ETV Bharat / entertainment

ರಿಷಬ್ ಶೆಟ್ಟಿಯಿಂದ ನೇಮ ಸೇವೆ.. ಕಾಂತಾರ 2ಗೆ ಅಣ್ಣಪ್ಪನ ಅಪ್ಪಣೆ ಆದೇಶ - ETV Bharath Kannada

ಕಾಂತಾರಕ್ಕೆ ಸಿಕ್ಕ ಯಶಸ್ಸಿನಿಂದ ಮತ್ತೊಂದು ಅದೇ ಆಧಾರದಲ್ಲಿ ಕಥೆ ಹೆಣೆಯಲು ರಿಷಬ್​ ತಯಾರಾಗಿದ್ದಾರೆ. ಎರಡನೇ ಸೀಕ್ವೆಲ್​ ತೆಗೆಯುವ ಬಗ್ಗೆ ದೈವದ ಒಪ್ಪಿಗೆ ಪಡೆದುಕೊಂಡಿರುವ ರಿಷಬ್​ ಮತ್ತೆ ಪ್ಯಾನ್​ ಇಂಡಿಯಾ ಬ್ಯಾಗ್​ ಸಿನಿಮಾ ಮಾಡಲಿದ್ದಾರೆ. ಹಾಗೇ ಇದಕ್ಕೆ ಯಾರು ಬಂಡವಾಳ ಹೂಡಲಿದ್ದಾರೆ ಎಂದು ತಿಳಿಯಬೇಕಿದೆ. ದೈವ ನರ್ತಕರು ಮಾತ್ರ ಈ ಬಗ್ಗೆ ಅಪ್ಪಣೆ ಕೇಳಲಾಗಿದೆ ಎಂದು ಹೇಳಿದ್ದಾರೆ.

Etv Bharatkantara-movie-team-asks-permission-for-kantara-2
ರಿಷಬ್ ಶೆಟ್ಟಿಯಿಂದ ನೇಮ ಸೇವೆ: ಕಾಂತಾರ 2ಕ್ಕೆ ಅಣ್ಣಪ್ಪನ ಅಪ್ಪಣೆಗೆ ಆದೇಶ
author img

By

Published : Dec 13, 2022, 10:39 AM IST

ನೇಮ ಸೇವೆ ಮಾಡಿಸುವಾಗ ಕಾಂತಾರ 2ಕ್ಕೆ ಒಪ್ಪಿಗೆ ಪಡೆದುಕೊಂಡಿದ್ದಾರೆ.

ಮಂಗಳೂರು(ದಕ್ಷಿಣ ಕನ್ನಡ): ಕಾಂತಾರ ಸಿನಿಮಾದ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಪಂಜುರ್ಲಿ ದೈವಕ್ಕೆ ಡಿಸೆಂಬರ್ 8 ರಂದು ನಗರದ ಬಂದಲೆಯಲ್ಲಿ ನೇಮ ಸೇವೆಯನ್ನು ನೀಡಿದ್ದಾರೆ. ಇಲ್ಲಿ ದೈವನರ್ತಕರಾಗಿದ್ದ ಉಮೇಶ್ ಗಂಧಕಾಡು ಅವರು ಮಾತನಾಡಿ ನೇಮೋತ್ಸವದಲ್ಲಿ ಇತ್ತೀಚೆಗೆ ರಿಷಬ್​ ಶೆಟ್ಟಿ ಕಾಂತಾರ ಸಿನಿಮಾ ತಂಡೊಂದಿಗೆ ಕಾಂತಾರ 2 ಸಿನಿಮಾಕ್ಕೆ ಅನುಮತಿ ಕೋರಿದ್ದರು. ದೈವ ಅನುಮತಿಯೂ ನೀಡಿದೆ ಎಂದು ತಿಳಿಸಿದ್ದಾರೆ.

ರಿಷಬ್​ ಶೆಟ್ಟಿಯವರು ಕೆಲವು ದಿನಗಳ ಹಿಂದೆ ಅಣ್ಣಪ್ಪ‌ ಪಂಜುರ್ಲಿ ಸೇವೆ ಮಾಡಬೇಕೆಂದು ಕೇಳಿಕೊಂಡಿದ್ದರು. ಅದಕ್ಕಾಗಿ ನಗರದ ಬಂದಲೆಯ ಮಡಿವಾಳಬೆಟ್ಟು ದೈವಸ್ಥಾನದಲ್ಲಿ ಅಣ್ಣಪ್ಪ ಪಂಜುರ್ಲಿ ದೈವದ ನರ್ತನ ಸೇವೆ ಮಾಡಿದ್ದೆ. ದೈವದ ನೇಮದ ವೇಳೆ ಹೇಳುವ ನುಡಿ ನರ್ತಕ ಹೇಳುವುದಲ್ಲ, ಬದಲಾಗಿ ದೈವವೇ ಹೇಳುವುದರಿಂದ ಅದು ದೈವ ನರ್ತಕರಾದ ನಮಗೆ ಗೊತ್ತಾಗುವುದಿಲ್ಲ ಎಂದರು.

ಅಣ್ಣಪ್ಪ ಪಂಜುರ್ಲಿಯ ನೇಮದ ವೇಳೆ ಪುಷ್ಪ ಪ್ರಶ್ನೆಯಲ್ಲಿ ಕಾಂತಾರ 2 ಸಿನಿಮಾ ಮಾಡಲು ದೈವದ ಬಳಿ ಅರಿಕೆ ಮಾಡಿದ್ದ ವೇಳೆ ಶುಭ ಶಕುನ ಬಂದಿದೆ. ಕಾಂತಾರ 2 ಸಿನಿಮಾವನ್ನು ಬಹಳ ಶುದ್ಧಚಾರದಿಂದ ಮಾಡಬೇಕು. ಧರ್ಮಸ್ಥಳಕ್ಕೆ ತೆರಳಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಅಣ್ಣಪ್ಪ ಪಂಜುರ್ಲಿ ದೈವದ ಬಳಿ ಪ್ರಾರ್ಥನೆ ಮಾಡಬೇಕು ಎಂದು ದೈವ ನುಡಿದಿದೆ‌ ಎಂದು ಅವರು ಹೇಳಿದರು.

ಇದನ್ನೂ ಓದಿ: ಕಾಂತಾರ ಕುರಿತು ಟ್ವೀಟ್​ ಮಾಡಿದ ಹೃತಿಕ್​ ರೋಷನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.