ETV Bharat / entertainment

ಕನ್ನಡ ಚಿತ್ರರಂಗದ ನಿರ್ಮಾಪಕ ಕೆ.ಸಿ.ಎನ್ ಮೋಹನ್ ಇನ್ನಿಲ್ಲ - KCN Mohan movies

ಕನ್ನಡ ಚಿತ್ರರಂಗದ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ಕೆ.ಸಿ.ಎನ್ ಮೋಹನ್ (61) ಇಂದು ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.

KCN Mohan death
ಕೆಸಿಎನ್ ಮೋಹನ್ ನಿಧನ
author img

By

Published : Jul 2, 2023, 2:25 PM IST

ಬೆಂಗಳೂರು: ಕನ್ನಡದ ಜನಪ್ರಿಯ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ಕೆ.ಸಿ.ಎನ್ ಮೋಹನ್ (61) ಇಂದು ಮಧ್ಯಾಹ್ನ ಕೊನೆಯುಸಿರೆಳೆದರು. ಇವರು ಕೆ.ಸಿ.ಎನ್. ಚಂದ್ರಶೇಖರ್ ಅವರ ಸಹೋದರ. ಮೋಹನ್ ಅವರಿಗೆ ಇತ್ತೀಚೆಗಷ್ಟೇ ಲಿವರ್ ಕಸಿ ಮಾಡಲಾಗಿತ್ತು. ಇವರ ಸಹೋದರ ಚಂದ್ರಶೇಖರ್ ಅಗಲಿದ ವರ್ಷದಲ್ಲೇ ಮೋಹನ್ ಅವರೂ ಸಹ ಅಗಲಿದ್ದು, ಕುಟುಂಬಕ್ಕೆ ಆಘಾತ ತರಿಸಿದೆ. ಕೆ.ಸಿ.ಎನ್. ಮೋಹನ್ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ

ಕೆ.ಸಿ.ಎನ್ ಗೌಡರ ಪುತ್ರರಾಗಿದ್ದ ಮೋಹನ್ 2017ರಲ್ಲಿ ಪತ್ನಿ ಪೂರ್ಣಿಮಾ ಅವರನ್ನು ಕಳೆದುಕೊಂಡಿದ್ದರು. 2006ರಲ್ಲಿ ಮೋಹನ್ 'ಜೂಲಿ' ಚಿತ್ರವನ್ನು ನಿರ್ಮಿಸಿದ್ದರು. ಇದನ್ನು ಪೂರ್ಣಿಮಾ ಮೋಹನ್ (ಅವರ ಪತ್ನಿ) ನಿರ್ದೇಶಿಸಿದ್ದರು. ಇದು 1967 ರ ಹಿಂದಿ ಸಿನಿಮಾ 'ಜೂಲಿ'ಯ ರಿಮೇಕ್ ಆಗಿತ್ತು. ಇಬ್ಬರು ಸಹೋದರರಾದ ಕೆ.ಸಿ.ಎನ್. ಚಂದ್ರಶೇಖರ್ ಮತ್ತು ಕೆ.ಸಿ.ಎನ್. ಮೋಹನ್ ಅವರು ವಿಷ್ಣುವರ್ಧನ್, ಮಹಾಲಕ್ಷ್ಮಿ, ವಜ್ರಮುನಿ ಮತ್ತು ಎನ್ಎಸ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ 'ಜಯಸಿಂಹ' ಚಿತ್ರವನ್ನು ನಿರ್ಮಿಸಿದ್ದರು.

