ETV Bharat / entertainment

ನಟ ಪ್ರಜ್ವಲ್ ದೇವರಾಜ್ ಜನ್ಮದಿನ: ಗಣ ಟೀಸರ್​ ಅನಾವರಣ - Prajwal Devaraj upcoming movie

ಇಂದು ನಟ ಪ್ರಜ್ವಲ್ ದೇವರಾಜ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ಹೊಸ ಸಿನಿಮಾ ಗಣ ಟೀಸರ್​ ಬಿಡುಗಡೆಯಾಗಿದೆ.

Gana Teaser Unveiled
ಗಣ ಟೀಸರ್​ ಅನಾವರಣ
author img

By

Published : Jul 4, 2023, 10:09 AM IST

ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವವರು ನಟ ಪ್ರಜ್ವಲ್ ದೇವರಾಜ್. 2007ರಿಂದ ಚಿತ್ರರಂಗದಲ್ಲಿ ಸಿನಿಮಾ ವೃತ್ತಿ ಜೀವನ ಆರಂಭಿಸಿ ತಮ್ಮದೇ ಅಭಿಮಾನಿ ಬಳಗ ಸಂಪಾದಿಸಿರುವ ಇವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 36ನೇ ವರ್ಷಕ್ಕೆ ಕಾಲಿಡುತ್ತಿರುವ ನಟನಿಗೆ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಸೇರಿದಂತೆ ಸಿನಿ ಸಹುದ್ಯೋಗಿಗಳು ಶುಭಾಶಯ ಕೋರುತ್ತಿದ್ದಾರೆ.

ಗಣ ಟೀಸರ್​ ಅನಾವರಣ: ಪ್ರಜ್ವಲ್ ದೇವರಾಜ್ ಅವರು ಲವ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್, ಥ್ರಿಲ್ಲರ್ ಹೀಗೆ ನಾನಾ ಬಗೆಯ ಪಾತ್ರಗಳ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಅವರ ನಟನೆಯ ಕೆಲವು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಹಲವು ಚಿತ್ರೀಕರಣ ಹಂತದಲ್ಲಿವೆ. ಅಲ್ಲದೇ ಮೊದಲ ಪ್ಯಾನ್​ ಇಂಡಿಯಾ ಚಿತ್ರವೊಂದಕ್ಕೆ ಗ್ರೀನ್​ ಸಿಗ್ನಲ್​ ಕೂಡ ಕೊಟ್ಟಿದ್ದಾರೆ. ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯ ಗಣ ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ. ಇಂದು ನಟನ ಜನ್ಮದಿನವಾಗಿದ್ದು ಚಿತ್ರತಂಡ ಗಣ ಟೀಸರ್​ ಅನಾವರಣಗೊಳಿಸಿ ವಿಶೇಷವಾಗಿ ಶುಭ ಕೋರಿದೆ.

  • " class="align-text-top noRightClick twitterSection" data="">

ಗಣ ಚಿತ್ರತಂಡ: ಹರಿಪ್ರಸಾದ್ ಜಕ್ಕ ಆ್ಯಕ್ಷನ್​ ಕಟ್​​ ಹೇಳಿರುವ ಸಿನಿಮಾವನ್ನು ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ನಿರ್ಮಾಣ ಮಾಡಿದ್ದಾರೆ. ಜೈ ಆನಂದ್ ಕ್ಯಾಮರಾ ವರ್ಕ್, ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಎಡಿಟಿಂಗ್​, ಸತೀಶ್ ಎ. ಕಲಾ ನಿರ್ದೇಶನ ಸಿನಿಮಾಗಿದ್ದು ಡಿ.ಜೆ ಕ್ರಿಯೇಟಿವ್ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಯಶ ಶಿವಕುಮಾರ್​, ವೇದಿಕ ಕುಮಾರ್​ ಸೇರಿದಂತೆ ಹಲವರು ನಟಿಸಿದ್ದಾರೆ. ಬೆಂಗಳೂರು, ಮೈಸೂರಿನಲ್ಲಿ 80 ದಿನಗಳ ಕಾಲ ಶೂಟಿಂಗ್​​ ನಡೆದಿದಿದೆ. ಜೂನ್​ ಹೊತ್ತಿಗೆ ಚಿತ್ರೀಕರಣ ಪೂರ್ಣಗೊಂಡಿತ್ತು. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್​​ ಕೆಲಸದಲ್ಲಿ ಬ್ಯುಸಿಯಾಗಿದ್ದು ಸಿನಿಮಾ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: Photos: 'ವಾರ್ಷಿಕ ಭತ್ತದ ಹಬ್ಬ' ಆಚರಣೆ.. ಮಣ್ಣನ್ನು ಪರಸ್ಪರ ಲೇಪಿಸಿ ಖುಷಿಪಟ್ಟ ಮಕ್ಕಳು

