ರೋಮ್: 1950 ಮತ್ತು 1960ರ ದಶಕದಲ್ಲಿ ತಮ್ಮ ಮಾದಕ ಮೈಮಾಟದ ಮೂಲಕವೇ ಖ್ಯಾತಿ ಗಳಿಸಿದವರು ಇಟಾಲಿಯನ್ ನಟಿ ಗಿನಾ ಲೊಲೋ ಬ್ರಿಗಿಡಾ. ಇದೀಗ ತಮ್ಮ 95ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸಿನಿಮಾ, ಸಿನಿಮೇತರ ಸುದ್ದಿಗಳಿಂದಲೂ ಇವರು ಸಾಕಷ್ಟು ಸುದ್ದಿಯಲ್ಲಿ ಇರುತ್ತಿದ್ದರು. ಇವರನ್ನು ಜಗತ್ತಿನ ಅತ್ಯಂತ ಸುಂದರ ಮಹಿಳೆ ಎಂದೂ ಬಣ್ಣಿಸಲಾಗಿತ್ತು.
ಗಿನಾಗೂ ಭಾರತಕ್ಕೂ ಇದೆ ಸಂಬಂಧ: 20ನೇ ಶತಮಾನದಲ್ಲಿ ಮೋನಾಲಿಸಾನಂತಹ ಜಗತ್ತಿನ ಸುಂದರ ಮಹಿಳೆಯೆಂದು ಕರೆಯಲಾದ ಗಿನಾ ಲೊಲೋ ಬ್ರಿಗಿಡಾ ಅವರನ್ನು ಲಾ ಲೊಲೊ ಎಂಬ ನಿಕ್ ನೇಮ್ನಿಂದಲೂ ಕರೆಯಲಾಗುತ್ತಿತ್ತು. ಇದೇ ಹೆಸರನ್ನು ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಕೂಡ ಅಳವಡಿಸಿಕೊಂಡಿದ್ದರು. ಗಿನಾ ಅವರ ಅತ್ಯಂತ ಪ್ರಖ್ಯಾತ ಸಿನಿಮಾವಾದ 1961ರಲ್ಲಿ ಕಂ ಸೆಪ್ಟೆಂಬರ್ ಭಾರತೀಯರ ಮೆಚ್ಚುಗೆ ಗಳಿಸಿತ್ತು. ಇಂದಿಗೂ ಈ ಚಿತ್ರದ ಹಾಡುಗಳನ್ನು ಮದುವೆಗಳನ್ನು ಕೇಳಬಹುದು. ಅಂತಾರಾಷ್ಟ್ರೀಯ ಹಿಟ್ ನೀಡುವ ಮೂಲಕ ಅವರು ಬಾಲಿವುಡ್ನ ಭಾಗವಾಗಿದ್ದರು. 1977ರಲ್ಲಿ ಕೃಷ್ಣಾ ಶಾ ಅವರ ಶಾಲಿಮಾರ್ ಚಿತ್ರದ ಪ್ರಮುಖ ಪಾತ್ರಕ್ಕೆ ಗಿನಾ ಹೆಸರು ಕೇಳಿ ಬಂದಿತ್ತು. ಆದರೆ, ಬಾಂಬೆ ಟರ್ಫ್ ಕ್ಲಬ್ನಲ್ಲಿ ನಡೆದ ಮುಹೂರ್ತದ ವೇಳೆ ಹೆಚ್ಚು ಧೈರ್ಯ ಪ್ರದರ್ಶಿಸಿದ ಜೀನತ್ ಅಮಾನ್ ಕಾಣಿಸಿಕೊಂಡ ಬಳಿಕ ಇವರು ಚಿತ್ರದಿಂದ ಹೊರನಡೆದಿದ್ದರು.
