ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಹಾಗೂ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಸಿನಿಮಾ 'ಕರಟಕ ದಮನಕ'. ಕ್ಯಾಚಿ ಟೈಟಲ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಈ ಚಿತ್ರವನ್ನು ವಿಕಟಕವಿ ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ.
'ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು 'ಕರಟಕ' ಇನ್ನೊಂದರ ಹೆಸರು 'ದಮನಕ'. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಆ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ!!ಎಚ್ಚರಿಕೆ' ಎಂಬ ಬರಹದ ಮೂಲಕ ಪೋಸ್ಟರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ನಿರ್ದೇಶಕ ಯೋಗರಾಜ್ ಭಟ್ರು.
-
"ಕರಟಕ ದಮನಕ" First look poster
— ʏᴏɢᴀʀᴀᴊ ʙʜᴀᴛ (@yogarajofficial) July 14, 2023 " class="align-text-top noRightClick twitterSection" data="
ಕುತಂತ್ರಿ ನರಿಗಳ ಮಾನವ ರೂಪ 🦊🦊#KaratakaDamanaka #FirstLookPoster #Shivanna #Prabhudeva #RocklineProduction pic.twitter.com/rbie6DeKdu
">"ಕರಟಕ ದಮನಕ" First look poster
— ʏᴏɢᴀʀᴀᴊ ʙʜᴀᴛ (@yogarajofficial) July 14, 2023
ಕುತಂತ್ರಿ ನರಿಗಳ ಮಾನವ ರೂಪ 🦊🦊#KaratakaDamanaka #FirstLookPoster #Shivanna #Prabhudeva #RocklineProduction pic.twitter.com/rbie6DeKdu"ಕರಟಕ ದಮನಕ" First look poster
— ʏᴏɢᴀʀᴀᴊ ʙʜᴀᴛ (@yogarajofficial) July 14, 2023
ಕುತಂತ್ರಿ ನರಿಗಳ ಮಾನವ ರೂಪ 🦊🦊#KaratakaDamanaka #FirstLookPoster #Shivanna #Prabhudeva #RocklineProduction pic.twitter.com/rbie6DeKdu
ಚಿತ್ರತಂಡ ಹೀಗಿದೆ.. ಶಿವ ರಾಜ್ಕುಮಾರ್, ಪ್ರಭುದೇವ ಅಲ್ಲದೇ ರವಿಶಂಕರ್, ತನಿಕೆಲ್ಲ ಭರಣಿ, ರಂಗಾಯಣ ರಘು, ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಗೌರಿಬಿದನೂರು ಮತ್ತು ಉತ್ತರ ಕರ್ನಾಟಕದಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.
ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಕೆ.ಎಂ ಪ್ರಕಾಶ್ ಸಂಕಲನವಿದೆ. ಯೋಗರಾಜ್ ಭಟ್ ಹಾಗೂ ರವಿ ಕಥೆ ರಚಿಸಿದ್ದು, ಚಿತ್ರಕಥೆಯನ್ನು ಯೋಗರಾಜ್ ಭಟ್, ರವಿ ಮತ್ತು ಸುಬ್ರಹ್ಮಣ್ಯ ಬರೆದಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ನಿರ್ದೇಶನವಿದ್ದು, ರಾಕ್ಲೈನ್ ಎಂಟರ್ಟೈನ್ಮೆಂಟ್ ಲಾಂಛನದ ಅಡಿ ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಒಂದು ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡ 'ಉಸಿರೇ ಉಸಿರೇ' ಟೀಸರ್... ಅದೃಷ್ಟ ಪರೀಕ್ಷೆಗಿಳಿದ ರಾಜೀವ್
ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿರುವ 'ಕರಟಕ ದಮನಕ' ಚಿತ್ರದ ಟ್ರೇಲರ್ ಕೂಡ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸಿನಿ ದಿಗ್ಗಜರ ಕಾಂಬಿನೇಶನ್‌ನಲ್ಲಿ ಅದ್ಧೂರಿಯಾಗಿ ಮೂಡಿ ಬರುತ್ತಿರುವ ಈ ಅಪರೂಪದ ಚಿತ್ರವನ್ನು ಕಣ್ತುಂಬಿಕೊಳ್ಳಲು ಕನ್ನಡ ಕಲಾರಸಿಕರು ಕಾತರದಿಂದ ಕಾಯುತ್ತಿದ್ದಾರೆ.
ಬ್ಯುಸಿ ಶೆಡ್ಯೂಲ್ನಲ್ಲಿ ಶಿವಣ್ಣ: ಕರುನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಈಗಾಗಲೇ ಅನೇಕ ಸಿನಿಮಾಗಳನ್ನು ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. 2022ರಲ್ಲಿ ಕೊನೆಯದಾಗಿ ಪ್ಯಾನ್ ಇಂಡಿಯಾ ಸಿನಿಮಾ 'ವೇದ'ದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 'ಘೋಸ್ಟ್' ಸಿನಿಮಾವಾಗಿ ಬ್ಯುಸಿಯಾದರು. ಸದ್ಯ ಈ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, 'ಪೋಸ್ಟ್' ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇದರ ಬೆನ್ನಲ್ಲೇ 'ಮಫ್ತಿ' ಸಿನಿಮಾದ ಸೀಕ್ವೆಲ್ ಆದ 'ಬೈರತಿ ರಣಗಲ್'ನಲ್ಲೂ ಶಿವರಾಜ್ಕುಮಾರ್ ಬಣ್ಣ ಹಚ್ಚುತ್ತಿದ್ದಾರೆ.
'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನು ನಿರ್ದೇಶಿಸಿದ್ದ ಸಚಿನ್ ಬಿ.ರವಿ ಜೊತೆ 'ಸಾಗಾ ಆಫ್ ಅಶ್ವತ್ಥಾಮ' ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಈಗಾಗಲೇ ಬಿಡುಗಡೆಗೆ ತಯಾರಾಗಿರುವ 'ಘೋಸ್ಟ್' ಚಿತ್ರದ ಸೀಕ್ವೆಲ್ ಕೂಡ ತಯಾರಾಗುತ್ತಿದೆ. ಅಲ್ಲದೇ 'ಧೀರ' ಶೀರ್ಷಿಕೆಯ ಸಿನಿಮಾ ಕೂಡ ನಿರ್ಮಾಣವಾಗಲಿದೆ. ಹ್ಯಾಟ್ರಿಕ್ ಹೀರೋ ಅವರಿಗೆಂದೇ ಮಾಡಿಕೊಂಡಿದ್ದ 'ಧೀರ' ಕಥೆ ಸಿನಿಮಾ ರೂಪದಲ್ಲಿ ಮೂಡಿ ಬರಲಿದೆ. ನವೀನ್ ಶೆಟ್ಟಿ ನಿರ್ದೇಶನದ ಈ ಸಿನಿಮಾ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ.
ಇದನ್ನೂ ಓದಿ: ರಿಷಬ್ ಶೆಟ್ಟಿ ನಿರ್ಮಾಣದ 'ಶಿವಮ್ಮ'ನಿಗೆ ಪ್ರಶಸ್ತಿಗಳ ಮಳೆ - ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಮನ್ನಣೆ