ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ರೊಮ್ಯಾಂಟಿಕ್ ಸಿನಿಮಾ ಗಾಳಿಪಟ 2 ನಾಳೆ ಬಿಡುಗಡೆಯಾಗಲಿದೆ. ಈ ಸಿನಿಮಾದ ಬಗ್ಗೆ ನಟ ಗಣೇಶ್ ಈಟಿವಿ ಭಾರತ ಜೊತೆ ಮಾತನಾಡಿದ್ದು, ಗಾಳಿಪಟ ಅಂದಾಕ್ಷಣ ಬಾಲ್ಯ ಹಾಗೂ ಕಾಲೇಜು ದಿನಗಳು ನೆನಪಾಗುತ್ತವೆ. ಕಾಲೇಜು ದಿನಗಳಲ್ಲಿ ಊರು ಹಾಗು ದೊಡ್ಡ ಗುಡ್ಡದ ಮೇಲೆ ಗಾಳಿಪಟ ಹಾರಿಸೋದು ತುಂಬಾ ಮಜವಾಗಿರುತ್ತಿತ್ತು. ನನಗೆ ಗಾಳಿಪಟ ಅಂದ್ರೆ ಸ್ವಾತಂತ್ರ್ಯ ಅಂತಾರೆ ಅವರು.
ಪ್ರೀತಿ, ಕೋಪದಿಂದ ಕಥೆ ಬರೆಯುವ ಭಟ್ರು: ಗಣೇಶ್ ಅವರು ಮುಂಗಾರು ಮಳೆಯಿಂದ ನಿರ್ದೇಶಕ ಯೋಗರಾಜ್ ಭಟ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡುತ್ತಾ, ಯೋಗರಾಜ್ ಭಟ್ ಬರೆಯೋದು ನನಗೆ ಬಹಳ ಇಷ್ಟ. ಯಾಕೆಂದರೆ ಭಟ್ರು ಬರೆಯುವ ಕಥೆ ಕಾಲೇಜು ಹುಡುಗ ಹಾಗೂ ಹುಡುಗಿಯರಿಗೆ ಕನೆಕ್ಟ್ ಆಗಿರುತ್ತದೆ. ಅದರಲ್ಲಿ ತಮಾಷೆ, ಎಮೋಷನ್ ಇರುತ್ತದೆ. ನನಗೋಸ್ಕರ ಬಹಳ ಪ್ರೀತಿ, ಕೋಪದಿಂದ ಬರೆಯುತ್ತಾರೆ. ಸಿನಿಮಾಕ್ಕಾಗಿ ಸಾಕಷ್ಟು ಬಾರಿ ನಾನು ಭಟ್ರು ಜಗಳ ಮಾಡಿಕೊಂಡು ಮುನಿಸಿಕೊಂಡಿದ್ದಿದೆ ಎಂದರು.
ರೊಮ್ಯಾಟಿಂಕ್ ಕಿಲಾಡಿಗಳು: ಗಾಳಿಪಟ 2 ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಗಣೇಶ್, ದಿಗಂತ್, ಪವನ್ ಕುಮಾರ್ ಸಖತ್ ಎಂಜಾಯ್ ಮಾಡ್ತಿದ್ದರಂತೆ. ಕುದುರೆಮುಖದಲ್ಲಿ 50 ದಿನ ಶೂಟಿಂಗ್ ನಡೆದಿತ್ತು. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಅವರು ರೊಮ್ಯಾಟಿಂಕ್ ಕಿಲಾಡಿಗಳು. ಅವರ ಆಸೆಗಳನ್ನು ಹಾಡಿನ ಮೂಲಕ ಹಾಡಿಸಿರುವ ರೊಮ್ಯಾಟಿಂಕ್ ಸಾಹಿತಿಗಳು ಎಂದು ಗಣೇಶ್ ತಮಾಷೆ ಮಾಡಿದರು.
ಇದನ್ನೂ ಓದಿ: ಹರ್ ಘರ್ ತಿರಂಗ ಅಭಿಯಾನದ ಮೂಲಕ ದೇಶದ ಧ್ವಜ ಹಿಡಿದಿರುವುದಕ್ಕೆ ಹೆಮ್ಮೆ ಇದೆ: ನಟ ಯಶ್
ಅನಂತ್ ನಾಗ್ ಸರ್ ಜೊತೆ ಅಭಿನಯಿಸಬೇಕೆಂದರೆ ತುಂಬಾನೇ ಕಲಿಯೋದು ಇರುತ್ತದೆ. ಅವರೆದುರು ನಟಿಸೋದು ಚಾಲೆಂಜಿಂಗ್ ಕೆಲಸ. ಕ್ಯಾಮರಾ ಹಿಂದೆ ನಾನು, ಭಟ್ರು ತುಂಬಾನೆ ತಮಾಷೆಯಾಗಿ ಇರ್ತೀವಿ. ನನ್ನ ಸಿನಿಮಾ ಕೆರಿಯರ್ನಲ್ಲಿ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿದೇಶದ 150 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗ್ತಿರೋದು ಇದೇ ಮೊದಲು. ಈಗಾಗಲೇ ಕರ್ನಾಟಕದಲ್ಲಿ ಪ್ರಿಮಿಯರ್ ಶೋಗೆ ಸಿಕ್ಕಿರುವ ರೆಸ್ಪಾನ್ಸ್ ಖುಷಿ ತಂದಿದೆ ಎಂದರು.