ETV Bharat / entertainment

Jaggesh: ರಜನಿ 'ಜೈಲರ್​' ಜೊತೆ ಜಗ್ಗೇಶ್​ 'ತೋತಾಪುರಿ 2' ಸಿನಿಮಾ ಬಿಡುಗಡೆ; ಯಾವಾಗ ಗೊತ್ತೇ? - ಈಟಿವಿ ಭಾರತ ಕನ್ನಡ

Totapuri-2 movie update: ನವರಸನಾಯಕ ಜಗ್ಗೇಶ್ ಹಾಗೂ ಡಾಲಿ ಧನಂಜಯ್ ಅಭಿನಯದ 'ತೋತಾಪುರಿ 2' ಚಿತ್ರ ಆಗಸ್ಟ್​ ತಿಂಗಳಲ್ಲಿ ತೆರೆ ಕಾಣಲಿದೆ.

totapuri 2
ತೋತಾಪುರಿ 2
author img

By

Published : Jul 31, 2023, 1:39 PM IST

ಕಾಲಿವುಡ್​ ಸೂಪರ್​ ಸ್ಟಾರ್​ ರಜನಿಕಾಂತ್​ ನಟನೆಯ 'ಜೈಲರ್'​ ಸಿನಿಮಾ ಜೊತೆ ಕನ್ನಡ ಸಿನಿಮಾವೊಂದು ಪೈಪೋಟಿ ನೀಡಲಿದೆ. ನವರಸನಾಯಕ ಜಗ್ಗೇಶ್ ಹಾಗೂ ಡಾಲಿ ಧನಂಜಯ್ ಅಭಿನಯದ 'ತೋತಾಪುರಿ 2' ಚಿತ್ರ ಆಗಸ್ಟ್​ 11 ರಂದು ತೆರೆ ಕಾಣಲು ಸಜ್ಜಾಗಿದೆ. 'ಜೈಲರ್​' ಚಿತ್ರವು ಆಗಸ್ಟ್​ 10 ರಂದು ಬಿಡುಗಡೆಯಾಗುತ್ತಿದ್ದು, ಮರುದಿನವೇ ​'ತೋತಾಪುರಿ 2' ಸಿನಿಮಾ ಕೂಡ ತೆರೆಗೆ ಅಪ್ಪಳಿಸಲಿದೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಸುರೇಶ್​, "ನಾವು ಆಗಸ್ಟ್​ 2ನೇ ವಾರ ಸಿನಿಮಾ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿರುವುದು ನಿಜ" ಎಂದಿದ್ದಾರೆ.

'ಜೈಲರ್'​ ಸಿನಿಮಾದಲ್ಲಿ ರಜನಿಕಾಂತ್​ ಜೊತೆ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಕೂಡ ನಟಿಸಿದ್ದಾರೆ. ಹೀಗಾಗಿ ಈ ಚಿತ್ರದ ಮೇಲೆ ಕನ್ನಡಿಗರಿಗೂ ಮುಗಿಲೆತ್ತರದ ನಿರೀಕ್ಷೆಯಿದೆ. ಈ ಕಾರಣದಿಂದಲೇ ಆಗಸ್ಟ್​ 2ನೇ ವಾರ ಯಾವುದೇ ಕನ್ನಡ ಸಿನಿಮಾ ಘೋಷಣೆಯಾಗಿರಲಿಲ್ಲ. ಆದರೆ ಇದೀಗ ಜಗ್ಗೇಶ್​ ನಟನೆಯ 'ತೋತಾಪುರಿ 2' ಸಿನಿಮಾ 'ಜೈಲರ್​'ನೊಂದಿಗೆ ತೆರೆಗೆ ಬರಲು ಸಜ್ಜಾಗಿದೆ. ಈ ಮೊದಲೇ ಜಗ್ಗೇಶ್​ ಸಿನಿಮಾ ಆಗಸ್ಟ್​ ತಿಂಗಳಲ್ಲೇ ರಿಲೀಸ್​ ಆಗಲಿದೆ ಎನ್ನಲಾಗಿತ್ತು. ಇದೀಗ ಆಗಸ್ಟ್​ 11 ರಂದು ಸಿನಿಮಾ ಬಿಡುಗಡೆಗೆ ಮುಹೂರ್ತ ನೀಡಲಾಗಿದೆ.

