ETV Bharat / entertainment

ಬಿಗ್​ ಬಾಸ್​: 'ದಿನಸಿ' ವಿಚಾರದಲ್ಲೂ ಜಟಾಪಟಿ! - Bigg Boss

Big Boss Kannada: 'ದಿನಸಿ' ಖರೀದಿಗೆ ಹಣ ಖರ್ಚು ಮಾಡಬೇಕಾದ ವಿಚಾರವಾಗಿ ಬಿಗ್​ ಬಾಸ್​ ಸ್ಪರ್ಧಿಗಳ ನಡುವೆ ಗಲಾಟೆ ನಡೆದಿದೆ.

kannada Bigg Boss
ಬಿಗ್​ ಬಾಸ್​ ಕನ್ನಡ
author img

By ETV Bharat Karnataka Team

Published : Dec 22, 2023, 2:16 PM IST

ಈ ವಾರ ಬಿಗ್‌ ಬಾಸ್ ಮನೆಯಲ್ಲಿ ವ್ಯವಹಾರದ ವಾತಾವರಣ ಸೃಷ್ಟಿಯಾಗಿದೆ. ನಿನ್ನೆ ಮೊನ್ನೆ ಬಿಡ್ಡಿಂಗ್​ ಭರಾಟೆ ಜೋರಾಗಿತ್ತು. ಖರೀದಿ - ಮಾರಾಟದ ವ್ಯವಹಾರವೀಗ ಹೊಸದೊಂದು ಮಜಲಿಗೆ ತಲುಪಿದೆ. ಅದೇನು ಎಂಬುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಹಿರಂಗಗೊಂಡಿದೆ. 'ದಿನಸಿಗಾಗಿ ಖರ್ಚು ಮಾಡಲೊಪ್ಪದ ತನಿಷಾ ಮೇಲೆ ಗರಂ ಆದ್ರಾ ನಮ್ರತಾ?' ಶೀರ್ಷಿಕೆಯಡಿ ಸೋಷಿಯಲ್​ ಮೀಡಿಯಾಗಳಲ್ಲಿ ಕಲರ್ಸ್ ಕನ್ನಡ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದ್ದು, ಪ್ರೇಕ್ಷಕರು ಸಂಪೂರ್ಣ ಸಂಚಿಕೆ ವೀಕ್ಷಿಸುವ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಇಷ್ಟು ದಿನ ಸ್ಪರ್ಧಿಗಳನ್ನು ಖರೀದಿಸುವ ಟಾಸ್ಕ್‌ಗಳ ಮೂಲಕ ಹಣ ಸಂಪಾದಿಸುವ ಚಟುವಟಿಕೆಯಲ್ಲಿ ಮುಳುಗಿಹೋಗಿದ್ದ ಸದಸ್ಯರಿಗೆ ಬಿಗ್‌ ಬಾಸ್‌ ಹೊಸದೊಂದು ಅವಕಾಶ ನೀಡಿದ್ದಾರೆ. ಅದು ಲಕ್ಷುರಿ ಖರೀದಿಸುವ ಅವಕಾಶ. ಆದರೆ ಮನೆಯ ಸದಸ್ಯರು ಅವರ ಬಳಿ ಇರುವ ಹಣದಿಂದ ದಿನಸಿಗಳನ್ನು ಖರೀದಿಸಬೇಕು.

ಯಾರ ಬಳಿ ಇರುವ ಹಣವನ್ನು ದಿನಸಿಗೆ ವ್ಯಯಿಸಬೇಕು ಎಂಬ ವಿಚಾರವಾಗಿ ಮನೆಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ನಾಯಕರ ಬಳಿ ಜಾಸ್ತಿ ಹಣವಿದೆ ಎಂದು ವಿನಯ್‌ ಹೇಳಿದ್ದಾರೆ. ಸಂಗೀತಾ, ಅರ್ಧ ಅರ್ಧ ಶೇರ್ ಮಾಡಿಕೊಳ್ಳೋಣ ಎಂದೂ ಹೇಳಿದ್ದಾರೆ. ಆದರೆ ಮತ್ತೋರ್ವ ಕ್ಯಾಪ್ಟನ್​​ ತನಿಷಾ ಅದಕ್ಕೆ ಒಪ್ಪಿಲ್ಲ. ದಿನಸಿ ಬೇಕಾಗಿರುವುದು ಮನೆಯ ಎಲ್ಲಾ ಸದಸ್ಯರಿಗೆ. ಹಾಗಾಗಿ, ಎಲ್ಲರೂ ಹಣ ವ್ಯಯಿಸಬೇಕು ಎಂಬುದು ಅವರ ವಾದ. ಈ ಹೊತ್ತಿನಲ್ಲಿ ಮಧ್ಯಪ್ರವೇಶಿಸಿದ ನಮ್ರತಾ ವಿರುದ್ಧವೂ ತನಿಷಾ ಹರಿಹಾಯ್ದಿದ್ದಾರೆ. ಇದರಿಂದ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ.

ಇದನ್ನೂ ಓದಿ: ಪಠಾಣ್​, ಜವಾನ್​​, ಲಿಯೋ.. 2023ರ ಹಿಟ್​ ಸಿನಿಮಾಗಳ ದಾಖಲೆ ಪುಡಿಗಟ್ಟಲಿದೆ 'ಸಲಾರ್​'!

ಮನೆಯ ಸದಸ್ಯರ ಭಿನ್ನಾಭಿಪ್ರಾಯದಲ್ಲಿ ಲಕ್ಷುರಿ ಬಜೆಟ್ ಕಳೆದುಕೊಳ್ಳುತ್ತಾರಾ? ಯಾರ ಹಣದಲ್ಲಿ 'ಲಕ್ಷುರಿ' ಮನೆಗೆ ಬರುತ್ತದೆ? ಎಂಬುದನ್ನು ತಿಳಿದುಕೊಳ್ಳಲು ಬಿಗ್‌ ಬಾಸ್ ಕನ್ನಡ ವೀಕ್ಷಿಸಿ. ಈ ಜನಪ್ರಿಯ ರಿಯಾಲಿಟಿ ಶೋನ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಗಹುದಾಗಿದೆ. ಆಸಕ್ತಿ ಇದ್ದವರು ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಆಸ್ಕರ್ ನಾಮಿನೇಶನ್​ ಲಿಸ್ಟ್​​ನಿಂದ ಭಾರತೀಯ ಸಿನಿಮಾ ಔಟ್: ಕ್ಷಮೆಯಾಚಿಸಿದ ಜೂಡ್ ಆಂಥನಿ ಜೋಸೆಫ್

ಟಾಸ್ಕ್, ಸೋಲು ಗೆಲುವುಗಳನ್ನು ಯಾವ ರೀತಿ ಸ್ವೀಕರಿಸಿ ಆಟ ಆಡುತ್ತಾರೆ ಅನ್ನೋದೇ 'ಬಿಗ್​ ಬಾಸ್​'. ಬಹುಭಾಷೆಗಳಲ್ಲಿ ಈ ಕಾರ್ಯಕ್ರಮ ಮೂಡಿ ಬರುತ್ತದೆ. ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಸುದೀಪ್​ ನಡೆಸಿಕೊಡುವ 'ಬಿಗ್​ ಬಾಸ್​' ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿದೆ. ಪ್ರತಿದಿನದ ಎಪಿಸೋಡ್​ಗಳನ್ನು ವೀಕ್ಷಿಸಲು ಕನ್ನಡಿಗರು ಕಾತರರಾಗಿರುತ್ತಾರೆ. ಇಂದಿನ ಸಂಚಿಕೆ ನೋಡಲು ಸಹ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.