ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ. ನಾಗ್​ ಅಶ್ವಿನ್​ ನಿರ್ದೇಶನದ, ಬಹು ತಾರಾಗಣವಿರುವ 'ಕಲ್ಕಿ 2898 ಎಡಿ' ಸಿನಿಮಾದಲ್ಲೂ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದಲ್ಲದೇ ಎಚ್​.ವಿನೋದ್​ ನಿರ್ದೇಶನ ಮಾಡುತ್ತಿರುವ 'KH233' ಚಿತ್ರಕ್ಕೂ ಇವರೇ ನಾಯಕ. ಕಮಲ್​ ಹಾಸನ್​ ಅವರ 234ನೇ ಚಿತ್ರಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಇತ್ತೀಚೆಗಿನ ಮಾಹಿತಿ ಪ್ರಕಾರ, ಮಣಿರತ್ನಂ ಅವರು ಕಮಲ್​ ಹಾಸನ್​, ವಿನೋದ್​ ಅವರೊಂದಿಗಿನ ಸಿನಿಮಾದ ಕೆಲಸ ಮುಗಿಸಿದ ಬಳಿಕ ಶೂಟಿಂಗ್​ ಪ್ರಾರಂಭಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ 'KH234' ಚಿತ್ರಕ್ಕೆ ಚೆನ್ನೈನಲ್ಲಿ ಇಂದು (ಅ.27) ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಹೀಗಾಗಿ ಎರಡು ಚಿತ್ರಗಳಲ್ಲೂ ಏಕಕಾಲಕ್ಕೆ ಕಮಲ್​ ಹಾಸನ್​ ಕೆಲಸ ಮಾಡಲಿದ್ದಾರೆ ಎಂದು ಕಾಣಿಸುತ್ತಿದೆ. 'KH234'ಗೆ ಚಾಲನೆ ಸಿಗುವ ವೇಳೆ ಮ್ಯೂಸಿಕ್​ ಕಂಪೋಸರ್​ ಎ.ಆರ್​ ರೆಹಮಾನ್​, ಸಂಕಲನಕಾರ ಶ್ರೀಕರ್​ ಪ್ರಸಾದ್​ ಹಾಗೂ ಛಾಯಾಗ್ರಾಹಕ ರವಿ ಚಂದ್ರನ್ ಉಪಸ್ಥಿತರಿದ್ದರು.​

ಇದನ್ನೂ ಓದಿ: ಕಮಲ್​ ಕೊಂಡಾಡಿದ ಅಮಿತಾಭ್​: ನಟ ಹಾಸನ್​ ನೆಗೆಟಿವ್​ ರೋಲ್​ ಒಪ್ಪಿಕೊಳ್ಳಲು ಕಾರಣವೇನು ಗೊತ್ತಾ?

ಅಲ್ಲದೇ, 'ವಿಕ್ರಮ್​', 'ಲಿಯೋ', 'ಕೈದಿ' ಸಿನಿಮಾಗಳ ಸ್ಟಂಟ್​ ಕೊರಿಯೋಗ್ರಾಫರ್​ ಅಂಬುಮಣಿ ಹಾಗೂ ಅರಿವುಮಣಿ ಕೂಡ ಸಮಾರಂಭದಲ್ಲಿ ಭಾಗಿ ಆಗಿದ್ದು ಕುತೂಹಲ ಮೂಡಿಸಿದೆ. ಬಹುಶಃ ಈ ಸಿನಿಮಾದಲ್ಲೂ ಸಖತ್​ ಆಕ್ಷನ್​ ಥ್ರಿಲ್ಲರ್​ ದೃಶ್ಯಗಳನ್ನು ನಿರೀಕ್ಷಿಸಬಹುದಾಗಿದೆ. 1987ರಲ್ಲಿ 'ನಾಯಕನ್​' ಚಿತ್ರ ರಿಲೀಸ್​ ಆಯಿತು. ಕಮಲ್​ ಹಾಸನ್​ಗೆ ಮಣಿರತ್ನಂ ಆ್ಯಕ್ಷನ್​ ಕಟ್​ ಹೇಳಿದ್ದರು. ಅದಾದ ನಂತರ ಈ ಜೋಡಿ ಮತ್ತೆ ಜೊತೆಯಾಗಿ ಕೆಲಸ ಮಾಡಿರಲಿಲ್ಲ. ಇದೀಗ 36 ವರ್ಷಗಳ ಬಳಿಕ ಒಂದಾಗಿದ್ದು, 'KH234' ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ.

ಇತ್ತೀಚೆಗೆ ಬಿಡುಗಡೆಯಾದ ಲೋಕೇಶ್​ ಕನಕರಾಜ್​ ನಿರ್ದೇಶನದ, ದಳಪತಿ ವಿಜಯ್​ ನಟನೆಯ 'ಲಿಯೋ' ಚಿತ್ರದಲ್ಲಿ ಕಮಲ್​ ಹಾಸನ್​ ಎಂಟ್ರಿ ಇರಲಿದೆ ಎನ್ನಲಾಗಿತ್ತು. ಆದರೆ ಸಿನಿಮಾದಲ್ಲಿ ಅವರ ಧ್ವನಿ ಮಾತ್ರ ಕೇಳಿಸಿದೆ. ಇದು ಅವರ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿತ್ತು. ಸಿನಿಮಾಗಳ ಹೊರತಾಗಿ ಕಮಲ್​ ಹಾಸನ್​, ತಮಿಳು ಬಿಗ್​ ಬಾಸ್​ ಸೀಸನ್​ 7ರ ನಿರೂಪಕರಾಗಿ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ.

ಇದನ್ನೂ ಓದಿ: ಗೆಳೆಯ ರಜನಿ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿರುವ ಅಭಿಮಾನಿ; ಕಮಲ್​ ಹಾಸನ್​ ರಿಯಾಕ್ಷನ್​ ಹೀಗಿತ್ತು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.