ETV Bharat / entertainment

'ನನ್ನ ಬಹುದಿನದ ಕನಸು ನನಸಾಗ್ತಿದೆ': ಜೂ. NTR ಜೊತೆ ನಟನೆಗೆ ಜಾನ್ವಿ ಕಪೂರ್​ ಸಂತಸ

author img

By

Published : Mar 19, 2023, 2:31 PM IST

ಆರ್​ಆರ್​ಆರ್​ ಖ್ಯಾತಿಯ​​​ ಜೂನಿಯರ್​ ಎನ್​ಟಿಆರ್ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವ ಬಗ್ಗೆ ಬಾಲಿವುಡ್​ ನಟಿ ಜಾನ್ವಿ ಕಪೂರ್​ ಸಂತಸ ವ್ಯಕ್ತಪಡಿಸಿದ್ದಾರೆ.

Janhvi Kapoor about Jr NTR
ಜೂನಿಯರ್​ ಎನ್​ಟಿಆರ್​ ಜೊತೆ ಜಾನ್ವಿ ಕಪೂರ್​ ನಟನೆ

ಬಾಲಿವುಡ್​ ಬ್ಯೂಟಿ ಜಾನ್ವಿ ಕಪೂರ್​ ಕೆಲ ದಿನಗಳ ಹಿಂದಷ್ಟೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ವಿಶ್ವಾದ್ಯಂತ ಸದ್ದು ಮಾಡುತ್ತಿರುವ RRR​ ಸ್ಟಾರ್​​ ಜೂನಿಯರ್​ ಎನ್​ಟಿಆರ್​ ಅವರ 30ನೇ ಚಿತ್ರಕ್ಕೆ ಬಾಲಿವುಡ್​ ನಟಿ ಜಾನ್ವಿ ಕಪೂರ್​ ನಾಯಕ ನಟಿ. ಈ ಬಗ್ಗೆ ಇದೇ ತಿಂಗಳ ಆರಂಭದಲ್ಲಿ ಸ್ವತಃ ಚಿತ್ರ ತಂಡ ಅಧಿಕೃತ ಮಾಹಿತಿ ಹಂಚಿಕೊಂಡು ಜಾನ್ವಿ ಕಪೂರ್​ ಫಸ್ಟ್​ ಲುಕ್​ ಪೋಸ್ಟರ್ ಸಹ​ ರಿಲೀಸ್​ ಮಾಡಿತ್ತು. ಇದೀಗ ಬಹುಬೇಡಿಕೆ ನಟಿ ಈ ಖ್ಯಾತ ನಟನ ಜೊತೆ ತೆರೆ ಹಂಚಿಕೊಂಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಜೊತೆ ಮಾತನಾಡಿದ ನಟಿ ಜಾನ್ವಿ ಕಪೂರ್, ತೆಲುಗು ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಜೊತೆ ಕೆಲಸ ಮಾಡುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ನನ್ನ ಬಹುದಿನದ ಕನಸಾಗಿತ್ತು. ಅವರೊಂದಿಗೆ ತೆರೆ ಹಂಚಿಕೊಳ್ಳಲು ಬಯಸಿದ್ದೆ. ಮ್ಯಾನ್ ಆಫ್ ದಿ ಮಾಸ್‌ನೊಂದಿಗೆ ಸ್ಕ್ರೀನ್ ಶೇರ್​ ಮಾಡುತ್ತಿರುವುದು ನನ್ನ ದೊಡ್ಡ ಸಂತೋಷಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

ಜಾನ್ವಿ ಆರ್​ಆರ್​ಆರ್​ ನಟನೊಂದಿಗೆ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಇದಕ್ಕೂ ಮೊದಲು ನಟಿ ಅವರ ಹುಟ್ಟುಹಬ್ಬದಂದು ಈ ಚಿತ್ರದ ಮೊದಲ ಪೋಸ್ಟರ್ ಅನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಜಾನ್ವಿ ಕಪೂರ್ ಸಮುದ್ರ ದಡದಲ್ಲಿ ಕುಳಿತಿರುವ ಚಿತ್ರವಿದು.