ಹಿರಿಯ ನಟ ದೇವರಾಜ್​ ಮತ್ತು ಚಂದ್ರಲೇಖಾ ದಂಪತಿಯ ಪುತ್ರನಾಗಿ 1987ರ ಜುಲೈ 4ರಂದು ಬೆಂಗಳೂರಿನಲ್ಲಿ ಪ್ರಜ್ವಲ್ ದೇವರಾಜ್ ಜನಿಸಿದರು. ಪ್ರಣಮ್​ ಇವರ ಸಹೋದರ. ಮಾಡೆಲ್, ನಟಿ ರಾಗಿಣಿ ಇವರ ಪತ್ನಿ. 2007ರಲ್ಲಿ ಸಿಕ್ಸರ್​ ಸಿನಿಮಾ ಲೋಕಕ್ಕೆ ಕಾಲಿಟ್ಟ ಇವರು ಗೆಳೆಯ, ಗಂಗೆ ಬಾರೆ ತುಂಗೆ ಬಾರೆ, ಮೆರವಣಿಗೆ, ಜೀವ, ಗುಲಾಮ, ಕೆಂಚ, ನನ್ನವನು, ಕೋಟೆ, ಮುರುಳಿ ಮೀಟ್ಸ್ ಮೀರಾ, ಭದ್ರಾ, ಸಾಗರ್​​, ಗಲಾಟೆ, ಸವಾಲ್​​, ಜಂಬೂ ಸವಾರಿ, ನೀನಾದೆ ನಾ, ಅರ್ಜುನ, ಜೆಂಟಲ್​ ಮ್ಯಾನ್​ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಶೂಟಿಂಗ್​ ಸೆಟ್​ನಿಂದ ಅಂದದ ಫೋಟೋ ಹಂಚಿಕೊಂಡ ನಟಿ ಮಾಳವಿಕಾ ಮೋಹನನ್​: ಸುಂದರ ಲೋಕದ ಸುಂದರಿ ಎಂದ ನೆಟಿಜನ್​

ಪ್ರಜ್ವಲ್ ದೇವರಾಜ್ ಮೊದಲ ಬಾರಿಗೆ ಬಿಗ್ ಬಜೆಟ್​ ಪ್ಯಾನ್ ಇಂಡಿಯಾ ಸಿನಿಮಾ "ಜಾತರೆ"ಯಲ್ಲಿ ನಟಿಸಲು ಸಜ್ಜಾಗಿದ್ದಾರೆ. ವರ್ಧಮಾನ್ ಫಿಲಂಸ್ ಹಾಗೂ ಲೋಟಸ್ ಎಂಟರ್​ಟೈನ್​​ಮೆಂಟ್ಸ್ ಮೂಲಕ ಗೋವರ್ಧನ್ ರೆಡ್ಡಿ ಅವರು ನಿರ್ಮಿಸಲಿರುವ ಜಾತರೆ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ 5 ಭಾಷೆಗಳಲ್ಲಿ ಮೂಡಿಬರಲಿದೆ. ಇದೇ ಸಾಲಿನ ಆಗಸ್ಟ್​ನಲ್ಲಿ ಚಿತ್ರೀಕರಣ ಶುರು ಮಾಡಿ​​, ಬರುವ ಜನವರಿ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.