![ಗಿನಾ ಲೊಲೋ ಬ್ರಿಗಿಡಾ](https://etvbharatimages.akamaized.net/etvbharat/prod-images/ssss_1701newsroom_1673927422_829.jpg)
ಗಿನಾ ಅದ್ಭುತ ಪ್ರದರ್ಶನಗಳು: ತಮ್ಮ ಸಮಕಾಲೀನ ನಟಿಯರಾದ ಸೋಫಿಯಾ ಲೊರೆನ್ ಅಥವಾ ಇತರರಿಗಿಂತ ಗಿನಾ ಉತ್ತಮ ಪಾತ್ರಗಳಿಂದ ಗಮನ ಸೆಳೆಯಲಿಲ್ಲ. ಐದು ದಶಕಗಳ ತಮ್ಮ ವೃತ್ತಿ ಜೀವನದಲ್ಲಿ ಕೇವಲ 70 ಚಿತ್ರಗಳಲ್ಲಿ ಇವರು ಬಣ್ಣ ಹಚ್ಚಿದ್ದರು. ಈ ಪೈಕಿ ರಾಕ್ ಹುಡ್ಸನ್ ಅವರೊಟ್ಟಿಗಿನ ಕಂ ಸೆಪ್ಟೆಂಬರ್, ಸೊಲೊಮಾನ್ ಮತ್ತು ಶೆಬಾ ಅತ್ಯುತ್ತಮ ಸಿನಿಮಾಗಳಾಗಿದ್ದವು. ಶೆಬಾ ಚಿತ್ರದ ಬಳಿಕ ಅವರ ಪ್ರಸಿದ್ಧ ವೇಶ್ಯೆಯ ಪಾತ್ರದಿಂದ ತೊಂದರೆಗೆ ಒಳಗಾದರು. ಇಂತಹ ಪಾತ್ರಗಳು ಪ್ರತಿಕೂಲ ಪರಿಣಾ ಬೀರುತ್ತವೆ ಎಂದು ಗಿನಾ ತಿಳಿಸಿದ್ದರು.
![ಗಿನಾ ಲೊಲೋ ಬ್ರಿಗಿಡಾ](https://etvbharatimages.akamaized.net/etvbharat/prod-images/ap23016435658096_1701newsroom_1673927422_1013.jpg)
ಮಿಸ್ ಇಟಾಲಿಯನ್ ರನ್ನರ್ ಅಪ್: 1927ರಲ್ಲಿ ಜುಲೈ 4ರಂದು ರೋಮ್ನ ಸುಬಿಕೊ ಬಳಿಕ ಗ್ರಾಮವೊಂದರಲ್ಲಿ ಗಿನಾ ಜನಿಸಿದ್ದರು. ನಾಲ್ಕು ಹೆಣ್ಣು ಮಕ್ಕಳಲ್ಲಿ ಎರಡನೇಯವರು ಗಿನಾ ಲೊಲೊ ಬ್ರಿಗಿಡಾ. 1945ರಲ್ಲಿ ಇಟಾಲಿಯನ್ ನಾಟಕಗಳಲ್ಲಿ ಸಣ್ಣ ಕಾಮಿಡಿ ಪಾತ್ರಗಳ ಮೂಲಕ ನಟನೆ ಆರಂಭಿಸಿದ್ದರು. 1947ರಲ್ಲಿ ಮಿಸ್ ಇಟಾಲಿಯನ್ ಸ್ಪರ್ಧೆಯ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು.
![ಗಿನಾ ಲೊಲೋ ಬ್ರಿಗಿಡಾ](https://etvbharatimages.akamaized.net/etvbharat/prod-images/ap23016450433455_1701newsroom_1673927422_551.jpg)
ಚಿತ್ರರಂಗದ ಪಯಣ: 1946ರ ಬಳಿಕ ಅನೇಕ ಇಟಾಲಿಯನ್ ಚಿತ್ರಗಳಲ್ಲಿ ನಟಿಸಿದ್ದರು. 1949ರಲ್ಲಿ ಬ್ರೈಡ್ ಕಾಂಟ್ ವೈಟ್, 1950ರಲ್ಲಿ ದಿ ಯಂಗ್ ಕರ್ಸೊ ಇವರ ಪ್ರಮುಖ ಸಿನಿಮಾಗಳು. 1952ರಲ್ಲಿ ಫ್ರೆಂಚ್ ಸ್ವಶ್ಬಕರ್ ಫನ್ಫ್ಯಾನ್ ಲಾ ಟುಲಿಪೆ, 1953ರ ಲವ್ ಅಂಡ್ ಡ್ರೀಮ್ಸ್ ಇವರಿಗೆ ಹೆಸರು ತಂದುಕೊಟ್ಟವು.
ಹಾಲಿವುಡ್ ನಿರಾಕರಿಸಿದ ಗಿನಾ: ಇಟಾಲಿಯನ್ ಚಿತ್ರದಲ್ಲಿ ಮಿಂಚಿದ್ದ ಗಿನಾರನ್ನು ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವಂತೆ ಕೇಳಲಾಗಿತ್ತು. ಆದರೆ, ಆಕೆ ಅಲ್ಲಿಗೆ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದರು. ಆದರೆ, ಯುರೋಪ್ನಲ್ಲಿ ಚಿತ್ರೀಕರಣಕ್ಕೆ ಸಮ್ಮತಿಸಿದ್ದರು. ಗಿನಾ ಅವರ ಮೊದಲ ಹಾಲಿವುಡ್ ಸಿನಿಮಾ ಬಿಟ್ ದ ಡೆವಿಲ್ ಆಗಿತ್ತು. ಎರ್ರೊಲ್ ಫ್ಲೆನ್ ಅವರ ಜೊತೆ ಕ್ರಾಸ್ಡ್ ಸ್ವರ್ಡ್ನಲ್ಲಿ ಕೂಡ ಈಕೆ ನಟಿಸಿ ಗಮನ ಸೆಳೆದಿದ್ದಾರೆ. ಕಂ ಸೆಪ್ಟೆಂಬರ್ ಚಿತ್ರ ಈಕೆಗೆ ಬಹು ಜನಪ್ರಿಯತೆ ತಂದು ಕೊಟ್ಟ ಸಿನಿಮಾ ಆಗಿತ್ತು. 1956ರಲ್ಲಿ ನೊಟ್ರೆ ಡ್ಯಾಮೆ, 1968ರಲ್ಲಿ ಮಿಸ್ ಕ್ಯಾಪ್ಬೆಲ್ಗಳಲ್ಲೂ ನಟಿಸಿದ್ದರು.