ಜೂನಿಯರ್​ ಎನ್​ಟಿಆರ್​ ಮುಖ್ಯಭೂಮಿಕೆಯ ಈ ಸಿನಿಮಾಗೆ ಇನ್ನೂ ಟೈಟಲ್​​ ಅಂತಿಮವಾಗಿಲ್ಲ. ಸದ್ಯ 'ಎನ್​ಟಿಆರ್​ 30' ಎಂದೇ ಕರೆಯಲಾಗುತ್ತಿದೆ. ಆದರೆ ಈ ಬಹುನಿರೀಕ್ಷಿತ ಚಿತ್ರಕ್ಕೆ ಬಾಲಿವುಡ್​ ಬೆಡಗಿ ಜಾನ್ವಿ ಕಪೂರ್​ ಎನ್ನುವುದು ಮಾತ್ರ ಖಚಿತ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬಂದ ಬಳಿಕ ಚಿತ್ರದ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಈ ಇಬ್ಬರೂ ಕೂಡ ದೊಡ್ಡ ಫ್ಯಾನ್​ ಫಾಲೋವಿಂಗ್​ ಹೊಂದಿದ್ದು, ಚಿತ್ರ ಹಿಟ್ ಸಾಲಿಗೆ ಸೇರಲಿದೆ ಅನ್ನೋದು ಅಭಿಮಾನಿಗಳು ಮತ್ತು ಚಿತ್ರತಂಡದ ವಿಶ್ವಾಸ. ಜನತಾ ಗ್ಯಾರೇಜ್ ಖ್ಯಾತಿಯ ನಿರ್ದೇಶಕ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಪ್ಯಾನ್​ ಇಂಡಿಯಾ ಸಿನಿಮಾ ಮುಂದಿನ ವರ್ಷ ಏಪ್ರಿಲ್​ 5ರಂದು ತೆರೆಕಾಣಲಿದೆ.

ಇದನ್ನೂ ಓದಿ: ಹಾಲಿವುಡ್​ ಸಿನಿಮಾದಲ್ಲಿ ರಾಮ್ ಚರಣ್.. ನೆಪೋಟಿಸಂ ಬಗ್ಗೆ RRR ಸ್ಟಾರ್ ಹೀಗಂದ್ರು

2018ರಲ್ಲಿ ಜಾನ್ವಿ ಕಪೂರ್​​ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆ ಸಾಲಿನಲ್ಲಿ ತೆರೆಕಂಡ 'ಧಡಕ್'​ ಇವರ ಚೊಚ್ಚಲ ಚಿತ್ರ. ಧಡಕ್​​ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಕಾನ್ವಿ ಕಪೂರ್​​ ಈವರೆಗೆ ಆರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಅವರ ಬಾಲಿವುಡ್​ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಕಂಡಿಲ್ಲ. ಆದ್ರೆ ಈ ನಟಿ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ಇದೀಗ ಜೂ. ಎನ್​​ಟಿಆರ್​ ಜೊತೆಗೆ ನಟಿಸುವ ದೊಡ್ಡ ಅವಕಾಶ ಪಡೆದುಕೊಂಡಿದ್ದಾರೆ. ನಾನು ಜೂನಿಯರ್​ ಎನ್​ಟಿಆರ್​ ಜೊತೆ ಅಭಿನಯಿಸಲು ಬಯಸುತ್ತೇನೆ ಎಂದು ಹಲವಾರು ಸಂದರ್ಭಗಳಲ್ಲಿ ನಟಿ ಹೇಳಿಕೊಂಡಿದ್ದರು. ಆ ಕನಸು ಕೊನೆಗೂ ನನಸಾಗಿದೆ. ಇನ್ನೂ ನಿತೇಶ್ ತಿವಾರಿ ನಿರ್ದೇಶನದ ಬವಾಲ್ ಚಿತ್ರದಲ್ಲಿ ವರುಣ್ ಧವನ್ ಜೊತೆ ಜಾನ್ವಿ ಕಪೂರ್​ ನಟಿಸಲಿದ್ದಾರೆ. ಮಿಸ್ಟರ್ ಅಂಡ್ ಮಿಸೆಸ್ ಮಾಹಿ ಸಿನಿಮಾದಲ್ಲಿ ಜಾನ್ವಿ ಅವರು ರಾಜ್‌ಕುಮಾರ್ ರಾವ್ ಜೊತೆ ನಟಿಸಲಿದ್ದಾರೆ.

ಇದನ್ನೂ ಓದಿ: ಕೆಜಿಎಫ್‌, ಕಾಂತಾರ ಆಯ್ತು ಮುಂದೇನು?: ಹೊಂಬಾಳೆ ಸಂಸ್ಥೆಯಿಂದ ಬರಲಿವೆ ಈ ಸಿನಿಮಾಗಳಿವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.