ಇಡೀ ಜಗತ್ತೇ ಒಂದು ಮನೆ, ನಾವೆಲ್ಲಾ ಒಂದೇ ಸೂರಿನಡಿ ಬದುಕುತ್ತಿರುವವರು ಎಂಬ ಭಾವೈಕ್ಯತೆಯ ಸಂದೇಶ ಸಾರುವ, ಸ್ಟ್ರಾಂಗ್ ಕಂಟೆಂಟ್ ಒಳಗೊಂಡಿದ್ದ ತೋತಾಪುರಿ ಸಿನಿಮಾ ಪ್ರೇಕ್ಷಕರಿಂದ, ವಿಮರ್ಶಕರಿಂದ ಮೆಚ್ಚುಗೆ ಪಡೆದು ಯಶಸ್ವಿಯಾಗಿತ್ತು. ಆಗಲೇ ತೋತಾಪುರಿ‌ ಚಿತ್ರದ ಎರಡನೇ ಭಾಗವನ್ನು ನಿರ್ಮಾಣ ಮಾಡುತ್ತಿರುವುದಾಗಿ ನಿರ್ದೇಶಕ ವಿಜಯಪ್ರಸಾದ್ ಸೂಚನೆ ನೀಡಿದ್ದರು. ಅದರಂತೆ ಇದೀಗ ತೋತಾಪುರಿ ಭಾಗ 2 ಸಿನಿಮಾ ನಿರ್ಮಾಣ ಆಗಿದ್ದು, ಜಗ್ಗೇಶ್​ ಜೊತೆ ಧನಂಜಯ್​ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Bang: ಶಾನ್ವಿ ಶ್ರೀವಾಸ್ತವ್​ ಗ್ಯಾಂಗ್​ಸ್ಟರ್​ ಅವತಾರ, ಫ್ಯಾನ್ಸ್​ ಫಿದಾ

ತೋತಾಪುರಿ ಮೊದಲ ಭಾಗದ ಅಂತ್ಯದಲ್ಲಿ ಕಾಣಿಸಿಕೊಂಡು ಒಂದು ಸ್ಪೆಷಲ್ ಲುಕ್ ನೀಡಿದ್ದ ನಟ ಡಾಲಿ ಧನಂಜಯ್ ಈ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಪಾತ್ರ ಚಿತ್ರದಲ್ಲಿ ಬಹಳ ವಿಶೇಷವಾಗಿ ಮೂಡಿಬಂದಿದೆ. ಮೊದಲ ಭಾಗದಲ್ಲಿ ನವರಸನಾಯಕ ಜಗ್ಗೇಶ್, ನಟಿ ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ 'ತೋತಾಪುರಿ 2' ಸಿನಿಮಾದಲ್ಲೂ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿಯಲಿವೆ.

ತೋತಾಪುರಿ ಚಿತ್ರದ ಮೊದಲ ಭಾಗದಲ್ಲಿ 'ಬಾಗ್ಲು ತೆಗಿ ಮೇರಿ ಜಾನ್' ಹಾಡು ಸೂಪರ್​ ಹಿಟ್​ ಆಗಿತ್ತು. ಇತ್ತೀಚೆಗೆ 'ತೋತಾಪುರಿ 2' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಅದರಲ್ಲೂ ಮಳೆಗಾಲದಲ್ಲಿ ಈ ಹಾಡು ಮೋಡಿ ಮಾಡುತ್ತಿರುವುದು ವಿಶೇಷ. 'ಮೊದಲ ಮಳೆ ಮನದೊಳಗೆ..' ಈ ಹಾಡಿಗೆ ಹೃದಯಶಿವ ಸಾಹಿತ್ಯ ಬರೆದಿದ್ದಾರೆ. ಡಾಲಿ ಧನಂಜಯ್ ಹಾಗೂ ಸುಮನ್ ರಂಗನಾಥ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಸಂಜಿತ್ ಹೆಗ್ಡೆೆ ಕಂಠಸಿರಿಯಲ್ಲಿ ಮೂಡಿಬಂದಿದೆ.

ಇದನ್ನೂ ಓದಿ: ಥಿಯೇಟರ್‌ಗಳಲ್ಲಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಹವಾ; 3ನೇ ದಿನದ ಕಲೆಕ್ಷನ್​ನಲ್ಲಿ ಏರಿಕೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.