ನವದೆಹಲಿ: ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣ ನಟಿ ಮಣಿಯರಿಬ್ಬರ ನಡುವೆ ಕಲಹಕ್ಕೆ ಕಾರಣವಾಗಿದೆ. ದುರುದ್ದೇಶಪೂರಿತ ಕಾರಣಗಳಿಗಾಗಿ ಮತ್ತು ತಮ್ಮ ವೃತ್ತಿಜೀವನವನ್ನು ನಾಶಪಡಿಸಲು ತಮ್ಮ ವಿರುದ್ಧ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟಿ ನೋರಾ ಫತೇಹಿ ಅವರು ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ನೋರಾ ಫತೇಹಿ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಮೂಲತಃ ವಿದೇಶಿಗರಾಗಿದ್ದು, ಇಬ್ಬರೂ ಬಾಲಿವುಡ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಚಾರ್ಮ್ ಮೂಡಿಸಿದ್ದಾರೆ. ಆದರೆ ಜಾಕ್ವೆಲಿನ್ ಫರ್ನಾಂಡಿಸ್ ಅವರು ತಮ್ಮ ಸ್ವಹಿತಾಸಕ್ತಿಗಳನ್ನು ಸಾಧಿಸುವ ಸಲುವಾಗಿ ತಮ್ಮ ಸಹ ಕಲಾವಿದರ ವೃತ್ತಿಜೀವನವನ್ನು ಹಾನಿ ಮಾಡುತ್ತಿದ್ದಾರೆ ಎಂದು ನೋರಾ ಫತೇಹಿ ಅವರು ಮನವಿಯಲ್ಲಿ ಉಲೇಖಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಕೋರ್ಟ್‌ಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡೀಸ್
ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ನೋರಾ ಫತೇಹಿ ಹೆಸರು ಬಂದಾಗ ಆ ಆರೋಪವನ್ನು ತಳ್ಳಿಹಾಕಿದ್ದರು. ಮತ್ತು ಸುಕೇಶನ ಹೆಂಡತಿ ಪರಿಚಯದಲ್ಲಿ ಅವರ ನಿವಾಸಕ್ಕೆ ಹೋಗಿದ್ದೆ ಎಂದು ಹೇಳಿಕೊಂಡಿದ್ದರು.
ಆದರೆ ಡಿಸೆಂಬರ್ 2 ರಂದು ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫತೇಹಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ಮಾಡಿತ್ತು. ಪ್ರಕರಣದ ಸಾಕ್ಷಿಯಾಗಿ ಫರ್ನಾಂಡೀಸ್ ಮತ್ತು ಫತೇಹಿ ಇಬ್ಬರ ಹೇಳಿಕೆಗಳನ್ನೂ ಇಡಿ ದಾಖಲಿಸಿಕೊಂಡಿದೆ.
ಇದನ್ನೂ ಓದಿ: ವಂಚಕ ಸುಕೇಶ್ ಪ್ರಕರಣ: ಇಡಿ ಮುಂದೆ ಹಾಜರಾದ ನಟಿ ನೋರಾ ಫತೇಹಿ