1990ರಲ್ಲಿ ಡಿ. ರಾಜೇಂದ್ರ ಬಾಬು ನಿರ್ದೇಶನದ 'ರಾಮರಾಜ್ಯದಲ್ಲಿ ರಾಕ್ಷಸರು' ಚಿತ್ರವನ್ನು ನಿರ್ಮಿಸಿದರು. ಈ ಚಿತ್ರವು ಎಂ. ರಂಗ ರಾವ್ ಅವರ ಸಂಗೀತ ಸಂಯೋಜನೆಯನ್ನು ಹೊಂದಿತ್ತು. ಇದು ಬಹುತಾರಾಗಣವನ್ನು ಹೊಂದಿತ್ತು. ಶಂಕರ್ ನಾಗ್, ಅನಂತ್ ನಾಗ್, ಸೋನಿಕಾ ಗಿಲ್ ಮತ್ತು ಗಾಯತ್ರಿ ಪ್ರಮುಖ ಪಾತ್ರಗಳಲ್ಲಿದ್ದ ಚಿತ್ರವದು. ಈ ಸಿನಿಮಾ ಅಚ್ಚುಕಟ್ಟಾದ ಫ್ಯಾಮಿಲಿ ಎಂಟರ್​ಟೈನ್​​ಮೆಂಟ್​​ ಸಿನಿಮಾ ಆಗಿದ್ದು, ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು. ಅದೇ ವರ್ಷದಲ್ಲಿ ಸಹೋದರರು ನಿರ್ಮಿಸಿದ 'ಭಲೇ ಚತುರ' ಚಿತ್ರದಲ್ಲಿ ಓಂ ಸಾಯಿಪ್ರಕಾಶ್, ಶಂಕರ್​​ ನಾಗ್, ಚಂದ್ರಿಕಾ, ಬಿ ಸರೋಜಾದೇವಿ, ಸಿಹಿಕಹಿ ಗೀತಾ, ಪಂಡರಿಬಾಯಿ, ಸಾರಿಕಾ, ಶ್ರೀನಿವಾಸಮೂರ್ತಿ, ಮೈಸೂರು ಲೋಕೇಶ್ ಕಾಣಿಸಿಕೊಂಡಿದ್ದರು.

ಪತ್ನಿ ಪೂರ್ಣಿಮಾ ಮೋಹನ್ ಅವರು 2017ರಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಈ ಸಹೋದರರು ಕೆಸಿಎನ್ ಗೌಡರ ಕೆಸಿಎನ್ ಸಾಮ್ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. ಕೆಸಿಎನ್ ಮೋಹನ್ ಅವರು ಪ್ರದರ್ಶನ ವಿಭಾಗವನ್ನು ನಿರ್ವಹಿಸಿದ್ದಾರೆ. 'ವಿಜಯ ದಶಮಿ', 'ಅರ್ಜುನ್ ಅಭಿಮನ್ಯು' (1998), 'ನೋಡು ಬಾ ನಮ್ಮೂರ' (1997), 'ಭೈರವ' (1994) ಮುಂತಾದ ಚಲನಚಿತ್ರಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಪೊಲೀಸ್ ಪವರ್ (1995), 'ಅಳಿಮಯ್ಯ' (1994) ಮತ್ತು 'ಪೊಲೀಸ್ ಲಾಕಪ್' (1992) ಇತ್ಯಾದಿ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Sudeep 46: 'ನಾನು ಮನುಷ್ಯ ಅಲ್ಲ ರಾಕ್ಷಸ' - ಕಿಚ್ಚ ಸುದೀಪ್‌ ಹೊಸ ಸಿನಿಮಾದ ಟೀಸರ್ ರಿಲೀಸ್‌, ರಗಡ್ ಲುಕ್‌ನಲ್ಲಿ ಅಬ್ಬರ!

ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದ ಅವರ ಆರೋಗ್ಯದಲ್ಲಿ ಇಂದು ಬೆಳಗ್ಗೆ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಇಹಲೋಕ ತ್ಯಜಿಸಿದ್ದಾರೆ. ಅಂತ್ಯಸಂಸ್ಕಾರ ನೆರವೇರಿಸುವ ವಿಚಾರವಾಗಿ ಕುಟುಂಬ ಸದಸ್ಯರು ಸಮಾಲೋಚಿಸಿದ್ದು, ರೇಸ್​ಕೋರ್ಸ್ ಸಮೀಪ ಇರುವ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಿದ್ಧತೆ ನಡೆದಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ 'ಗಣಿ' ಜನ್ಮದಿನ: ಕೃಷ್ಣಂ ಪ್ರಣಯ ಸಖಿ ಪೋಸ್ಟರ್ ಅನಾವರಣ- ಹೊಸ ಅವತಾರದಲ್ಲಿ 'ಮುಂಗಾರು ಮಳೆ' ಗಣೇಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.