ಸಿನಿಮಾ ನಟರು ತಮ್ಮ ಕ್ರೇಜ್ಗೆ ತಕ್ಕಂತೆ ಸಂಭಾವನೆ ಪಡೆಯುತ್ತಾರೆ. ಸಾಮಾನ್ಯವಾಗಿ ನಾಯಕ ನಟರಿಗೆ ಸ್ಪಲ್ಪ ಹೆಚ್ಚೇ ದುಡ್ಡು ಸಿಗುತ್ತದೆ. ಆದರೆ ನಾಯಕಿಯರಿಗೆ ಸಿಗುವ ಸಂಭಾವನೆ ಕೊಂಚ ಕಡಿಮೆಯೇ. ಇನ್ನು ಹಾಸ್ಯ ಕಲಾವಿದರ ಬಗ್ಗೆ ಹೇಳಬೇಕೆಂದಿಲ್ಲ. ಅವರು ಮತ್ತೂ ಕಡಿಮೆ ಸಂಖ್ಯೆಯಲ್ಲಿ ಹಣ ಪಡೆದುಕೊಳ್ಳುತ್ತಾರೆ. ಆದರೆ ಒಬ್ಬ ಕಾಮಿಡಿಯನ್ ಒಂದೇ ಸಿನಿಮಾಗೆ ಭಾರತೀಯ ಎಲ್ಲಾ ನಟ- ನಟಿಯರಿಗಿಂತ ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ.
ಹೌದು, ಹಾಲಿವುಡ್ ತಾರೆಯರು ಭಾರತೀಯ ಸಿನಿಮಾ ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬುದು ನಮಗೆಲ್ಲರಿಗೂ ಈಗಾಗಲೇ ತಿಳಿದಿದೆ. ಆದರೆ ವಿಶ್ವದಾದ್ಯಂತ ಭಾರತೀಯ ಸಿನಿಮಾಗಳಿಗೆ ಹೆಚ್ಚುತ್ತಿರುವ ಕ್ರೇಜ್ನಿಂದಾಗಿ ಶಾರುಖ್ ಖಾನ್, ಅಮೀರ್ ಖಾನ್, ಪ್ರಭಾಸ್, ದಳಪತಿ ವಿಜಯ್, ರಜನಿಕಾಂತ್ ಇವರಂತಹ ನಟರು ಈ ಅಂತರವನ್ನು ಕಡಿಮೆ ಮಾಡಿದ್ದಾರೆ. ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಮೀರ್ ಖಾನ್ ಮುಂಚೂಣಿಯಲ್ಲಿದ್ದರು.
-
Happy Birthday Jim Carrey: Check his iconic comedy flicks
— ANI Digital (@ani_digital) January 17, 2023 " class="align-text-top noRightClick twitterSection" data="
Read @ANI Story | https://t.co/1hQhUtIZ32#JimCarrey #comedian #Hollywood #birthday pic.twitter.com/rFc0tKH5Xa
">Happy Birthday Jim Carrey: Check his iconic comedy flicks
— ANI Digital (@ani_digital) January 17, 2023
Read @ANI Story | https://t.co/1hQhUtIZ32#JimCarrey #comedian #Hollywood #birthday pic.twitter.com/rFc0tKH5XaHappy Birthday Jim Carrey: Check his iconic comedy flicks
— ANI Digital (@ani_digital) January 17, 2023
Read @ANI Story | https://t.co/1hQhUtIZ32#JimCarrey #comedian #Hollywood #birthday pic.twitter.com/rFc0tKH5Xa
ಆದರೆ ಈ ವಿಚಾರವನ್ನು ಹಾಲಿವುಡ್ಗೆ ಹೋಲಿಸಿದರೆ, ನಮ್ಮ ದೇಶದ ಚಿತ್ರರಂಗದ ನಟರ ಸಂಭಾವನೆ ಇನ್ನೂ ಕಡಿಮೆ. ಹಾಸ್ಯ ನಟರದ್ದು ಮತ್ತೂ ಕಡಿಮೆ. ಆದರೆ ಇಲ್ಲೊಬ್ಬ ಹಾಸ್ಯನಟ ಭಾರತೀಯ ಚಿತ್ರರಂಗದ ಎಲ್ಲಾ ಸ್ಟಾರ್ ನಟರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಅವರು ಹಾಲಿವುಡ್ ಹಾಸ್ಯನಟ 'ಜಿಮ್ ಕ್ಯಾರಿ'. ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟರ ಸಾಲಿನಲ್ಲಿ ಇವರು ಮೊದಲಿಗರಾಗಿದ್ದಾರೆ.
