ಸೌತ್ ಸಿನಿಮಾ ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರ 'ಗುಂಟೂರು ಖಾರಂ'. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬೋದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಕಾಸ್ಟಿಂಗ್, ರಿಲೀಸ್ ಡೇಟ್, ಕಥೆ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ಆಗುತ್ತಲೇ ಇದೆ. ಹೀಗಾಗಿ ಸಿನಿಮಾ ಬಿಡುಗಡೆ ವಿಳಂಬವಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದೀಗ ನಿರ್ಧರಿಸಿದ ದಿನಾಂಕದಂದೇ ಚಿತ್ರ ತೆರೆ ಕಾಣಲಿದೆ ಎಂದು ಮಹೇಶ್ ಬಾಬು ಸ್ಪಷ್ಟಪಡಿಸಿದ್ದಾರೆ.
-
The answer is here from the superstar himself 😉
— Mahesh Babu Space (@SSMBSpace) August 20, 2023 " class="align-text-top noRightClick twitterSection" data="
Ee sari Sankranthi ki blast ey!! 🔥#2DecadesOfBigC@UrstrulyMahesh #GunturKaaram #GunturKaaramOnJan12th pic.twitter.com/eeskRnTogc
">The answer is here from the superstar himself 😉
— Mahesh Babu Space (@SSMBSpace) August 20, 2023
Ee sari Sankranthi ki blast ey!! 🔥#2DecadesOfBigC@UrstrulyMahesh #GunturKaaram #GunturKaaramOnJan12th pic.twitter.com/eeskRnTogcThe answer is here from the superstar himself 😉
— Mahesh Babu Space (@SSMBSpace) August 20, 2023
Ee sari Sankranthi ki blast ey!! 🔥#2DecadesOfBigC@UrstrulyMahesh #GunturKaaram #GunturKaaramOnJan12th pic.twitter.com/eeskRnTogc
'ಗುಂಟೂರು ಖಾರಂ' 2024ರ ಜನವರಿ 13 ರಂದೇ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮಹೇಶ್ ಬಾಬು ಅವರು ಮಾಧ್ಯಮದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮಹೇಶ್ ಬಾಬು ಅವರ 28ನೇ ಚಿತ್ರ ಇದಾಗಿದೆ. ಸಂಕ್ರಾತಿ ಹಬ್ಬಕ್ಕೆ ನಟ ಅಭಿಮಾನಿಗಳಿಗೆ ಈ ಸಿನಿಮಾವನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ಮಹೇಶ್ ಬಾಬು ಅವರ ಈ ಚಿತ್ರಕ್ಕೆ ಮೊದಲು ತಾತ್ಕಾಲಿಕವಾಗಿ SSMB28 ಎಂದು ಹೆಸರಿಡಲಾಗಿತ್ತು. ಬಹು ಸಮಯದಿಂದ SSMB28 ಎಂದೇ ಕರೆಯಲಾಗುತ್ತಿತ್ತು. ಬಳಿಕ ಮೇ 31 ರಂದು 'ಗುಂಟೂರು ಖಾರಂ' ಎಂದು ಹೆಸರನ್ನು ಫೈನಲ್ ಮಾಡಲಾಯಿತು. ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೂ ಮೊದಲು ನಟ ಮತ್ತು ನಿರ್ದೇಶಕರು ಬ್ಲಾಕ್ಬಸ್ಟರ್ ಹಿಟ್ ಚಿತ್ರಗಳಾದ ಅತಡು ಮತ್ತು ಖಲೇಜಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 12 ವರ್ಷಗಳ ನಂತರ ಈ ನಟ ನಿರ್ದೇಶಕ ಜೋಡಿ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಮಾಡುತ್ತಿದೆ.
ಈ ಆ್ಯಕ್ಷನ್ ಸಿನಿಮಾವನ್ನು ಎಸ್. ರಾಧಾ ಕೃಷ್ಣ ಅವರ ಬ್ಯಾನರ್ ಹಾರಿಕಾ & ಹಸ್ಸಿನ್ ಕ್ರಿಯೇಷನ್ಸ್ ನಿರ್ಮಿಸುತ್ತಿದೆ. ತೆಲುಗು ನಟಿ ಮೀನಾಕ್ಷಿ ಚೌಧರಿ ಈ ಸಿನಿಮಾಗೆ ಅಧಿಕೃತ ಸೇರ್ಪಡೆಯಾಗಿರುವುದು ಗೊತ್ತೇ ಇದೆ. ಸದ್ಯ ಅವರು 'ಗುಂಟೂರು ಖಾರಂ' ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ. ಚಿತ್ರದ ತಯಾರಕರು ಮೀನಾಕ್ಷಿ ಚೌಧರಿ ಅವರನ್ನು ಎರಡನೇ ನಾಯಕಿಯಾಗಿ ಸ್ವಾಗತಿಸಿದ್ದಾರೆ. ಮೊದಲ ನಟಿಯಾಗಿ ಕನ್ನಡತಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ.
ಅಲ್ಲದೇ ಸಿನಿಮಾದ ಕಾಸ್ಟಿಂಗ್, ರಿಲೀಸ್ ಡೇಟ್, ಕಥೆ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ಆಗುತ್ತಲೇ ಇದೆ. ಈಗಾಗಲೇ ಪೂಜಾ ಹೆಗ್ಡೆ ಸ್ಥಾನವನ್ನು ಮೀನಾಕ್ಷಿ ಚೌಧರಿ ತುಂಬಿದ್ದಾರೆ. ಸಂಗೀತ ಸಂಯೋಜಕ ತಮನ್ ಕೂಡ ಹೊರಗುಳಿದಿದ್ದಾರೆ. ನಾಲ್ಕು ಹಾಡುಗಳಿಗೆ ಹೇಶಮ್ ಅಬ್ದುಲ್ ವಹಾಬ್ ಮತ್ತು ಎರಡು ಮಾಸ್ ಹಾಡುಗಳಿಗೆ ಭೀಮ್ಸ್ ಸಿಸಿಲಿಯೊ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಇವರೇ ಸರಿಯಾದ ಆಯ್ಕೆ ಎಂದು ಚಿತ್ರತಂಡದವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವಿಚಾರವನ್ನು ಮಹೇಶ್ ಬಾಬು ಮುಂದೆ ಇಡಲಾಗಿದೆ ಎನ್ನಲಾಗಿದೆ. ಅಂತೂ ಚಿತ್ರ 2024ರ ಜನವರಿ 13ರಂದು ತೆರೆ ಕಾಣುವುದು ಪಕ್ಕಾ ಆಗಿದೆ.
ಇದನ್ನೂ ಓದಿ: Mahesh Babu: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಕುರಿತ ಇಂಟ್ರೆಸ್ಟಿಂಗ್ ವಿಚಾರಗಳು