![ಗಿನಾ ಲೊಲೋ ಬ್ರಿಗಿಡಾ](https://etvbharatimages.akamaized.net/etvbharat/prod-images/ap23016450435747_1701newsroom_1673927422_736.jpg)
1970ರಲ್ಲಿ ತಮ್ಮ ವೃತ್ತಿಯಲ್ಲಿ ಕೊಂಚ ಹಿನ್ನಡೆ ಕಂಡ ಬಳಿಕ ಗಿನಾ ವಿಶ್ರಮಿಸಲಿಲ್ಲ. ಆಕೆಯನ್ನು ಶಿಲ್ಪಿಯಾಗಿ, ಫೋಟೋ ಜರ್ನಲಿಸ್ಟ್ ಆಗಿ ಹೊಸದಾಗಿ ರೂಪಿಸಿಕೊಂಡರು. ಫಿಡೆಲ್ ಕ್ಯಾಸ್ಟ್ರೋ ಅವರೊಂದಿಗೆ ವಿಶೇಷ ಸಂದರ್ಶನದ ಅವಕಾಶ ಪಡೆದರು. ಸಾಲ್ವಡಾರ್ ಡಾಲಿ, ಹೆನ್ರಿ ಕಿಸ್ಸಿಂಜರ್, ಪಾಲ್ ನ್ಯೂಮನ್ ಮತ್ತು ಆಡ್ರೆ ಹೆಪ್ಬರ್ನ್ ಅವರನ್ನು ಸ್ಕೂಪಿಂಗ್ ಫೋಟೋಗಳ್ನು ಕ್ಲಿಕ್ ಮಾಡಿ ಹೆಸರು ಮಾಡಿದ್ದರು.
ತನ್ನಿಚ್ಚೆಯಂತೆ ಜೀವಿಸಿದಳು: ನನಗೆ ಇಷ್ಟವಾದುದನ್ನು ನಾನೀಗ ಮಾಡುತ್ತೇನೆ. ಎಲ್ಲದಕ್ಕೂ ನನ್ನ ಬಳಿ ಸಮಯವಿಲ್ಲ ಎಂದಿದ್ದರು ಗಿನಾ. 21ನೇ ಶತಮಾನದಲ್ಲಿ ಸದಾ ಹೆಡ್ಲೈನ್ ಮೂಲಕ ಸುದ್ದಿಯಾಗಿದ್ದ ಇವರು 2006ರಲ್ಲಿ ಅಂದರೆ ತಮ್ಮ 76ನೇ ವಯಸ್ಸಿನಲ್ಲಿ 45 ವರ್ಷದ ಸ್ಪಯಾನಿಶ್ ಉದ್ಯಮಿ ಜವೀರ್ ರಿಗ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಕೆಲವು ವರ್ಷದ ಬಳಿಕ ಆತನ ವಿರುದ್ಧ ವಂಚನೆ ಮೊಕದ್ದಮೆ ಹೂಡಿದ್ದರು. ತಾವು ಯುವಕರಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದ ಬಗ್ಗೆ ಗಿನಾ ಹೇಳಿಕೊಂಡಿದ್ದರು.
![ಗಿನಾ ಲೊಲೋ ಬ್ರಿಗಿಡಾ](https://etvbharatimages.akamaized.net/etvbharat/prod-images/ap23016497781834_1701newsroom_1673927422_216.jpg)
ಇದನ್ನೂ ಓದಿ: ಗುಟ್ಟಾಗಿ ರಾಕಿ ಭಾಯ್ ಥಾಯ್ಲೆಂಡ್ಗೆ ಹೋಗಿದ್ದು ಏಕೆ?: ಪ್ಯಾನ್ ವರ್ಲ್ಡ್ ಚಿತ್ರಕ್ಕೆ ರೆಡಿಯಾಗುತ್ತಿದ್ದಾರಾ ಯಶ್