ನಂ.1 ಹಾಸ್ಯನಟ: 2008 ರಲ್ಲಿ ಜಿಮ್ ಕ್ಯಾರಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟರಾದರು. ಎರಡು ದಶಕಗಳಿಂದ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟ ಎಂದು ಗುರುತಿಸಿಕೊಂಡಿದ್ದಾರೆ. 1990ರ ದಶಕದಲ್ಲಿ 'ದಿ ಮಾಸ್ಕ್' ಮತ್ತು 'ಲೈಯರ್ ಲೈಯರ್'ನಂತಹ ಚಿತ್ರಗಳು ಯಶಸ್ವಿಯಾದವು. ಅವುಗಳು ಮಿಲಿಯನ್ ಡಾಲರ್ ಲೆಕ್ಕಾಚಾರದಲ್ಲಿ ಕಲೆಕ್ಷನ್ ಮಾಡಿತು. ಜಿಮ್ ಕ್ಯಾರಿ ಅವರು ಬ್ರೂಸ್ ಆಲ್ಮೈಟಿ ಚಿತ್ರದ ಮೂಲಕ ಹಾಲಿವುಡ್ಗೆ ಪಾದಾರ್ಪಣೆ ಮಾಡಿದರು.
ಇದನ್ನೂ ಓದಿ: ಅಬ್ಬಬ್ಬಾ! 2 ನಿಮಿಷದ ಹಾಡಿಗೆ 2 ಕೋಟಿ ರೂ. ಸಂಭಾವನೆ.. 'ಐರಾವತ' ಬೆಡಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ !!
2008 ರಲ್ಲಿ ತೆರೆಕಂಡ 'ಯೆಸ್ ಮ್ಯಾನ್' ಚಿತ್ರಕ್ಕೆ ಇವರು 35 ಮಿಲಿಯನ್ ಡಾಲರ್ (ಸುಮಾರು 285 ಕೋಟಿ ರೂಪಾಯಿ) ಸಂಭಾವನೆ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಕೊಂಚ ಕಡಿಮೆಯಾದರೂ, ಜಿಮ್ ಕ್ಯಾರಿ ಒಂದೇ ಚಿತ್ರದಿಂದ 15 ರಿಂದ 20 ಮಿಲಿಯನ್ ಡಾಲರ್ (130 ರಿಂದ 160 ಕೋಟಿ ರೂಪಾಯಿ) ಸಂಪಾದಿಸುತ್ತಾರೆ. 2008 ರಲ್ಲಿ ಇವರು ಒಂದು ಚಿತ್ರಕ್ಕೆ 35 ಮಿಲಿಯನ್ ಡಾಲರ್ ತೆಗೆದುಕೊಳ್ಳುತ್ತಿದ್ದರು. ವಿಲ್ ಸ್ಮಿತ್ ನಟನೆಯ 2021ರಲ್ಲಿ ಬಿಡುಗಡೆಯಾದ 'Emancipation' ಚಿತ್ರಕ್ಕೆ ಇವರು 30 ಮಿಲಿಯನ್ (ಸುಮಾರು 248.17 ಕೋಟಿ ರೂಪಾಯಿ) ತೆಗೆದುಕೊಂಡಿದ್ದಾರೆ. ಅದೇ ವರ್ಷ ತೆರೆಕಂಡ ಬ್ರಾಡ್ ಪಿಟ್ ಅವರ 'ಓಶಿಯನ್ಸ್ ಇಲೆವೆನ್ ಬ್ಯಾಕ್' ಸಿನಿಮಾಗೂ ಅಷ್ಟೇ ಸಂಭಾವನೆ ಪಡೆದುಕೊಂಡಿದ್ದಾರೆ.
ನಮ್ಮ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಜನರಲ್ಲಿ ತಮಿಳು ನಟ ದಳಪತಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ. ಸದ್ಯ ಅವರು ಲಿಯೋ ಚಿತ್ರಕ್ಕಾಗಿ 200 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ, ಶಾರುಖ್ ಖಾನ್, ಸಲ್ಮಾನ್ ಖಾನ್, ಪ್ರಭಾಸ್ ಮುಂತಾದ ನಟರು ಕೆಲವೊಮ್ಮೆ ಒಂದೇ ಚಿತ್ರಕ್ಕೆ 120 ರಿಂದ 150 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಮೀರ್ ಖಾನ್ ಮತ್ತು ರಜನಿಕಾಂತ್ ಅಂತಹವರು ಕೂಡ ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ರಜನಿಕಾಂತ್ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿನಿಮಾ ನಟ: ಎಷ್ಟು ಕೋಟಿ ಗೊತ್ತೇ?