ETV Bharat / entertainment

ಹಿರಣ್ಯ ಟೀಸರ್ ಅನಾವರಣ: ರಾಜವರ್ಧನ್ ಭರ್ಜರಿ ಆ್ಯಕ್ಷನ್ - Hiranya movie

ರಾಜವರ್ಧನ್ ನಟನೆಯ 'ಹಿರಣ್ಯ' ಸಿನಿಮಾದ ಟೀಸರ್ ಅನಾವರಣಗೊಂಡಿದೆ.

Hiranya Teaser
ಹಿರಣ್ಯ ಟೀಸರ್ ಬಿಡುಗಡೆ ಕಾರ್ಯಕ್ರಮ
author img

By ETV Bharat Karnataka Team

Published : Nov 30, 2023, 1:40 PM IST

ಬಿಚ್ಚುಗತ್ತಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರುವ ನಟ ರಾಜವರ್ಧನ್. ಸದ್ಯ ಹಿರಣ್ಯ ಸಿನಿಮಾ ಮೂಲಕ ಮಾಸ್ ಲುಕ್​​ನಲ್ಲಿ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಇತ್ತೀಚೆಗೆ 'ಹಿರಣ್ಯ' ಸಿನಿಮಾದ ಮಾಸ್ ಟೀಸರ್ ರಿಲೀಸ್ ಆಗಿದ್ದು, ಭರ್ಜರಿ ಆ್ಯಕ್ಷನ್ ಮೂಲಕ ರಾಜವರ್ಧನ್ ಅಬ್ಬರಿಸಿದ್ದಾರೆ.

ಹೌದು, ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಿರಣ್ಯ ಟೀಸರ್ ಬಿಡುಗಡೆ ಮಾಡಲಾಯಿತು. ಲಹರಿ ಸಂಸ್ಥೆಯ ವೇಲು ರಾಜವರ್ಧನ್ ಸಿನಿಮಾಗೆ ಸಾಥ್ ಕೊಟ್ಟರು. ಟೀಸರ್ ರಿಲೀಸ್ ವೇಳೆ ಹಿರಣ್ಯ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಪ್ರವೀಣ್ ಅವ್ಯುಕ್ತ ಮಾತನಾಡಿ, ಮುಹೂರ್ತ ಸಮಾರಂಭದಲ್ಲಿ ಕೆಲಸ ಆದ್ಮೇಲೆ ನಿಮ್ಮ ಮುಂದೆ ಬರ್ತೀವಿ ಎಂದಿದ್ದೆ. ಕೆಲಸ ಆಗಿದೆ, ಬಂದಿದ್ದೇವೆ. ರಾಜವರ್ಧನ್ ಅವರು ರಾಣಾ ಡೆಡ್ಲಿ ಕ್ಯಾರೆಕ್ಟರ್ ನಿರ್ವಹಿಸಿದ್ದಾರೆ. ಲುಕ್ ಟೆಸ್ಟ್ ಮಾಡಿದ ಸಂದರ್ಭ ಇಷ್ಟವಾಯ್ತು. ಅವರು ಅದ್ಭುತವಾಗಿ ಫರ್ಪಾಮ್ ಮಾಡಿದ್ದಾರೆ. ಇಡೀ ತಂಡದ ಬೆಂಬಲದಿಂದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

  • " class="align-text-top noRightClick twitterSection" data="">

ನಟ ರಾಜವರ್ಧನ್ ಮಾತನಾಡಿ, ಎರಡು ವರ್ಷಗಳ ಹಿಂದೆ ಪ್ರವೀಣ್ ಬಂದು ಕಥೆ ಹೇಳಿದ್ದರು. ಬಿಚ್ಚುಗತ್ತಿಯಂತಹ ದೊಡ್ಡ ಸಿನಿಮಾ ಮಾಡಿದ್ದೆ. ಆ ಸಮಯದಲ್ಲಿ ಕಥೆ ಆಯ್ಕೆ ಮಾಡಿಕೊಳ್ಳುವುದು ದೊಡ್ಡ ಚಾಲೆಂಜ್ ಆಗಿತ್ತು. ಪ್ರವೀಣ್ ಕಥೆ ಹೇಳಿದಾಗ ಒಂದು ಪಾಯಿಂಟ್ ಇಷ್ಟವಾಯ್ತು. ಒಂದೊಳ್ಳೆ ಔಟ್ ಪುಟ್ ಬಂದಿದೆ. ಈ ಚಿತ್ರ ಪ್ರೇಕ್ಷಕರಿಗೆ ಹಿಡಿಸಲಿದೆ ಎಂದರು.

ನಿರ್ಮಾಪಕ ವಿಜಯ್ ಗೌಡ ಮಾತನಾಡಿ, ಡೈರೆಕ್ಟರ್ ಪ್ರವೀಣ್ ನಮ್ಮನ್ನು ಭೇಟಿಯಾದರು. ಆ ನಂತರ ಮ್ಯಾಸಿವ್ ಸ್ಟಾರ್ ರಾಜವರ್ಧನ್ ಅವರನ್ನು ಭೇಟಿಯಾದೆವು. ಆ ನಂತರ ತಂಡ ಕಟ್ಟಿಕೊಂಡು ಸಿನಿಮಾ ಶುರು ಮಾಡಿದೆವು. ರಾಜವರ್ಧನ್ ಹಾಗೂ ಇಡೀ ತಂಡದ ಬೆಂಬಲದಿಂದ ಸಿನಿಮಾ ಇಲ್ಲಿವರೆಗೆ ಬಂದಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ವಿಜಯ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ಮಳೆ ಹುಡುಗಿ

ಹಲವು ಶಾರ್ಟ್‌ ಮೂವಿಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಪ್ರವೀಣ್‌ ಅವ್ರ್ಯುಕ್ತ್ ಹಿರಣ್ಯ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್​​ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಯುವನಟಿ ರಿಹಾನಾ ರಾಜವರ್ಧನ್​ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: ಬಹುಕಾಲದ ಗೆಳತಿಯ ಕೈ ಹಿಡಿದ ಬಾಲಿವುಡ್ ನಟ ರಣ​​​ದೀಪ್ ಹೂಡಾ: ಫೋಟೋಗಳನ್ನು ನೋಡಿ

ವೇದಾಸ್‌ ಇನ್ಫಿನಿಟಿ ಪಿಕ್ಚರ್ ಬ್ಯಾನರ್‌ನಲ್ಲಿ ವಿಘ್ನೇಶ್ವರ ಯು. ಹಾಗೂ ವಿಜಯ್‌ ಕುಮಾರ್‌ ಬಿ.ವಿ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಹಿರಣ್ಯ ಸಿನಿಮಾಗೆ ಯೋಗೇಶ್ವರನ್‌ ಆರ್‌. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿರುವ ಹಿರಣ್ಯ ಸಿನಿಮಾವನ್ನು ಆದಷ್ಟು ಬೇಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.